New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು

New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು

Ganapathi Sharma
|

Updated on: Jan 01, 2025 | 9:04 AM

ಹೊಸ ವರ್ಷಾಚರಣೆಯ ಪಾರ್ಟಿ ವೇಳೆ ಕೋರಮಂಗಲದಲ್ಲಿ ಯುವತಿಯೊಬ್ಬಳು ಕುಸಿದು ಕುಳಿತ ಘಟನೆ ರಾತ್ರಿ ನಡೆದಿದೆ. ಮದ್ಯದ ಅಮಲಿನಿಂದ ಕುಸಿದ ಯುವತಿಯನ್ನು ಎಚ್ಚರಿಸಿ ಕರೆದೊಯ್ಯಲು ಆಕೆಯ ಬಾಯ್​ಫ್ರೆಂಡ್ ಪರದಾಡಿದ ಘಟನೆಯ ವಿಡಿಯೋ ಈಗ ವೈರಲ್ ಆಗುತ್ತಿದೆ. ನ್ಯೂ ಇಯರ್ ಪಾರ್ಟಿಯ ಅವಾಂತರದ ವಿಡಿಯೋ ಇಲ್ಲಿದೆ ನೋಡಿ.

ಬೆಂಗಳೂರು, ಜನವರಿ 1: ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಮತ್ತಿತರ ಕಡೆಗಳಲ್ಲಿ ಹೊಸ ವರ್ಷಾಚರಣೆ ಪಾರ್ಟಿ ಭರ್ಜರಿಯಾಗಿಯೇ ನಡೆದಿದೆ. ಕೋರಮಂಗಲದಲ್ಲಿ ಯುವಕ ಯುವತಿಯರು ಮದ್ಯದ ಮತ್ತಿನಲ್ಲಿ ತೂರಾಡಿದ್ದು ಕಂಡುಬಂತು. ಒಂದೆಡೆ ಎಣ್ಣೆಯ ಅಮಲಿನಿಂದ ಸುಸ್ತಾದ ಯುವತಿ ಕುಸಿದು ಕುಳಿತಿದ್ದರೆ, ಆಕೆಯನ್ನು ಎಬ್ಬಿಸಿ ಕರೆದೊಯ್ಯಲು ಆಕೆಯ ಬಾಯ್​ಫ್ರೆಂಡ್ ಹರಸಾಹಸಪಡಬೇಕಾಯಿತು. ಘಟನೆಯ ವಿಡಿಯೋ ಈಗ ವೈರಲ್ ಆಗುತ್ತಿದೆ. ವಿಡಿಯೋ ಇಲ್ಲಿದೆ.