ಹೊಸ ವರ್ಷದ ಮೊದಲ ದಿನವೇ ದಾಖಲೆಯ ಗಳಿಕೆ ಮಾಡಿದ ‘ಮ್ಯಾಕ್ಸ್’; ಮಂಕಾದ ‘ಯುಐ’

‘ಮ್ಯಾಕ್ಸ್’ ಚಿತ್ರ ಹೊಸ ವರ್ಷದಲ್ಲಿ ಅದ್ಭುತ ಗಳಿಕೆ ಮಾಡಿದೆ. ‘ಯುಐ’ ಚಿತ್ರದ ಗಳಿಕೆ ಕಡಿಮೆಯಾಗಿದೆ. ‘ಮ್ಯಾಕ್ಸ್’ ಚಿತ್ರದ ಜನಪ್ರಿಯತೆ ಹೆಚ್ಚಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದರಿಂದಾಗಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆಯಾಗಿದೆ. 2024ರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ.

ಹೊಸ ವರ್ಷದ ಮೊದಲ ದಿನವೇ ದಾಖಲೆಯ ಗಳಿಕೆ ಮಾಡಿದ ‘ಮ್ಯಾಕ್ಸ್’; ಮಂಕಾದ ‘ಯುಐ’
ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on:Jan 02, 2025 | 10:04 AM

‘ಮ್ಯಾಕ್ಸ್’ ಸಿನಿಮಾದ ಅಬ್ಬರ ಜೋರಾಗಿದೆ. ಹೊಸ ವರ್ಷದ ಸಂದರ್ಭದಲ್ಲಿ ಈ ಚಿತ್ರ ಭರ್ಜರಿ ಗಳಿಕೆ ಮಾಡಿದೆ. ಈ ಚಿತ್ರದ ಅಬ್ಬರದ ಗಳಿಕೆ ಮಧ್ಯೆ ‘ಯುಐ’ ಚಿತ್ರದ ಕಲೆಕ್ಷನ್ ತಗ್ಗಿದೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಯಾವುದೇ ದೊಡ್ಡ ಸಿನಿಮಾಗಳೂ ಇಲ್ಲ. ಇದು ‘ಮ್ಯಾಕ್ಸ್’ ಚಿತ್ರದ ಬಾಕ್ಸ್ ಆಫೀಸ್​ ಗಳಿಕೆ ಏರಿಕೆ ಕಾಣಲು ಸಹಕಾರಿ ಆಗಲಿದೆ. ಈ ಚಿತ್ರದ ಒಟ್ಟಾರೆ ಗಳಿಕೆ ಎಷ್ಟಾಗಲಿದೆ ಎಂಬ ಕುತೂಹಲ ಮೂಡಿದೆ.

ಸುದೀಪ್ ಅವರು ಕೇವಲ ಆ್ಯಕ್ಷನ್ ಸಿನಿಮಾಗಳ ಮೂಲಕ ಮಿಂಚಿದ್ದು ಕಡಿಮೆ. ಅವರ ಸಿನಿಮಾಗಳಲ್ಲಿ ಹಾಸ್ಯ, ರೊಮ್ಯಾನ್ಸ್ ಎಲ್ಲವೂ ಇರುತ್ತಿತ್ತು. ಆದರೆ, ‘ಮ್ಯಾಕ್ಸ್’ ಚಿತ್ರ ಔಟ್ ಆ್ಯಂಡ್ ಔಟ್ ಮಾಸ್ ಮಸಾಲ ಊಟವನ್ನು ಅಭಿಮಾನಿಗಳಿಗೆ ಉಣಬಡಿಸಿದೆ. ಇದು ಫ್ಯಾನ್ಸ್​ಗೆ ಥ್ರಿಲ್ ನೀಡಿದೆ. ಫ್ಯಾನ್ಸ್ ಮಾತ್ರವಲ್ಲದೆ ಸಿನಿಪ್ರಿಯರು ಈ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ಈ ಕಾರಣದಿಂದಲೇ ಸಿನಿಮಾ ಯಶಸ್ಸು ಕಂಡಿದೆ.

‘ಮ್ಯಾಕ್ಸ್’ ಸಿನಿಮಾ ಮೊದಲ ವಾರ ಅದ್ದೂರಿ ಗಳಿಕೆ ಮಾಡಿತು. 2024ರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಯಿತು. 2025ರಲ್ಲೂ ಸಿನಿಮಾ ದಾಖಲೆ ಬರೆಯುವ ಸಾಧ್ಯತೆ ಇದೆ. ಹೊಸ ವರ್ಷದ ಮೊದಲ ದಿನ (ಜನವರಿ 1) ಈ ಚಿತ್ರ 4.15 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 36 ಕೋಟಿ ರೂಪಾಯಿ ಸಮೀಪಿಸಿದೆ ಎಂದು sacnilk ವರದಿ ಮಾಡಿದೆ.

ಇದನ್ನೂ ಓದಿ: ‘ಸರಿಗಮಪ’ ವೇದಿಕೆ ಮೇಲೆ ಸುದೀಪ್​ಗಾಗಿ ಕವನ ಹೇಳಿದ ವಿಜಯ್ ಪ್ರಕಾಶ್; ಆ ಸಾಲುಗಳು ನಿಮಗೂ ಇಷ್ಟ ಆಗುತ್ತವೆ

ಅತ್ತ ಉಪೇಂದ್ರ ನಟನೆಯ ‘ಯುಐ’ ಸಿನಿಮಾದ ಗಳಿಕೆ ಕೊಂಚ ತಗ್ಗಿದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ 30 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇದೆ. ಆರಂಭದ ವಾರದಲ್ಲಿ ಉತ್ತಮ ಗಳಿಕೆ ಮಾಡಿದ ಈ ಚಿತ್ರ ಈಗ ಡಲ್ ಕಲೆಕ್ಷನ್ ಮಾಡುತ್ತಿದೆ. ಕೆಲವರಿಗೆ ಈ ಚಿತ್ರ ಇಷ್ಟ ಆಗಿಲ್ಲ. ಬುಕ್​ ಮೈ ಶೋನಲ್ಲಿ ‘ಯುಐ’ ಚಿತ್ರಕ್ಕಿಂತ ‘ಮ್ಯಾಕ್ಸ್’ ಚಿತ್ರಕ್ಕೆ ಹೆಚ್ಚಿನ ರೇಟಿಂಗ್ ಪಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:59 am, Thu, 2 January 25