ಕ್ಷುದ್ರ ಶಕ್ತಿಯ ಎದುರು ರುದ್ರ ಶಕ್ತಿಯ ಸಮರ; ‘ಪಿನಾಕ’ ಚಿತ್ರದಲ್ಲಿ ಗಣೇಶ್ಗೆ ಹಿಂದೆಂದೂ ನೋಡಿರದ ಗೆಟಪ್
ನಟ ಗಣೇಶ್ ಅವರು 'ಪಿನಾಕ' ಎಂಬ ಹೊಸ ಚಿತ್ರದ ಮೂಲಕ ಅತೀಂದ್ರಿಯ ಶಕ್ತಿಯ ಕಥೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಧನಂಜಯ್ ನಿರ್ದೇಶನ ಮಾಡುತ್ತಿದ್ದಾರೆ. ಪುರಾಣ ಮತ್ತು ಇತಿಹಾಸದ ಮಿಶ್ರಣದ ಈ ಚಿತ್ರದಲ್ಲಿ ಹಾಸ್ಯ ಮತ್ತು ರೋಮಾಂಚಕ ಅಂಶಗಳಿವೆ.
ನಟ ಗಣೇಶ್ ಅವರು ರೊಮ್ಯಾಂಟಿಕ್ ಚಿತ್ರಗಳ ಮೂಲಕ ಹೆಚ್ಚು ಗಮನ ಸೆಳೆದವರು. ಅವರು ಸಿನಿಮಾಗಳ ಮೂಲಕ ನಗಿಸಿದ್ದಾರೆ, ಅಳಿಸಿದ್ದಾರೆ, ಭಾವನಾತ್ಮಕವಾಗಿ ಸೆಳೆದುಕೊಂಡಿದ್ದಾರೆ. ಹಾಡುಗಳ ಮೂಲಕ ಮನಸೂರೆಗೊಂಡಿದ್ದಾರೆ. ಆದರೆ, ಪ್ರೇಕ್ಷಕರನ್ನು ಭಯ ಬೀಳಿಸುವ ಕೆಲಸ ಅವರಿಂದ ಆಗಿರಲಿಲ್ಲ. ಈಗ ಅವರ ಹೊಸ ಸಿನಿಮಾ ಅನೌನ್ಸ್ ಮಾಡಿದ್ದು, ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಪಿನಾಕ’ ಎಂಬ ಶೀರ್ಷಿಕೆ ಇಡಲಾಗಿದೆ.
ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಇತ್ತೀಚೆಗೆ ಗಣೇಶ್ ಜೊತೆ ಸಿನಿಮಾ ಮಾಡುವ ಬಗ್ಗೆ ಘೋಷಣೆ ಮಾಡಿತ್ತು. ಈಗ ಈ ಚಿತ್ರದ ಟೈಟಲ್ ಹಾಗೂ ಟೀಸರ್ ರಿಲೀಸ್ ಆಗಿದೆ. ಈ ಸಂಸ್ಥೆ ನಿರ್ಮಿಸುತ್ತಿರುವ 49ನೇ ಸಿನಿಮಾ ಇದಾಗಿದ್ದು, ಕನ್ನಡದಲ್ಲಿ ಇದು ಸಂಸ್ಥೆಯ ಎರಡನೇ ಪ್ರಯತ್ನ. ಈ ಚಿತ್ರಕ್ಕೆ ಧನಂಜಯ್ ನಿರ್ದೇಶನ ಮಾಡುತ್ತಿದ್ದಾರೆ. ಕೊರಿಯೋಗ್ರಾಫರ್ ಆಗಿ ಹೆಸರು ಮಾಡಿರೋ ಅವರು ಈಗ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ.
