‘ಆಗಿದ್ದು ಆಗಿ ಹೋಯ್ತು, ಅದನ್ನು ಬಿಟ್ಟುಬಿಡು’; ಹಳೆಯ ಘಟನೆಯ ಬಗ್ಗೆ ಮೋಕ್ಷಿತಾಗೆ ಧೈರ್ಯ ತುಂಬಿದ ತಾಯಿ
ಮೋಕ್ಷಿತಾ ಪೈ ಅವರ ತಾಯಿ ಬಿಗ್ ಬಾಸ್ ಮನೆಗೆ ಭೇಟಿ ನೀಡಿದ್ದು, ಗೌತಮಿ ಜೊತೆಗಿನ ಹಳೆಯ ವಿವಾದದ ಬಗ್ಗೆ ಚರ್ಚೆ ನಡೆಯಿತು. ಮೋಕ್ಷಿತಾಗೆ ತಾಯಿ ಧೈರ್ಯ ಹೇಳಿ, ಹಳೆಯ ಘಟನೆಯನ್ನು ಮರೆತು ಪ್ರಾಮಾಣಿಕವಾಗಿ ಆಡಲು ಸಲಹೆ ನೀಡಿದರು. ಈ ಭಾವುಕ ಕ್ಷಣ ಬಿಗ್ ಬಾಸ್ ಮನೆಯಲ್ಲಿ ಹಲವು ಚರ್ಚೆಗಳಿಗೆ ಕಾರಣವಾಯಿತು.
ಮೋಕ್ಷಿತಾ ಪೈ ಅವರು ಪಾರು ಧಾರಾವಾಹಿ ಮೂಲಕ ಫೇಮಸ್ ಆದವರು. ಅವರು ಈಗ ಬಿಗ್ ಬಾಸ್ ಮನೆಗೆ ಬಂದು ಮಿಂಚುತ್ತಿದ್ದಾರೆ. ತಮ್ಮ ಆಟದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಜನವರಿ 1ರ ಎಪಿಸೋಡ್ನಲ್ಲಿ ಅವರ ತಾಯಿ ಬಿಗ್ ಬಾಸ್ ಮನೆಗೆ ಆಗಮಿಸಿದ್ದಾರೆ. ಈ ವೇಳೆ ಹಲವು ವಿಷಯಗಳ ಬಗ್ಗೆ ಅಮ್ಮ-ಮಗಳು ಚರ್ಚೆ ಮಾಡಿದ್ದಾರೆ. ಈ ವೇಳೆ ಹಳೆಯ ಘಟನೆಯೊಂದರ ಬಗ್ಗೆಯೂ ಚರ್ಚೆ ನಡೆದಿದೆ.
ಈ ಮೊದಲು ಸ್ಪರ್ಧಿಗಳ ತಪ್ಪನ್ನು ಹೇಳಿ ಸ್ವಿಮ್ಮಿಂಗ್ಪೂಲ್ಗೆ ತಳ್ಳುವ ಟಾಸ್ಕ್ ಇತ್ತು. ಈ ಟಾಸ್ಕ್ ವೇಳೆ ಮೋಕ್ಷಿತಾ ಅವರು ಗೌತಮಿ ಅವರನ್ನು ತಳ್ಳಿದ್ದರು. ಅವರು ಕೊಟ್ಟ ಮಾತನ್ನು ನಿಭಾಯಿಸಿಲ್ಲ ಎನ್ನುವ ಕಾರಣವನ್ನು ಮೋಕ್ಷಿತಾ ನೀಡಿದ್ದರು. ಆ ಬಳಿಕ ಗೌತಮಿ ಈ ವಿಚಾರವಾಗಿ ಮೋಕ್ಷಿತಾ ಜೊತೆ ಚರ್ಚೆ ಮಾಡಿ ಎಲ್ಲವನ್ನೂ ಸರಿ ಮಾಡಿಕೊಂಡಿದ್ದರು. ಆದರೆ, ಗೌತಮಿ ನಾಮಿನೇಷನ್ಗೆ ಇದೇ ಕಾರಣ ತೆಗೆದುಕೊಂಡಿದ್ದರು. ಇದು ಮೋಕ್ಷಿತಾ ಕೋಪಕ್ಕೆ ಕಾರಣ ಆಗಿದೆ. ಈ ಹಳೆಯ ಘಟನೆ ಬಗ್ಗೆ ತಾಯಿ ಬಳಿ ಮೋಕ್ಷಿತಾ ಚರ್ಚೆ ಮಾಡಿದ್ದಾರೆ.
