ಯುಗಾದಿಗೆ ನಿಮ್ಮ ಮುಂದೆ ಬರ್ತಿದೆ ‘ಯುಐ’ ಸಿನಿಮಾ; ಎಲ್ಲಿ? ಎಷ್ಟು ಗಂಟೆಗೆ?
ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರವು ಮಾರ್ಚ್ 30ರಂದು ಟಿವಿಯಲ್ಲಿ ಪ್ರಸಾರ ಕಾಣುತ್ತಿದೆ. ಯೇಟರ್‌ನಲ್ಲಿ ಯಶಸ್ವಿಯಾದ ಈ ಚಿತ್ರ ಒಟಿಟಿಗೆ ಬಿಡುಗಡೆಯಾಗದೆ ನೇರವಾಗಿ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಚಿತ್ರದಲ್ಲಿ ಸಮಾಜದ ವಿವಿಧ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. "ಟ್ರೋಲ್" ಹಾಡು ವಿಶೇಷ ಆಕರ್ಷಣೆಯಾಗಿದೆ. ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ‘ಭೀಮ’ ಸಿನಿಮಾ ಕೂಡ ಅದೇ ದಿನ ಪ್ರಸಾರ ಕಾಣುತ್ತಿದೆ.

‘ಯುಐ’ ಚಿತ್ರವನ್ನು (UI) ಥಿಯೇಟರ್ನಲ್ಲಿ ನೋಡಿದ ಕೆಲವರು ಮೆಚ್ಚಿಕೊಂಡರು. ಈ ಚಿತ್ರ ಉಪೇಂದ್ರ ನಿರ್ದೇಶನದಲ್ಲಿ ಮೂಡಿ ಬಂದಿತ್ತು. ಈ ಚಿತ್ರ ಒಟಿಟಿಗೆ ಇನ್ನೂ ಲಗ್ಗೆ ಇಟ್ಟಿಲ್ಲ. ಸಿನಿಮಾ ಒಟಿಟಿಗೆ ಯಾವಾಗ ಬರುತ್ತದೆ ಎಂದು ಕಾದು ಪ್ರೇಕ್ಷಕರು ಸುಸ್ತಾಗಿದ್ದಾರೆ. ಆಗಲೇ ಈ ಸಿನಿಮಾ ಟಿವಿಗೆ ಬರುತ್ತಿದೆ. ಹೌದು, ಟಿವಿಯಲ್ಲಿ ಈ ಚಿತ್ರವನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಯುಗಾದಿಗೆ ಸರಿಯಾಗಿ ಈ ಸಿನಿಮಾ ನಿಮ್ಮ ಮುಂದೆ ಬರುತ್ತಿದೆ. ಈ ಚಿತ್ರವನ್ನು ಎಲ್ಲಿ ವೀಕ್ಷಿಸಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಉಪೇಂದ್ರ ನಿರ್ದೇಶನದ ಸಿನಿಮಾಗಳು ಎಂದರೆ ಭಿನ್ನವಾಗಿ ಇರುತ್ತವೆ. ಈ ಕಾರಣಕ್ಕೆ ಉಪ್ಪಿ ನಿರ್ದೇಶನ ಮಾಡಬೇಕು ಎಂಬುದು ಅವರ ಅಭಿಮಾನಿಗಳ ಕೋರಿಕೆ. ಹೀಗಾಗಿ ಹಲವು ವರ್ಷಗಳ ಬಳಿಕ ‘ಯುಐ’ ಚಿತ್ರವನ್ನು ಉಪ್ಪಿ ಘೋಷಣೆ ಮಾಡಿದರು. ಈ ಚಿತ್ರ ಕಳೆದ ಡಿಸೆಂಬರ್ 20ರಂದು ಥಿಯೇಟರ್ನಲ್ಲಿ ಬಿಡುಗಡೆ ಆಯಿತು. ಈಗ ದೊಡ್ಡ ಗ್ಯಾಪ್ ಬಳಿಕ ಟಿವಿಗೆ ಬರುತ್ತಿದೆ.
