ಗಣೇಶ್ ಜೊತೆ ಕೈ ಜೋಡಿಸಿದ ತೆಲುಗು ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’

‘ಗೋಲ್ಡನ್‌ ಸ್ಟಾರ್‌’ ಗಣೇಶ್ ಅವರು ಟಾಲಿವುಡ್​ನ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಪ್ರೊಡಕ್ಷನ್ ಹೌಸ್ ಜೊತೆ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ಅದ್ದೂರಿಯಾಗಿ ನಿರ್ಮಾಣ ಆಗಲಿದ್ದು, ಹೊಸ ವರ್ಷದ ಹೊಸ್ತಿಲಲ್ಲಿ ಈ ಸಿನಿಮಾ ಅನೌನ್ಸ್ ಆಗಿದೆ. ನೃತ್ಯ ನಿರ್ದೇಶಕ ಧನಂಜಯ್‌ ಅವರು ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ.

ಗಣೇಶ್ ಜೊತೆ ಕೈ ಜೋಡಿಸಿದ ತೆಲುಗು ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’
Golden Star Ganesh
Follow us
ಮದನ್​ ಕುಮಾರ್​
|

Updated on: Dec 27, 2024 | 6:17 PM

ನಟ ‘ಗೋಲ್ಡನ್‌ ಸ್ಟಾರ್‌’ ಗಣೇಶ್ ಅವರು ನಟಿಸಿದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಸೂಪರ್​ ಹಿಟ್​ ಆಯಿತು. ಆ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಅವರಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ‘ಕೃಷ್ಣಂ ಪ್ರಣಯ ಸಖಿ’ 100 ದಿನ ಯಶಸ್ವಿ ಪ್ರದರ್ಶನ ಕಂಡಿದ್ದೂ ಅಲ್ಲದೇ, ಒಟಿಟಿಯಲ್ಲಿಯೂ ಜನರ ಮೆಚ್ಚುಗೆ ಪಡೆದಿದೆ. ಈ ನಡುವೆ ಗಣೇಶ್ ಅವರ ಅಭಿಮಾನಿಗಳಿಗೆ ಒಂದು ಹೊಸ ಸುದ್ದಿ ಸಿಕ್ಕಿದೆ. ಟಾಲಿವುಡ್​ನ ಪ್ರತಿಷ್ಠಿತ ಪ್ರೊಡಕ್ಷನ್​ ಹೌಸ್​ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಜತೆಗೆ ಗಣೇಶ್‌ ಹೊಸ ಸಿನಿಮಾ ಮಾಡಲಿದ್ದಾರೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.

‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಸಂಸ್ಥೆ ಬಂಡವಾಳ ಹೂಡಲಿರುವ #PMF49 ಚಿತ್ರದಲ್ಲಿ ಗಣೇಶ್‌ ಅಭಿನಯಿಸಲಿದ್ದಾರೆ. ಈ ಸಿನಿಮಾದ ಮೂಲಕ ‘ಪೀಪಲ್‌ ಮೀಡಿಯಾ ಫ್ಯಾಕ್ಟರಿ’ ಸಂಸ್ಥೆಯು ಕನ್ನಡದಲ್ಲಿಯೂ ದೊಡ್ಡ ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದೆ. ‘ಕಾರ್ತಿಕೇಯ 2’, ‘ವೆಂಕಿ ಮಾಮ’, ‘ಓ ಬೇಬಿ’, ‘ಧಮಾಕಾ’ ಮುಂತಾದ ಸೂಪರ್​ ಹಿಟ್ ಸಿನಿಮಾಗಳನ್ನು ಈ ಸಂಸ್ಥೆ ನೀಡಿದೆ.

ತೆಲುಗು ಚಿತ್ರೋದ್ಯಮಕ್ಕೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಸಂಸ್ಥೆಯು ಅಪಾರ ಕೊಡುಗೆ ನೀಡಿದೆ. ಈಗ ಗಣೇಶ್​ ನಟನೆಯ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ನಲ್ಲೂ ಈ ಸಂಸ್ಥೆ ಅದ್ದೂರಿ ಸಿನಿಮಾವನ್ನು ನಿರ್ಮಿಸಲು ಬಂದಿದೆ. ಕನ್ನಡದ ಚಿತ್ರರಂಗದ ಸಾಮರ್ಥ್ಯವನ್ನು ಇನ್ನಷ್ಟು ಹಿರಿದಾಗಿಸುವ ಧ್ಯೇಯದೊಂದಿಗೆ, ಟಿಜಿ ವಿಶ್ವ ಪ್ರಸಾದ್ ನೇತೃತ್ವದ ಈ ಸಂಸ್ಥೆಯು ಒಳ್ಳೆಯ ಕಥೆ ಹಾಗೂ ಅತ್ಯಾಧುನಿಕ ಗುಣಮುಟ್ಟದ ನಿರ್ಮಾಣದ ಮೂಲಕ ಸ್ಯಾಂಡಲ್​ವುಡ್​ಗೆ ಪ್ರವೇಶಿಸುತ್ತಿದೆ.

ಇದನ್ನೂ ಓದಿ: Krishnam Pranaya Sakhi Review: ಫ್ಯಾಮಿಲಿ ಪ್ರೇಕ್ಷಕರಿಗೊಂದು ಟಿಪಿಕಲ್​ ಗಣೇಶ್​ ಸಿನಿಮಾ ‘ಕೃಷ್ಣಂ ಪ್ರಣಯ ಸಖಿ’

ಪ್ರಸಿದ್ಧ ಡ್ಯಾನ್ಸ್ ಕೊರಿಯೋಗ್ರಾಫರ್​ ಧನಂಜಯ್‌ ಅವರು ಈ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ. ಈ ಮೂಲಕ ಅವರು ದೊಡ್ಡ ಪ್ರಾಜೆಕ್ಟ್‌ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ಟಿಜಿ ವಿಶ್ವ ಪ್ರಸಾದ್ ನಿರ್ಮಾಣದ ಈ ಸಿನಿಮಾ ಅದ್ದೂರಿಯಾಗಿ ನಿರ್ಮಾಣ ಆಗಲಿದೆ. ಈ ಸಿನಿಮಾದ ಶೀರ್ಷಿಕೆ ಏನು? ಪಾತ್ರವರ್ಗದಲ್ಲಿ ಗಣೇಶ್ ಜೊತೆ ಯಾರೆಲ್ಲ ಇರಲಿದ್ದಾರೆ ಮುಂದಿನ ದಿನಗಳಲ್ಲಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.