AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್ ಹಾಗೂ ಸುದೀಪ್ ಗೆಳೆತನ ಹೇಗಿತ್ತು? ಇಲ್ಲಿದೆ ಅಪರೂಪದ ವಿಚಾರ

ಸಣ್ಣ ವಯಸ್ಸಿನಿಂದ ಸುದೀಪ್ ಹಾಗೂ ಪುನೀತ್ ಪರಿಚಯ ಇತ್ತು. ಇಬ್ಬರು ಒಟ್ಟಾಗಿ ಬೆಳೆದು ಬಂದರು. ಇವರ ಮಧ್ಯೆ ಸಹೋದರತ್ವದ ಭಾವನೆ ಇತ್ತು. ಈ ಕಾರಣದಿಂದಲೇ ಅಪ್ಪುನ ಬಗ್ಗೆ ಸುದೀಪ್​ಗೆ ವಿಶೇಷ ಪ್ರೀತಿ ಇತ್ತು ಎನ್ನಬಹುದು. ‘ಯಾರೂ ದ್ವೇಷಿಸದೇ ಇರುವ ಕಲಾವಿದ ಎಂದರೆ ಅದು ಅಪ್ಪು’ ಎಂದು ಸುದೀಪ್ ಅವರು ಹೇಳಿದ್ದರು.

ಪುನೀತ್ ಹಾಗೂ ಸುದೀಪ್ ಗೆಳೆತನ ಹೇಗಿತ್ತು? ಇಲ್ಲಿದೆ ಅಪರೂಪದ ವಿಚಾರ
ಪುನೀತ್-ಸುದೀಪ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Oct 29, 2025 | 8:12 AM

Share

ಪುನೀತ್ ರಾಜ್​ಕುಮಾರ್ ನಿಧನ ಹೊಂದಿದ ಬಳಿಕ ಅತಿಯಾಗಿ ಬೇಸರ ಮಾಡಿಕೊಂಡವರು ಎಂದರೆ ಅದು ಸುದೀಪ್. ಅವರಿಗೆ ಅಪ್ಪು ಜೊತೆ ತುಂಬಾನೇ ಆಪ್ತತೆ ಇತ್ತು. ಈ ಗೆಳೆತನ ದಿನ ಕಳೆದಂತೆ ಗಟ್ಟಿ ಆಗುತ್ತಿರುವಾಗಲೇ ದೇವರು ಪುನೀತ್ ಅವರನ್ನು ಕರೆದುಕೊಂಡರು. ಪುನೀತ್ ನಮ್ಮನ್ನು ಅಗಲಿ ನಾಲ್ಕು ವರ್ಷಗಳು ಕಳೆದಿವೆ. ಈ ನಾಲ್ಕು ವರ್ಷಗಳಲ್ಲಿ ಏನೆಲ್ಲ ಆಯ್ತು ಎಂದು ಮತ್ತೆ ಹೇಳಬೇಕಿಲ್ಲ. ಪುನೀತ್​​ ಅವರನ್ನು ಅಭಿಮಾನಿಗಳು ಸಾಕಷ್ಟು ಮಿಸ್ ಮಾಡಿಕೊಂಡರು. ಸುದೀಪ್ ಕೂಡ ಅನೇಕ ವೇದಿಕೆ ಮೇಲೆ ಅಪ್ಪುನ ನೆನಪು ಮಾಡಿಕೊಂಡಿದ್ದಾರೆ. ಇವರ ಗೆಳೆತನದ ಬಗ್ಗೆ ನೋಡೋಣ.

ಸಣ್ಣ ವಯಸ್ಸಿನಿಂದ ಸುದೀಪ್ ಹಾಗೂ ಪುನೀತ್ ಪರಿಚಯ ಇತ್ತು. ಇಬ್ಬರು ಒಟ್ಟಾಗಿ ಬೆಳೆದು ಬಂದರು. ಇವರ ಮಧ್ಯೆ ಸಹೋದರತ್ವದ ಭಾವನೆ ಇತ್ತು. ಈ ಕಾರಣದಿಂದಲೇ ಅಪ್ಪುನ ಬಗ್ಗೆ ಸುದೀಪ್​ಗೆ ವಿಶೇಷ ಪ್ರೀತಿ ಇತ್ತು ಎನ್ನಬಹುದು. ‘ಯಾರೂ ದ್ವೇಷಿಸದೇ ಇರುವ ಕಲಾವಿದ ಎಂದರೆ ಅದು ಅಪ್ಪು’ ಎಂದು ಸುದೀಪ್ ಅವರು ಹೇಳಿದ್ದರು.