ಯುಗಾದಿ ಪ್ರಯುಕ್ತ ಮಾರ್ಚ್ 30ರಂದು ‘ಯುಐ’ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣಲಿದೆ. ಭಾನುವಾರ ಸಂಜೆ 4.30ರಿಂದ ಸಿನಿಮಾ ಪ್ರಸಾರ ಆರಂಭಿಸುತ್ತದೆ. ‘ಯುಐ’ ಸಿನಿಮಾ ಭಿನ್ನವಾಗಿದೆ. ಈ ಚಿತ್ರದಲ್ಲಿ ಹಲವು ವಿಚಾರಗಳನ್ನು ಉಪೇಂದ್ರ ಹೇಳಿದ್ದಾರೆ. ಈ ಚಿತ್ರದ ಒಂದು ದೃಶ್ಯ ಮಿಸ್ ಮಾಡಿಕೊಂಡರೂ ಕಥೆ ಅರ್ಥ ಆಗದೇ ಇರಬಹುದು. ಹೀಗಾಗಿ, ಸಂಪೂರ್ಣವಾಗಿ ಟಿವಿ ಮುಂದೆ ಕುಳಿತಿದ್ದರೆ ಮಾತ್ರ ಸಿನಿಮಾ ಅರ್ಥ ಆಗಲಿದೆ.
View this post on Instagram
ಕಥೆ ಏನು?
‘ಯುಐ’ ಚಿತ್ರದ ಕಥೆ ಏನು ಎಂಬುದನ್ನು ವಿವರಿಸುವುದು ಕಷ್ಟ ಆಗಬಹುದು. ಹೀಗಾಗಿ, ಅದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಸಮಾಜದ ಹುಳುಕುಗಳನ್ನು ಅವರು ಹೇಳುವ ಪ್ರಯತ್ನ ಮಾಡಿದ್ದಾರೆ. ಅವರದ್ದೇ ಆದ ಪಕ್ಷ ಪ್ರಜಾಕೀಯದ ಐಡಿಯಾಲಜಿಗಳು ಚಿತ್ರದಲ್ಲಿ ಇವೆ. ‘ಟ್ರೋಲ್..’ ಸಾಂಗ್ ಕೂಡ ಗಮನ ಸೆಳೆದಿದೆ. ಉಪೇಂದ್ರ ಜೊತೆ ಸಾಧು ಕೋಕಿಲ, ರೀಷ್ಮಾ ನಾಣಯ್ಯ, ರವಿ ಶಂಕರ್ ನಟಿಸಿದ್ದಾರೆ. ಇತ್ತೀಚೆಗೆ ನಿಧನ ಹೊಂದಿದ ಗುರು ಪ್ರಸಾದ್ ಕೂಡ ಚಿತ್ರದಲ್ಲಿ ಇದ್ದಾರೆ.
ಇದನ್ನೂ ಓದಿ: ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಬರ್ತಿದೆ ‘ಭೀಮ’ ಸಿನಿಮಾ
ಕಲರ್ಸ್ನಲ್ಲಿ ಭೀಮ
ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ‘ಭೀಮ’ ಸಿನಿಮಾ ಕೂಡ ಮಾರ್ಚ್ 30ರಂದು ಪ್ರಸಾರ ಕಾಣುತ್ತಿದೆ. ‘ಯುಐ’ ಚಿತ್ರ 4.30ಕ್ಕೆ ಪ್ರಸಾರ ಆರಂಭಿಸಿದರೆ ‘ಭೀಮ’ ಸಿನಿಮಾ ಸಂಜೆ 7.30ಕ್ಕೆ ಪ್ರಸಾರ ಆಗುತ್ತದೆ. ಕಲರ್ಸ್ನಲ್ಲಿ ‘ಭೀಮ’ ವೀಕ್ಷಣೆಗೆ ಲಭ್ಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:16 am, Wed, 26 March 25