ವಾರದ ದಿನವೂ ಬಾಕ್ಸ್​​ ಆಫೀಸ್​ನಲ್ಲಿ ತಗ್ಗದ ‘ಮ್ಯಾಕ್ಸ್’: 2ನೇ ದಿನ ಗಳಿಸಿದ್ದೆಷ್ಟು?

Max Movie: ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಮೊದಲ ದಿನ ಬಹಳ ಒಳ್ಳೆಯ ಕಲೆಕ್ಷನ್ ಮಾಡಿದೆ. ಎರಡನೇ ದಿನ ಗುರುವಾರ, ಯಾವುದೇ ರಜೆ ಇಲ್ಲದೇ ಇದ್ದರೂ ಸಹ ಸಿನಿಮಾ ಉತ್ತಮ ಮೊತ್ತವನ್ನೇ ಗಳಿಸಿದೆ. ಅಂದಹಾಗೆ ‘ಮ್ಯಾಕ್ಸ್’ ಸಿನಿಮಾದ ಗುರುವಾರದ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.

ವಾರದ ದಿನವೂ ಬಾಕ್ಸ್​​ ಆಫೀಸ್​ನಲ್ಲಿ ತಗ್ಗದ ‘ಮ್ಯಾಕ್ಸ್’: 2ನೇ ದಿನ ಗಳಿಸಿದ್ದೆಷ್ಟು?
Max Kannada Movie
Follow us
ಮಂಜುನಾಥ ಸಿ.
|

Updated on: Dec 27, 2024 | 8:59 AM

ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆ ಆಗಿ ಎರಡು ದಿನವಾಗಿದ್ದು, ಇಂದು ಮೂರನೇ ದಿನ. ‘ಮ್ಯಾಕ್ಸ್’ ಸಿನಿಮಾ ಮೊದಲ ದಿನ ಬಹಳ ಒಳ್ಳೆಯ ಕಲೆಕ್ಷನ್ ಮಾಡಿದೆ. ಮೊದಲ ದಿನ ರಾಜ್ಯದಾದ್ಯಂತ 8.50 ಕೋಟಿ ರೂಪಾಯಿ ಹಣವನ್ನು ಈ ಸಿನಿಮಾ ಗಳಿಕೆ ಮಾಡಿತ್ತು. ಆ ಮೂಲಕ ಈ ವರ್ಷ ಮೊದಲ ದಿನ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಸಿನಿಮಾ ಎನಿಸಿಕೊಂಡಿತ್ತು. ಸಿನಿಮಾಕ್ಕೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗಾಗಿ ಎರಡನೇ ದಿನದ ಕಲೆಕ್ಷನ್ ಉತ್ತಮವಾಗಿರುವ ನಿರೀಕ್ಷೆ ಹುಟ್ಟಿಸಿತ್ತು.

ಇದೀಗ ಎರಡನೇ ದಿನದ ಕಲೆಕ್ಷನ್ ಲೆಕ್ಕಾಚಾರ ಹೊರಬಿದ್ದಿದೆ. ಸಿನಿಮಾಗಳ ಬಾಕ್ಸ್ ಆಫೀಸ್​ ಕಲೆಕ್ಷನ್ ಮಾಹಿತಿ ಹಂಚಿಕೊಳ್ಳುವ ಸ್ಯಾಕ್​ನಿಲ್ಕ್​ ಡಾಟ್ ಕಾಮ್ ಹಂಚಿಕೊಂಡಿರುವ ಮಾಹಿತಿಯಂತೆ ‘ಮ್ಯಾಕ್ಸ್’ ಸಿನಿಮಾ ಎರಡನೇ ದಿನವಾದ ಗುರುವಾರದಂತು 4 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿದೆ. ಗುರುವಾರ ವಾರದ ದಿನವಾಗಿದ್ದು, ಆ ದಿನವೂ ಸಹ ಸಿನಿಮಾ ಉತ್ತಮ ಗಳಿಕೆಯನ್ನೇ ಮಾಡಿದೆ.

