ಕೊತ್ವಾಲ ರಾಮಚಂದ್ರ ಶಿಷ್ಯರ ಗೂಂಡಾಗಿರಿ ರಾಜಭವನದ ಮೇಲೆ ನಡೆಯಲ್ಲ: ಸಿಟಿ ರವಿ

ಕೊತ್ವಾಲ ರಾಮಚಂದ್ರ ಶಿಷ್ಯರ ಗೂಂಡಾಗಿರಿ ರಾಜಭವನದ ಮೇಲೆ ನಡೆಯಲ್ಲ: ಸಿಟಿ ರವಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 20, 2024 | 6:15 PM

ನಿನ್ನೆ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡಿದ ರಾಜ್ಯದ ಕೆಲ ಕಾಂಗ್ರೆಸ್ ನಾಯಕರ ಹೇಳಿಕೆಗಳು ಅವರ ಅಥವಾ ಒಬ್ಬ ರಾಜಕಾರಣಿಯ ಘನತೆಗೆ ತಕ್ಕುದ್ದಾಗಿರಲಿಲ್ಲ. ರವಿಯವರು ಹೇಳಿದ ಹಾಗೆ ಅದರಲ್ಲಿ ಕೆಲವರ ಮಿನಿಸ್ಟ್ರುಗಳು! ರಾಜ್ಯಪಾಲರು ಸಂವೈಧಾನಿಕವಾಗಿ ಬಹಳ ಉನ್ನತ ಸ್ಥಾನದಲ್ಲಿರುವವರು.

ಬೆಂಗಳೂರು: ರಾಜಭವನ ಮತ್ತು ರಾಜ್ಯಪಾಲರ ಮೇಲೆ ರೌಡಿಗಳ ಹಾಗೆ ದಬಾವಣೆ ಮಾಡಿದ ಕಾಂಗ್ರೆಸ್ ನಾಯಕರನ್ನು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರವಿ, ರಾಜ್ಯಪಾಲರು ತಮ್ಮ ವಿವೇಚನೆಗೆ ಅನುಗುಣವಾಗಿ ನಿರ್ಣಯ ತೆಗೆದುಕೊಳ್ಳುವ ಸಂವೈಧಾನಿಕ ಅಧಿಕಾರ ಹೊಂದಿದ್ದಾರೆ. ಆದರೆ, ಅವರ ಮೇಲೆ ಒತ್ತಡ ಹೇರುವ, ಹೆದರಿಸುವ ಅವಕಾಶ ಸರ್ಕಾರಕ್ಕಿರೋದಿಲ್ಲ. ಸರ್ಕಾರಕ್ಕೆ ಆಕ್ಷೇಪಣೆಗಳಿದ್ದರೆ ರಾಜಭವನಕ್ಕೆ ಹೋಗಿ ರಾಜ್ಯಪಾಲರರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಲಿ, ಅಥವಾ ನ್ಯಾಯಾಲಯದ ಮೊರೆ ಹೋಗಲಿ, ಸಂವಿಧಾನ ಎಲ್ಲರಿಗೂ ಅವಕಾಶಗಳನ್ನು ಕಲ್ಪಿಸುತ್ತದೆ ಎಂದು ಹೇಳಿದರು. ಡಿಕೆ ಶಿವಕುಮಾರ್ ಹೆಸರು ಉಲ್ಲೇಖಿಸದೆ ರವಿ ಅವರು, ಕೊತ್ವಾಲ ರಾಮಚಂದ್ರನ ಶಿಷ್ಯಂದಿರಿಗೆ ರಾಜಭವನದ ಘನತೆ ಗೊತ್ತಿರಬೇಕು, ಮತ್ತೊಬ್ಬ ಸಚಿವ ಜಮೀರ್ ಅಹ್ಮದ್ ಮುಂಬೈ ದಿವಂಗತ ಡಾನ್ ಹಾಜಿ ಮಸ್ತಾನ್ ಥರ ಮಾತಾಡುತ್ತಾರೆ, ಇನ್ನೊಬ್ಬ ಕಾಂಗ್ರೆಸ್ ಲೀಡರ್ ಐವಾನ್ ಡಿಸೋಜಾ ಹರಿಯಾಣ ನಟೋರಿಯಸ್ ರೌಡಿ ಲಾರೆನ್ಸ್ ಬಿಷ್ಣೋಯಿಯ ಹಾಗೆ ರಾಜ್ಯಪಾಲರಿಗೆ ಬೆದರಿಕೆ ಹಾಕುತ್ತಾರೆ ಎಂದು ರವಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಜ್ಯಪಾಲರಿಗೆ ನಿಂದನೆ ಆರೋಪ: ಜಮೀರ್, ಕೃಷ್ಣ ಭೈರೇಗೌಡ ಸೇರಿ ಕಾಂಗ್ರೆಸ್​ ನಾಯಕರ ವಿರುದ್ದ ಬಿಜೆಪಿ ದೂರು