ಈ ಚಿತ್ರದ ಟೀಸರ್ ನೋಡಿದ ಕೆಲವರಿಗೆ ಗಣೇಶ್ ಮಾಟಗಾರನಂತೆಯೂ ಇನ್ನೂ ಕೆಲವರಿಗೆ ಅಘೋರಿಯಂತೆಯೂ ಕಾಣಿಸುತ್ತಾರೆ. ಆದರೆ, ಸಿನಿಮಾದಲ್ಲಿ ಇರೋದೇ ಬೇರೆ ಅನ್ನೋದು ಗಣೇಶ್ ಅಭಿಪ್ರಾಯ. ಸದ್ಯ ಸಿನಿಮಾಗೆ ಕಥೆ-ಚಿತ್ರಕಥೆ ಪೂರ್ಣಗೊಂಡಿದ್ದು, ಫೆಬ್ರವರಿಯಲ್ಲಿ ಶೂಟಿಂಗ್ ಆರಂಭ ಆಗಲಿದೆ. ‘ಕ್ಷುದ್ರ ಶಕ್ತಿಯ ಎದುರು ರುದ್ರ ಶಕ್ತಿಯ ಸಮರ’ ಎಂಬ ಸಾಲು ಟೀಸರ್ನಲ್ಲಿ ಬರುತ್ತದೆ. ಸಿನಿಮಾದಲ್ಲಿಯೂ ರುದ್ರ ಮತ್ತು ಕ್ಷುದ್ರದ ನಡುವಿನ ಸಂಘರ್ಷವಿದೆ ಎನ್ನುತ್ತಾರೆ ಗಣೇಶ್.
Here is the Title Teaser of #Pinaka Out Now 🏹
Watch here ▶️ https://t.co/L1E9rGfwh1
Staring Golden Star @Official_Ganesh in a spine chilling avatar ❤🔥
Produced by @vishwaprasadtg & #KrithiPrasad under @peoplemediafcy Directed by #Dhananjaya@vivekkuchibotla @dophari… pic.twitter.com/yJffk1jwDh
— People Media Factory (@peoplemediafcy) January 2, 2025
‘ಪಿನಾಕ’ ಪುರಾಣ ಮತ್ತು ಇತಿಹಾಸದ ಮಿಶ್ರಣದ ಕಥೆ ಹೊಂದಿದೆ. ಗಣೇಶ್ ಅವರಿಗೆ ರೊಮ್ಯಾಂಟಿಕ್ ಹೀರೋ ಪಾತ್ರಗಳನ್ನು ಮಾಡಿ ಅವರಿಗೆ ಏಕತಾನತೆ ಕಾಡಿತ್ತು. ಆಗ ಅವರಿಗೆ ಸಿಕ್ಕಿದ್ದು ಈ ಕಥೆ. ಈ ಚಿತ್ರದಲ್ಲಿ ಗಣೇಶ್ ಅವರಿಂದ ಬೇರೆಯದನ್ನೇ ನಿರೀಕ್ಷಿಸಬಹುದಾಗಿದೆ.
ಇದನ್ನೂ ಓದಿ: ಗಣೇಶ್ ಜೊತೆ ಕೈ ಜೋಡಿಸಿದ ತೆಲುಗು ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’
ಈ ಚಿತ್ರಕ್ಕೆ ವಿಶ್ವಪ್ರಸಾದ್ ನಿರ್ಮಾಣ ಮಾಡಿದ್ದಾರೆ. ಅತೀಂದ್ರೀಯ ಶಕ್ತಿ ಮತ್ತು ಆಧ್ಯಾತ್ಮವನ್ನು ಸೇರಿಸಿ ಕಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಚಿತ್ರದಲ್ಲಿ ಹಾಸ್ಯ, ಸೆಂಟಿಮೆಂಟ್ ಕೂಡ ಇರಲಿದೆಯಂತೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಮೊದಲು ‘ಕಾರ್ತಿಕೇಯ 2’, ‘ಓ ಬೇಬಿ’, ‘ಧಮಾಕಾ’ ರೀತಿಯ ಹಿಟ್ ಚಿತ್ರಗಳನ್ನು ನೀಡಿದೆ. ‘ಪಿನಾಕ’ ಕನ್ನಡದ ಜೊತೆ ತೆಲುಗಿನಲ್ಲೂ ಮೂಡಿಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.