‘ಕೃಷ್ಣಂ ಪ್ರಣಯ ಸಖಿ’ ಚಿತ್ರದಲ್ಲಿ ಡಿಲೀಟ್​ ಆದ ಸೀನ್ ಬಗ್ಗೆ ವಿವರಿಸಿದ ಗಣೇಶ್; ಎಲ್ಲವೂ ಅಭಿಮಾನಿಗಳಿಗಾಗಿ

‘ಕೃಷ್ಣಂ ಪ್ರಣಯ ಸಖಿ’ ಚಿತ್ರದಲ್ಲಿ ಡಿಲೀಟ್​ ಆದ ಸೀನ್ ಬಗ್ಗೆ ವಿವರಿಸಿದ ಗಣೇಶ್; ಎಲ್ಲವೂ ಅಭಿಮಾನಿಗಳಿಗಾಗಿ

Malatesh Jaggin
| Updated By: ಮದನ್​ ಕುಮಾರ್​

Updated on: Aug 20, 2024 | 7:32 PM

ಫ್ಯಾಮಿಲಿ ಪ್ರೇಕ್ಷಕರು ಗಣೇಶ್​ ಅಭಿನಯದ ಸಿನಿಮಾಗಳನ್ನು ಹೆಚ್ಚು ಇಷ್ಟಪಡುತ್ತಾರೆ. ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ ಅದು ಮತ್ತೆ ಸಾಬೀತಾಗಿದೆ. ಈ ಸಿನಿಮಾದ ಸಕ್ಸಸ್​ ಬಳಿಕ ಗಣೇಶ್​ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಸಿನಿಮಾದಲ್ಲಿ ಕಟ್​ ಆದ ಒಂದು ದೃಶ್ಯದ ಬಗ್ಗೆಯೂ ಅವರು ವಿವರಿಸಿದ್ದಾರೆ. ಹಾಗೆ ಮಾಡಲು ಕಾರಣ ಏನು ಎಂಬುದಕ್ಕೂ ಗಣೇಶ್​ ಉತ್ತರಿಸಿದ್ದಾರೆ.

‘ಗೋಲ್ಡನ್​ ಸ್ಟಾರ್​’ ಗಣೇಶ್​ ನಟನೆಯ ‘ಕೃಷ್ಣಂ ಪ್ರಯಣ ಸಖಿ’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಈ ಸಿನಿಮಾದಲ್ಲಿ ಮಾಳವಿಕಾ ನಾಯರ್​, ರಂಗಾಯಣ ರಘು, ಶರಣ್ಯ ಶೆಟ್ಟಿ, ಸಾಧು ಕೋಕಿಲ ಮುಂತಾದವರು ನಟಿಸಿದ್ದಾರೆ. ವಿಶೇಷವಾಗಿ ಫ್ಯಾಮಿಲಿ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಅಚ್ಚರಿ ಏನೆಂದರೆ, ಈ ಸಿನಿಮಾದ ಒಂದು ದೃಶ್ಯವನ್ನು ಬಿಡುಗಡೆಗೂ ಮುನ್ನವೇ ಡಿಲೀಟ್ ಮಾಡಲಾಯ್ತು. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮಲಗಿದ ಹೀರೋನ ನೋಡಿ ಚಿತ್ರಮಂದಿರದಲ್ಲಿ ಗಣೇಶ್​ ಅಭಿಮಾನಿಗಳು ಎಮೋಷನಲ್​ ಆಗಿದ್ದಾರೆ. ‘ಆ ದೃಶ್ಯ ಇನ್ನೂ ದೀರ್ಘವಾಗಿತ್ತು. ಹೀರೋ ಕಣ್ಣೀರು ಹಾಕಬೇಕಿತ್ತು. ಆದರೆ ಅದನ್ನು ನಾವು ಕಟ್​ ಮಾಡಿದ್ದೇವೆ. ಕೊರೊನಾ ಬಳಿಕ ಎಲ್ಲರೂ ನೋವಿನಲ್ಲಿ ಇದ್ದಾರೆ. ಹಾಗಾಗಿ ಚಿತ್ರಮಂದಿರದಲ್ಲೂ ಅಭಿಮಾನಿಗಳಿಗೆ ಮತ್ತೆ ದುಃಖ ತೋರಿಸೋದು ಬೇಡ. ಜನರಿಗೆ ಖುಷಿ ನೋಡೋಣ ಎಂಬುದು ನಮ್ಮ ಉದ್ದೇಶ ಆಗಿತ್ತು’ ಎಂದು ಗಣೇಶ್​ ಹೇಳಿದ್ದಾರೆ. ಅಲ್ಲದೇ ತಮ್ಮ ಫಿಟ್ನೆಸ್​ ಗುಟ್ಟು ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.