ಮೂರು ತಿಂಗಳು ದೂರ ಇದ್ದ ಅಕ್ಕನ ಗುರುತಿಸಲೇ ಇಲ್ಲ ತಮ್ಮ; ಮೋಕ್ಷಿತಾ ಕಣ್ಣೀರಿಗೆ ಕರುಳು ಕಿವುಚುತ್ತೆ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಮೋಕ್ಷಿತಾ ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಅವರ ಆಟ ಅನೇಕರಿಗೆ ಇಷ್ಟ ಆಗುತ್ತಿದೆ. ಈಗ ಅವರ ಮನೆಯವರು ದೊಡ್ಮನೆಗೆ ಬಂದಿದ್ದಾರೆ. ಈ ವೇಳೆ ಮೋಕ್ಷಿತಾ ಅವರ ಭಾವನಾತ್ಮಕ ಕ್ಷಣ ಕರುಳು ಕಿವುಚಿದೆ. ಆ ಪ್ರೋಮೋ ವೈರಲ್ ಆಗಿದೆ.
ಮೋಕ್ಷಿತಾ ಅವರ ತಮ್ಮ ವಿಶೇಷ ಚೇತನ. ಅವರಿಗೆ ಹೊರ ಪ್ರಪಂಚದ ಜ್ಞಾನ ಪರಿಪೂರ್ಣವಾಗಿ ಇಲ್ಲ. ಮೋಕ್ಷಿತಾ ಅವರು ತಮ್ಮನ ಅಷ್ಟು ದಿನ ಬಿಟ್ಟಿದ್ದೇ ಇಲ್ಲ. ಆದರೆ, ಬಿಗ್ ಬಾಸ್ಗಾಗಿ ಅವರು ಕುಟುಂಬವನ್ನು ಮೂರು ತಿಂಗಳು ಬಿಟ್ಟಿದ್ದರು. ಈ ಕಾರಣಕ್ಕೆ ಮೋಕ್ಷಿತಾ ಅವರನ್ನು ತಮ್ಮ ಮರೆತೇಬಿಟ್ಟಿದ್ದಾರೆ. ಈ ದೃಶ್ಯ ನೋಡುಗರ ಕರುಳನ್ನು ಕಿವುಚಿದೆ. ಗೌತಮಿ ಈ ದೃಶ್ಯವನ್ನು ನೋಡಿ ಕಣ್ಣೀರು ಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos