New Year 2025: ಕುಡಿದು ನಡೆಯಲಾಗದ ಸ್ಥಿತಿಯಲ್ಲಿದ್ದ ಗರ್ಲ್ಫ್ರೆಂಡನ್ನು ಅನಾಮತ್ತಾಗಿ ಎತ್ತಿಕೊಂಡು ಹೋದ ಬಾಯ್ಫ್ರೆಂಡ್!
ಇದೇ ವಿಡಿಯೋದಲ್ಲಿ ಮತ್ತೊಬ್ಬ ಯುವತಿಯಿದ್ದಾಳೆ, ಅವಳಿಗೂ ಅಮಲೇರಿದೆ. ಇಬ್ಬರು ಯುವಕರ ನೆರವಿನೊಂದಿಗೆ ನಡೆದ ಬರುತ್ತಿದ್ದಾಳೆ. ಗಡ್ಡಧಾರಿ ಯುವಕನ ಹೆಗಲ ಮೇಲೆ ಆಕೆ ತಲೆಯಿಟ್ಟು ನಡೆಯುತ್ತಿದ್ದರೆ ಮತ್ತೊಬ್ಬ ಯುವಕ ಎಡಕ್ಕೆ ಬೀಳದಂತೆ ಅಥವಾ ವಾಲದಂತೆ ಕೈಹಿಡಿದುಕೊಂಡಿದ್ದಾನೆ. ನಾವು ಈಗಲೂ ಅದೇ ಮಾತನ್ನು ಹೇಳುತ್ತೇವೆ, ಕುಡಿದು ಸೀನ್ಗಳನ್ನು ಸೃಷ್ಟಿಸುವ ಅಗತ್ಯ ಯಾರಿಗಾದರೂ ಇದೆಯಾ?
ಬೆಂಗಳೂರು: ಇವನಂಥ ಬಾಯ್ಫ್ರೆಂಡ್ ಎಲ್ಲ ಯುವತಿಯರಿಗೂ ಸಿಗಲಿ ಮಾರಾಯ್ರೇ! ಯಾಕೆ ಅನ್ನೋದನ್ನು ದೃಶ್ಯಗಳನ್ನು ನೋಡಿ ನೀವೇ ಅರ್ಥಮಾಡಿಕೊಳ್ಳಬಹುದು. ಅವನು ಗೆಳತಿಯೊಂದಿಗೆ ನ್ಯೂ ಈಯರ್ ಸೆಲೆಬ್ರೇಷನ್ ಗೆ ಅಂತ ಬ್ರಿಗೇಡ್ ರೋಡ್ ಗೆ ಬಂದಿದ್ದಾನೆ. ಆದರೆ, ಗರ್ಲ್ ಫ್ರೆಂಡ್ ಮಿತಿಮೀರಿ ಕುಡಿದು ಬಿಟ್ಟಿದ್ದಾಳೆ, ಅದರ ಪರಿಣಾಮವೇ ವಿಡಿಯೋದಲ್ಲಿ ಕಾಣುತ್ತಿರುವ ದೃಶ್ಯ. ನಡೆಯಲೂ ಸಾಧ್ಯವಾಗದಷ್ಟು ಮತ್ತಿನಲ್ಲಿರುವ ಗೆಳತಿಯನ್ನು ಯುವಕ ಎತ್ತಿಕೊಂಡು ಪ್ರಾಯಶಃ ತನ್ನ ವಾಹನ ಪಾರ್ಕ್ ಮಾಡಿರುವ ಕಡೆ ಹೋಗುತ್ತಿದ್ದಾನೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: New Year 2025: ಹೊಸ ವರ್ಷದ ಸೆಲೆಬ್ರೇಷನ್ ಅಂದರೆ ಮತ್ತೇರುವಂತೆ ಕುಡಿದು ರಸ್ತೆಗಳಲ್ಲಿ ಓಲಾಡುವುದಾ?
Latest Videos