ಕ್ರಿಸ್​ಮಸ್ ರಜೆಯ ದಿನವಾದ ಬುಧವಾರದಂದು ‘ಮ್ಯಾಕ್ಸ್’ ಸಿನಿಮಾ ಬಿಡುಗಡೆ ಆಗಿದ್ದು ಮೊದಲ ದಿನ 8.50 ಕೋಟಿ ರೂಪಾಯಿ ಹಣ ಗಳಿಸಿತ್ತು. ಗುರುವಾರ ಯಾವುದೇ ರಜೆ ಇಲ್ಲದ ವಾರದ ದಿನವಾಗಿದ್ದರೂ ಸಹ ‘ಮ್ಯಾಕ್ಸ್’ ಸಿನಿಮಾ 4 ಕೊಟಿಗೂ ಹೆಚ್ಚು ಹಣ ಗಳಿಸುವ ಮೂಲಕ ಉತ್ತಮ ಕಲೆಕ್ಷನ್ ಅನ್ನೇ ಮುಂದುವರೆಸಿದೆ. ಆ ಮೂಲಕ ವೀಕೆಂಡ್​ಗೆ ಬೌನ್ಸ್ ಬ್ಯಾಕ್ ಮಾಡುವ ಸುಳಿವು ನೀಡಿದೆ. ಅಂದಹಾಗೆ ‘ಮ್ಯಾಕ್ಸ್’ ಸಿನಿಮಾದ ಒಟ್ಟು ಕಲೆಕ್ಷನ್ ಮೊತ್ತ 12.50 ಕೋಟಿಗೂ ಹೆಚ್ಚಾಗಿದೆ.

ಇದನ್ನೂ ಓದಿ:ಬಾಸಿಸಂ​ ಕೇಕ್​ ವಿವಾದಕ್ಕೆ ಸ್ಪಷ್ಟನೆ ನೀಡಿದ ಸುದೀಪ್​ ಆಪ್ತ ಪ್ರದೀಪ್​

ಮೊದಲ ದಿನಕ್ಕೆ ಹೋಲಿಸಿದರೆ ಬೆಂಗಳೂರು ಸೇರಿದಂತೆ ಕೆಲವು ಪ್ರಮುಖ ನಗರಗಳಲ್ಲಿ ಶೋಗಳ ಸಂಖ್ಯೆ ತುಸು ಕಡಿಮೆ ಆಗಿರುವುದು ಸಹ ಕಲೆಕ್ಷನ್ ತುಸು ತಗ್ಗಲು ಕಾರಣವಾಗಿದೆ. ಇನ್ನು ಬಾಕ್ಸ್ ಆಫೀಸ್​ನಲ್ಲಿ ‘ಪುಷ್ಪ 2’, ‘ವಿಡುದಲೈ 2’ ಸಿನಿಮಾಗಳ ಅಬ್ಬರ ಇನ್ನೂ ತಗ್ಗಿಲ್ಲ ಅದರ ನಡುವೆಯೂ ಸಹ ‘ಮ್ಯಾಕ್ಸ್’ ಸಿನಿಮಾ ಬಹಳ ಒಳ್ಳೆಯ ಕಲೆಕ್ಷನ ಮಾಡುತ್ತಿದೆ.

‘ಮ್ಯಾಕ್ಸ್’ ಸಿನಿಮಾ ಒಂದೇ ರಾತ್ರಿಯಲ್ಲಿ ನಡೆಯುವ ಕತೆ ಹೊಂದಿದ್ದು, ಪಕ್ಕಾ ಆಕ್ಷನ್ ಮತ್ತು ಥ್ರಿಲ್ಲರ್ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳಿದ್ದು, ಸಿನಿಮಾ ಅನ್ನು ತಮಿಳಿನ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ತಮಿಳಿನ ಜನಪ್ರಿಯ ನಿರ್ಮಾಪಕ ಕಲೈಪುಲಿ ಎಸ್ ಧನು, ಸುದೀಪ್ ಸಹ ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