‘ಎಲ್ಲರೂ ಹೇಗಿದ್ದಾರೆ’ ಎಂದು ಮೋಕ್ಷಿತಾ ತಾಯಿಗೆ ಕೇಳಿದರು. ‘ಎಲ್ಲರೂ ಚೆನ್ನಾಗಿದ್ದಾರೆ. ಬಾಟಮ್ 2ಗೆ ಬಂದೆ ಎಂದು ಅಳಬೇಡ. ಚೆನ್ನಾಗಿ ಆಡ್ತಾ ಇದೀಯಾ. ಹೀಗೆ ಸಿಂಗಲ್ ಆಗಿ ಆಡು’ ಎಂದರು ಮೋಕ್ಷಿತಾ ತಾಯಿ. ‘ನನಗೆ ನಾಟಕ ಮಾಡೋಕೆ ಬರಲ್ಲ. ಇರೋದನ್ನು ಹೇಳುತ್ತೇನೆ. ಗೌತಮಿ ಕೊಟ್ಟ ಮಾತನ್ನು ನಿಭಾಯಿಸುತ್ತಿಲ್ಲ ಎಂದು ನಾನು ಹೇಳಿದ್ದೆ. ಆ ಬಳಿಕ ಗೌತಮಿ ಅವರೇ ನನ್ನ ಕರೆದು ಮಾತುಕತೆ ನಡಿಸಿದರು. ಆ ಬಳಿಕ ನಾವು ಮೂರು ಜನ ಸರಿ ಹೋದೆವು. ಆದರೆ, ಇದೇ ವಿಚಾರ ಇಟ್ಟುಕೊಂಡು ನಾಮಿನೇಟ್ ಮಾಡಿದರು. ಹೀಗೆ ಮಾಡ್ತಾರೆ ಎಂದರೆ ಮಾತುಕತೆ ನಡೆಸಿ ಅದನ್ನು ಸರಿ ಮಾಡಿಕೊಳ್ಳಲೇ ಬಾರದು’ ಎಂದು ಅಭಿಪ್ರಾಯಪಟ್ಟರು ಮೋಕ್ಷಿತಾ.
ಇದನ್ನೂ ಓದಿ: ಮೂರು ತಿಂಗಳು ದೂರ ಇದ್ದ ಅಕ್ಕನ ಗುರುತಿಸಲೇ ಇಲ್ಲ ತಮ್ಮ; ಮೋಕ್ಷಿತಾ ಕಣ್ಣೀರಿಗೆ ಕರುಳು ಕಿವುಚುತ್ತೆ
ಆಗ ಮೋಕ್ಷಿತಾ ತಾಯಿ ಮಗಳಿಗೆ ಧೈರ್ಯ ಹೇಳುವ ಕೆಲಸ ಮಾಡಿದರು. ‘ಆಗಿದ್ದು ಆಗಿ ಹೋಯ್ತು, ಬಿಟ್ಟಾಕಿ ಬಿಡು. ನಿನ್ನ ಪ್ರಾಮಾಣಿಕತೆ ಬಗ್ಗೆ ನಮಗೆ ಗೊತ್ತಿದೆ’ ಎಂದರು. ಆ ಬಳಿಕ ಇಬ್ಬರ ಮಾತುಕತೆ ಅಲ್ಲಿಗೆ ನಿಂತಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.