New Year 2025: ಪಬ್ನಲ್ಲಿ ಕುಡಿದು ಹೊರಬಂದ ಆರ್ಸಿಬಿ ಅಭಿಮಾನಿಯೊಬ್ಬ ಈ ಸಲ ಕಪ್ ನಮ್ದೇ ಅಂದ!
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪ್ರತಿಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಮೈದಾನಕ್ಕಳಿಯುವ ಅರ್ ಸಿಬಿ ತಂಡ ಕಳೆದ 17ಸೀಸನ್ಗಳಲ್ಲಿ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಈ ಸಲ ಕಪ್ ನಮ್ದೇ ಅಂತ ಆರ್ ಸಿ ಬಿ ಅಭಿಮಾನಿಗಳು ಪ್ರತಿಸಲ ಹೇಳುತ್ತಾರೆ, ಆದರೆ ಪ್ರಶಸ್ತಿ ಮಾತ್ರ ಮರೀಚಿಕೆಯಾಗಿ ಉಳಿದುಬಿಟ್ಟಿದೆ. ನಿನ್ನೆ ರಾತ್ರಿ ಕುಡಿದ ಅಮಲಿನಲ್ಲಿದ್ದ ಯುವಕನೊಬ್ಬ ಈ ಸಲ ಕಪ್ ನಮ್ದೇ ಅಂತ ಹೇಳಿದ .
ಬೆಂಗಳೂರು: ಕಳೆದ ರಾತ್ರಿ ಕೋರಮಂಗದಲ್ಲಿರುವ ಪಬ್ ಒಂದರಲ್ಲಿ ಕುಡಿದು ಹೊಸವರ್ಷ ಶುರುವಾದ ಬಳಿಕ ಅಲ್ಲಿಂದ ಹೊರಬಿದ್ದ ಯುವಕ-ಯುವತಿಯರ ಹಾವಭಾವಗಳು ನೋಡುಗರಲ್ಲಿ ನಗೆ ಹುಟ್ಟಿಸಿದ್ದು ಸುಳ್ಳಲ್ಲ. ನ್ಯೂ ಈಯರ್ ಪಾರ್ಟಿ ಅಂದಮೇಲೆ ಕುಡಿತದ ಮೇಲೆ ಯಾವ ನಿರ್ಬಂಧ? ಆಫ್ ಕೋರ್ಸ್ ಇವರಲ್ಲಿ ಹೆಚ್ಚಿನವರು ಹೊರರಾಜ್ಯದವರು, ಆದರೆ ಎಲ್ಲರೂ ಅಲ್ಲ. ಒಬ್ಬ ಯುವಕ ಮತ್ತು ಇನ್ನೊಂದು ಯುವಕರ ಗುಂಪು ಐಪಿಎಲ್ ನಲ್ಲಿ ಆಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಘೋಷಣೆ ಕೂಗುತ್ತಾ ತಾವು ಕನ್ನಡಿಗರೆನ್ನುವುದನ್ನು ಪ್ರೂವ್ ಮಾಡುತ್ತಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: New Year 2025: ವರ್ಷದ ಮೊದಲ ದಿನ ಈ ರೀತಿ ಪ್ರಾರಂಭಿಸಿ; ನೀಮ್ ಕರೋಲಿ ಬಾಬಾ ಅವರ ಸಲಹೆ ಇಲ್ಲಿದೆ
Latest Videos