New Year 2025: ಹೊಸ ವರ್ಷದ ಸೆಲೆಬ್ರೇಷನ್ ಅಂದರೆ ಮತ್ತೇರುವಂತೆ ಕುಡಿದು ರಸ್ತೆಗಳಲ್ಲಿ ಓಲಾಡುವುದಾ?
ಕಪ್ಪು ಬಟ್ಟೆ ಧರಿಸಿರುವ ಯುವತಿ ಮತ್ತು ನೀಲಿ ಜೀನ್ಸ್ ಮತ್ತು ಕೆಂಪು ಟೀ ಶರ್ಟ್ ಧರಿಸಿರುವ ಯುವತಿಯರು ಜಾಸ್ತಿ ಮದ್ಯಸೇವನೆ ಮಾಡಿದ್ದಾರೆ, ಸ್ನೇಹಿತರು ಅಥವಾ ಬಾಯ್ಫ್ರೆಂಡ್ ನೆರವಿನಿಂದ ಅವರಿಗೆ ನಡೆಯಲು ಸಾಧ್ಯವಾಗುತ್ತಿದೆ. ಕಳೆದ ರಾತ್ರಿ ನಗರದಲ್ಲಿ ಅದರಲ್ಲೂ ವಿಶೇಷವಾಗಿ ಬ್ರಿಗೇಡ್ ರಸ್ತೆ, ಎಂಜಿ ರೋಡ್ ಮತ್ತು ಚರ್ಚ್ ಸ್ಟ್ರೀಟ್ ಗಳಲ್ಲಿ ಇಂಥ ದೃಶ್ಯಗಳು ಸಾಮಾನ್ಯವಾಗಿದ್ದವು.
ಬೆಂಗಳೂರು: ಈ ಯುವತಿಯರನ್ನು ನೋಡಿದರೆ ಹೊಸವರ್ಷದ ಸೆಲೆಬ್ರೇಷನ್ ಅಂದರೆ ಕಂಠಮಟ್ಟ ಕುಡಿದು ರಸ್ತೆಗಳ ಮೇಕೆ ಓಲಾಡುವುದು ಮಾತ್ರನಾ ಅನಿಸಿನಿಡುತ್ತದೆ. ಕುಡಿಯೋದು ಬಿಡಿ, ಅದು ವೈಯಕ್ತಿಕ ವಿಚಾರ, ನಾವ್ಯಾರೂ ಕಾಮೆಂಟ್ ಮಾಡುವಂತಿಲ್ಲ. ಯಾರು ಬೇಕಾದರೂ ಕುಡಿಯಬಹುದು ಅದರೆ ಡಿಸೆಂಬರ್ 31 ರ ರಾತ್ರಿ ಎಷ್ಟು ಬೇಕಾದರೂ ಕುಡಿಯಬಹುದಾ ಎಂಬ ಪ್ರಶ್ನೆ ಏಳುತ್ತದೆ. ಕೆಲವು ಯುವತಿಯರು ಮಾತ್ರ ಮದ್ಯದ ಅಮಲಿನಲ್ಲಿ ತೂರಾಡುತ್ತಿದ್ದಾರೆ, ಬೇರೆ ಯುವತಿಯರೂ ಕುಡಿದಿರಬಹುದು, ಆದರೆ ಅವರಿಗೆ ತಮ್ಮ ಮಿತಿ ಚೆನ್ನಾಗಿ ಗೊತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಜ್ಯದ ಪ್ರಮುಖ ರಾಜಕಾರಣಿಗಳು ಹೊಸ ವರ್ಷವನ್ನು ಎಲ್ಲೆಲ್ಲಿ ಆಚರಿಸುತ್ತಿದ್ದಾರೆ ಗೊತ್ತಾ?
Latest Videos