ಕಾಲಿವುಡ್-ಟಾಲಿವುಡ್ ಮಂದಿಗೂ ಇಷ್ಟವಾಯ್ತು ‘ಮ್ಯಾಕ್ಸ್’; ಶುಕ್ರವಾರ ಬಂಪರ್ ಕಲೆಕ್ಷನ್
ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬಂಪರ್ ಕಲೆಕ್ಷನ್ ಮಾಡುತ್ತಿದೆ. ತೆಲುಗು ಮತ್ತು ತಮಿಳು ಭಾಷೆಗಳಲ್ಲಿಯೂ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಒಂದು ರಾತ್ರಿಯ ಕಥಾವಸ್ತುವನ್ನು ಹೊಂದಿರುವ ಈ ಚಿತ್ರವು ಸುದೀಪ್ ಅಭಿಮಾನಿಗಳಿಗೆ ಹಾಗೂ ಆ್ಯಕ್ಷನ್ ಪ್ರಿಯರಿಗೆ ತುಂಬಾ ಇಷ್ಟವಾಗಿದೆ. ವಾರಾಂತ್ಯ ಮತ್ತು ಹೊಸ ವರ್ಷದ ಸಮಯದಲ್ಲಿ ಚಿತ್ರದ ಗಳಿಕೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.
ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಆಗಿ ಬಂಪರ್ ಕಲೆಕ್ಷನ್ ಮಾಡುತ್ತಿದೆ. ಇದು ಸಿನಿಮಾ ತಂಡದ ಖುಷಿ ಹೆಚ್ಚಿಸಿದೆ. ನಿರ್ಮಾಪಕರಾದ ಕಲೈಪ್ಪುಲಿ ಧಾನು ಹಾಗೂ ಸುದೀಪ್ ಮೊಗದಲ್ಲಿ ನಗು ಮೂಡಿದೆ. ಈಗ ಈ ಚಿತ್ರ ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್ (ಡಿಸೆಂಬರ್ 27) ಆಗಿದ್ದು, ಚಿತ್ರದ ಗಳಿಕೆ ಹೆಚ್ಚಿದೆ. ವಾರಾಂತ್ಯದಲ್ಲಿ ಹಾಗೂ ಹೊಸ ವರ್ಷದ ಸಂದರ್ಭದಲ್ಲಿ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.
‘ಮ್ಯಾಕ್ಸ್’ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ‘ವಿಕ್ರಾಂತ್ ರೋಣ’ ಬಳಿಕ ರಿಲೀಸ್ ಆದ ಸಿನಿಮಾ ಇದು ಎಂಬ ಕಾರಣಕ್ಕೂ ಸಿನಿಮಾ ಸಾಕಷ್ಟು ನಿರೀಕ್ಷೆ ಸೃಷ್ಟಿ ಮಾಡಿತ್ತು. ಆ ನಿರೀಕ್ಷೆಯನ್ನು ತಲುಪಲು ‘ಮ್ಯಾಕ್ಸ್’ ಯಶಸ್ವಿ ಆಗಿದೆ. ಸುದೀಪ್ ಅಭಿಮಾನಿಗಳು ಹಾಗೂ ಆ್ಯಕ್ಷನ್ ಪ್ರಿಯರಿಗೆ ಸಿನಿಮಾ ಇಷ್ಟ ಆಗಿದೆ.
‘ಮ್ಯಾಕ್ಸ್’ ಸಿನಿಮಾ ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರ ಡಿಸೆಂಬರ್ 27ರಂದು 4.15 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು sacnilk ವರದಿ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 16.70 ಕೋಟಿ ರೂಪಾಯಿ ಆಗಿದೆ. ಈಗಾಗಲೇ ಟಾಲಿವುಡ್ ಹಾಗೂ ಕಾಲಿವುಡ್ನಲ್ಲಿ ಸಿನಿಮಾಗೆ ಮೆಚ್ಚುಗೆ ಸಿಗುತ್ತಿದ್ದು, ಮುಂದಿನ ದಿನಗಳಲ್ಲಿ ಆ ಭಾಗದಲ್ಲಿ ಮತ್ತಷಷ್ಟು ಗಳಿಕೆ ಆಗುವ ನಿರೀಕ್ಷೆ ಇದೆ. ಅಂದಹಾಗೆ, ಇದು ಚಿತ್ರತಂಡದವರು ನೀಡಿದ ಗಳಿಕೆ ವಿವರ ಅಲ್ಲ. ಅವರ ಕಡೆಯಿಂದ ಮಾಹಿತಿ ಸಿಕ್ಕರೆ ಆ ಲೆಕ್ಕಾಚಾರದಲ್ಲಿ ವ್ಯತ್ಯಾಸ ಬರಬಹುದು.
ಇದನ್ನೂ ಓದಿ: ವಾರದ ದಿನವೂ ಬಾಕ್ಸ್ ಆಫೀಸ್‌ನಲ್ಲಿ ತಗ್ಗದ ‘ಮ್ಯಾಕ್ಸ್’: 2ನೇ ದಿನ ಗಳಿಸಿದ್ದೆಷ್ಟು?
ಒಂದು ರಾತ್ರಿ ನಡೆಯುವ ಕಥೆಗಳು ಕನ್ನಡದಲ್ಲಿ ಬಂದಿದ್ದು ಕಡಿಮೆ. ಈ ಪೈಕಿ ಹಿಟ್ ಆದ ಸಿನಿಮಾಗಳು ಬೆರಳೆಣಿಕೆ ಮಾತ್ರ. ಈಗ ‘ಮ್ಯಾಕ್ಸ್’ ಸಿನಿಮಾ ಒಂದು ರಾತ್ರಿ ನಡೆಯುವ ಕಥೆಯನ್ನು ಹೊಂದಿದ್ದು ಪ್ರೇಕ್ಷಕರಿಗೆ ಇಷ್ಟ ಆಗಿದೆ. ಚಿತ್ರ ಯಶಸ್ಸು ಕಂಡಿದೆ. ಸುದೀಪ್ ಅವರನ್ನು ಇಷ್ಟು ಮಾಸ್ ಆಗಿ ನೋಡಿ ತುಂಬಾ ವರ್ಷಗಳೇ ಕಳೆದು ಹೋಗಿದ್ದವು ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
‘ಮ್ಯಾಕ್ಸ್’ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಅವರ ನಿರ್ದೇಶನ ಇದೆ. ಇದು ಅವರ ನಿರ್ದೇಶನದ ಮೊದಲ ಸಿನಿಮಾ. ಸುದೀಪ್ ಅವರು ಅರ್ಜುನ್ ಮಹಾಕ್ಷಯ್ ಅಲಿಯಾಸ್ ಮ್ಯಾಕ್ಸ್ ಆಗಿ ಕಾಣಿಸಿಕೊಂಡಿದ್ದಾರೆ. ವರಲಕ್ಷ್ಮೀ ಶರತ್ಕುಮಾರ್, ಉಗ್ರಂ ಮಂಜು, ಸುನಿಲ್, ಸುಧಾ ಬೆಳವಾಡಿ, ಶರತ್ ಲೋಹಿತಾಶ್ವ ಮೊದಲಾದವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:03 am, Sat, 28 December 24