‘ಯಾವ ವಿಚಾರದಲ್ಲೂ ಕೆಟ್ಟವರೇ ಆಗದೆ, ಯಾವುದೇ ಹಗರಣದಲ್ಲಿ ಸಿಗದೇ ಇರುವವರು’ ಎಂದು ಪುನೀತ್ ಬಗ್ಗೆ ಸುದೀಪ್ ಹೇಳಿದ್ದರು. ಸುದೀಪ್ ಹಾಗೂ ಪುನೀತ್ ಅವರು ಸಣ್ಣ ವಯಸ್ಸಲ್ಲಿ ತೆಗೆದ ಫೋಟೋ ಒಂದು ಸದಾ ವೈರಲ್ ಆಗುತ್ತಾ ಇರುತ್ತದೆ. ಇದರಲ್ಲಿ ಇಬ್ಬರೂ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ
Image
ಸಾಯುವುದಕ್ಕೂ ಸರಿಯಾಗಿ ಒಂದು ವರ್ಷ ಮೊದಲು ಅಪ್ಪು ಮಾಡಿದ ಒಳ್ಳೆಯ ಕೆಲಸ ನೋಡಿ
Image
ಪುನೀತ್ ಪುಣ್ಯಸ್ಮರಣೆ; 4 ವರ್ಷಗಳ ಹಿಂದೆ ನಿಜಕ್ಕೂ ನಡೆದಿದ್ದೇನು?
Image
Shocking News: ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಹೊರ ನಡೆದ ಮಲ್ಲಮ್ಮ
Image
‘ಜಾನ್ವಿ ಗೆಳೆತನದಿಂದ ನನಗೆ ಕಳಂಕ ಬಂದಿದೆ’; ಬದಲಾದ ಅಶ್ವಿನಿ ಗೌಡ

ಪುನೀತ್ ಅವರನ್ನು ಸುದೀಪ್ ಮೊದಲು ನೋಡುವಾಗ ಅವರು ಸ್ಟಾರ್ ಆಗಿಬಿಟ್ಟಿದ್ದರು.. ‘ಭಾಗ್ಯವಂತ’ ಸಿನಿಮಾದ ಯಶಸ್ಸಿನ ಪ್ರವಾಸಕ್ಕೆಂದು ಪುನೀತ್ ರಾಜ್‌ಕುಮಾರ್ ಶಿವಮೊಗ್ಗಕ್ಕೆ ಬಂದಿದ್ದಾಗ ಪುನೀತ್ ಅವರನ್ನು ಸುದೀಪ್ ಮೊದಲು ನೋಡಿದ್ದರು. ಸುದೀಪ್ ತಂದೆ ಸಂಜೀವ್ ಸಿನಿಮಾ ರಂಗದಲ್ಲಿ ಪರಿಚಿತ ವ್ಯಕ್ತಿಯಾಗಿದ್ದರು. ಹೀಗಾಗಿ, ಪುನೀತ್ ಮತ್ತು ರಾಜ್ಕುಮಾರ್ ಸುದೀಪ್ ಮನೆಗೆ ಊಟಕ್ಕೆ ಬಂದರು. ಪುನೀತ್ ಹಾಗೂ ಸುದೀಪ್ ಒಂದೇ ವಯಸ್ಸಿನವರು. ಮೊದಲ ಭೇಟಿಯಲ್ಲಿಯೇ ಸ್ನೇಹಿತರಾದರು. ಸುದೀಪ್ ಆಟಿಕೆಗಳನ್ನು ನೋಡಿ ಅಪ್ಪು ಖುಷಿಪಟ್ಟರು.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ ಪುಣ್ಯಸ್ಮರಣೆ; ನಾಲ್ಕು ವರ್ಷಗಳ ಹಿಂದೆ ನಿಜಕ್ಕೂ ನಡೆದಿದ್ದೇನು?

ಪುನೀತ್ ರಾಜ್​ಕುಮಾರ್ ಅವರು ಇಂದು ನಮ್ಮ ಜೊತೆ ಇಲ್ಲ. ಆದರೆ, ಅವರು ಮಾಡಿ ಹೋದ ಕೆಲಸಗಳು ಹಾಗೆಯೇ ಉಳಿದುಕೊಂಡಿವೆ. ಇಂದು (ಅಕ್ಟೋಬರ್ 29) ಅವರ ನಾಲ್ಕನೇ ವರ್ಷದ ಪುಣ್ಯ ತಿಥಿ. ಹೀಗಾಗಿ, ಹಲವು ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ. ಪುನೀತ್ ಅವರು ಇಲ್ಲ ಎಂಬ ನೋವು ಎಂದಿಗೂ ಮರೆ ಆಗುವಂಥದ್ದಲ್ಲ. ಇನ್ನು ಸುದೀಪ್ ಸಿನಿಮಾ ವಿಚಾರಕ್ಕೆ ಬರೋದಾದರೆ ‘ಮ್ಯಾಕ್ಸ್’ ಸಿನಿಮಾ ಮೂಲಕ ದೊಡ್ಡ ಯಶಸ್ಸು ಕಂಡರು. ‘ಮಾರ್ಕ್’ ಸಿನಿಮಾ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಈ ಚಿತ್ರ ಡಿಸೆಂಬರ್​ನಲ್ಲಿ ರಿಲೀಸ್ ಆಗಲಿದೆ. ಇದರ ಜೊತೆಗೆ ‘ಬಿಲ್ಲ ರಂಗ ಭಾಷ’ ಚಿತ್ರದಲ್ಲೂ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