UI Box Office Collection: ‘ಯುಐ’ ಸಿನಿಮಾದ ಸೋಮವಾರದ ಗಳಿಕೆ ಎಷ್ಟು? ‘ಮ್ಯಾಕ್ಸ್’ ಬಂದ ಬಳಿಕ ಮುಂದೇನು?
ಉಪೇಂದ್ರ ನಟನೆಯ ‘ಯುಐ’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಕ್ರಿಸ್‌ಮಸ್ ರಜೆ ಚಿತ್ರಕ್ಕೆ ಅನುಕೂಲಕರವಾಗಿದೆ. ಆದರೆ, ಬುಧವಾರ ಬಿಡುಗಡೆಯಾಗುವ ‘ಮ್ಯಾಕ್ಸ್’ ಚಿತ್ರದಿಂದ ಯುಐ ಚಿತ್ರದ ಗಳಿಕೆಯ ಮೇಲೆ ಪರಿಣಾಮ ಬೀರಬಹುದು. ಉಪೇಂದ್ರ ಅವರು ‘ಯುಐ’ ಮೂಲಕ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದಾರೆ.
ಉಪೇಂದ್ರ ನಟನೆಯ ‘ಯುಐ’ ಚಿತ್ರ ಸಾಕಷ್ಟು ನಿರೀಕ್ಚೆ ಮೂಡಿಸಿತ್ತು. ಈ ಚಿತ್ರ ಜನರಿಗೆ ಹೆಚ್ಚು ಇಷ್ಟ ಆಗಿದೆ. ಸಿನಿಮಾನ ನಾನಾ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ. ವೀಕೆಂಡ್ನಲ್ಲಿ ಸಿನಿಮಾ ಉತ್ತಮ ಗಳಿಕೆ ಮಾಡಿತ್ತು. ಅದೇ ರೀತಿ ವಾರದ ದಿನವೂ ಚಿತ್ರಕ್ಕೆ ಒಳ್ಳೆಯ ಕಲೆಕ್ಷನ್ ಆಗಿದೆ. ಸದ್ಯದ ವರದಿಯ ಪ್ರಕಾರ ಸಿನಿಮಾ 20 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಸೋಮವಾರದ (ಡಿಸೆಂಬರ್ 23) ಗಳಿಕೆ ಕೊಂಚ ಇಳಿಕೆ ಕಂಡಿದೆ.
‘ಯುಐ’ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಈ ನಿರೀಕ್ಷೆಯನ್ನು ಸಿನಿಮಾ ಹುಸಿ ಮಾಡಲಿಲ್ಲ. ಚಿತ್ರ ಭರ್ಜರಿ ಗಳಿಕೆ ಮಾಡಿತು. ಸಿನಿಮಾ ನೋಡಿದ ಅನೇಕರು ಮತ್ತೆ ಮತ್ತೆ ಚಿತ್ರಮಂದಿರಕ್ಕೆ ತೆರಳುತ್ತಿದ್ದಾರೆ. ಈ ಕಾರಣದಿಂದಲೇ ಸಿನಿಮಾದ ಗಳಿಕೆ ಹೆಚ್ಚುತ್ತಿದೆ. ಮೊದಲ ಮೂರು ದಿನ ಉತ್ತಮ ಗಳಿಕೆ ಮಾಡಿದ್ದ ಈ ಸಿನಿಮಾ ನಾಲ್ಕನೇ ದಿನ ಸ್ವಲ್ಪ ಡಲ್ ಹೊಡೆದಿದೆ.
ಮೊದಲ ವೀಕೆಂಡ್ನಲ್ಲಿ ಹೈಪ್ ಇರುವ ಚಿತ್ರಗಳು ಒಳ್ಳೆಯ ಗಳಿಕೆ ಮಾಡುತ್ತವೆ. ವಾರದ ಮೊದಲ ದಿನ ಸಿನಿಮಾ ಯಾವ ರೀತಿಯಲ್ಲಿ ಗಳಿಕೆ ಮಾಡುತ್ತವೆ ಅನ್ನೋದು ಮುಖ್ಯವಾಗುತ್ತದೆ. ಅದೇ ರೀತಿ ‘ಯುಐ’ ಸಿನಿಮಾ ಸೋಮವಾರ 2.50 ಕೋಟಿ ರೂಪಾಯಿಯಷ್ಟು ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 20.85 ಕೋಟಿ ರೂಪಾಯಿ ಆಗಿದೆ. ಭಾನುವಾರ ಸುಮಾರು 6 ಕೋಟಿ ರೂಪಾಯಿ ಗಳಿಕೆ ಆಗಿತ್ತು.
ಇದನ್ನೂ ಓದಿ: ‘ಯುಐ’ ಚಿತ್ರಕ್ಕೆ ಜಾಕ್ಪಾಟ್ ಗಳಿಕೆ; ಮೂರು ದಿನಕ್ಕೆ ದಾಖಲೆಯ ಕಲೆಕ್ಷನ್ ಮಾಡಿದ ಉಪ್ಪಿ ಸಿನಿಮಾ
ಸದ್ಯ ಎಲ್ಲ ಕಡೆಗಳಲ್ಲಿ ಕ್ರಿಸ್‌ಮಸ್ ರಜೆ ನಡೆಯುತ್ತಿದೆ. ಇದು ‘ಯುಐ’ ಚಿತ್ರಕ್ಕೆ ಸಹಕಾರಿ ಆಗಿದೆ. ಅದೇ ರೀತಿ, ಬುಧವಾರ (ಡಿಸೆಂಬರ್ 25) ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ರಿಲೀಸ್ ಆದ ಬಳಿಕ ‘ಯುಐ’ ಕಲೆಕ್ಷನ್ಗೆ ಕೊಂಚ ಹೊಡೆತ ಬೀಳುವ ಸಾಧ್ಯತೆ ಇದೆ. ಏಕೆಂದರೆ ಕರ್ನಾಟಕದಲ್ಲಿ ಒಂದಷ್ಟು ಶೋಗಳು ‘ಮ್ಯಾಕ್ಸ್’ ಪಾಲಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:03 am, Tue, 24 December 24