ಈ ವಾರ ತೆರೆಗೆ ಬರುತ್ತಿವೆ ಸ್ಟಾರ್ ನಟರ ಸಿನಿಮಾಗಳು
Movies: ಐಪಿಎಲ್ 2025ರ ಅಬ್ಬರದ ನಡುವೆಯೂ ಈ ವಾರ ಕೆಲ ಒಳ್ಳೆಯ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆ ಕಾಣುತ್ತಿವೆ. ಯೋಗರಾಜ್ ಭಟ್ ನಿರ್ದೇಶಿಸಿ, ‘ಮುಂಗಾರು ಮಳೆ’ ನಿರ್ಮಾಪಕ ಇ ಕೃಷ್ಣಪ್ಪ ನಿರ್ಮಾಣ ಮಾಡಿರುವ ಸಿನಿಮಾ ಸಹ ಈ ವಾರ ತೆರೆಗೆ ಬರುತ್ತಿದೆ. ಇದರ ಜೊತೆಗೆ ಕೆಲ ಸ್ಟಾರ್ ನಟರ ಸಿನಿಮಾಗಳು ಸಹ ಪಟ್ಟಿಯಲ್ಲಿವೆ. ಇಲ್ಲಿದೆ ನೋಡಿ ಪಟ್ಟಿ...

ಐಪಿಎಲ್ 2025 ಪ್ರಾರಂಭವಾಗಿದೆ. ತಂಡಗಳು ರನ್ ಬೆಟ್ಟವನ್ನೇ ಕಟ್ಟುತ್ತಿವೆ. ಐಪಿಎಲ್ ಅಬ್ಬರದ ನಡುವೆಯೂ ಕೆಲ ಬಿಗ್ ಬಜೆಟ್ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೆ ಮುಂದಾಗಿವೆ. ಕಳೆದ ವಾರ ಯಾವುದೇ ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆ ಆಗಿರಲಿಲ್ಲ. ಆದರೆ ಈ ವಾರ ಹಾಗಿಲ್ಲ. ಕನ್ನಡದ ನಿರೀಕ್ಷಿತ ಸಿನಿಮಾ ಒಂದರ ಜೊತೆಗೆ ಪರಭಾಷೆಯ ಕೆಲ ದೊಡ್ಡ ನಟರ ಸಿನಿಮಾಗಳು ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿವೆ. ಇಲ್ಲಿದೆ ನೋಡಿ ಈ ವಾರ ಬಿಡುಗಡೆ ಆಗುತ್ತಿರುವ ಪ್ರಮುಖ ಸಿನಿಮಾಗಳ ಪಟ್ಟಿ…
ಮನದ ಕಡಲು
‘ಮನದ ಕಡಲು’ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಇದೇ ಶುಕ್ರವಾರ (ಮಾರ್ಚ್ 28) ಬಿಡುಗಡೆ ಆಗಲಿದೆ. ‘ಮುಂಗಾರು ಮಳೆ’ ಜೋಡಿಯಾದ ಯೋಗರಾಜ್ ಭಟ್ ಮತ್ತು ಇ ಕೃಷ್ಣಪ್ಪ ಅವರು ‘ಮನದ ಕಡಲು’ ಸಿನಿಮಾಕ್ಕಾಗಿ ಮತ್ತೆ ಒಂದಾಗಿದ್ದಾರೆ. ಯೋಗರಾಜ್ ಭಟ್ ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಇ ಕೃಷ್ಣಪ್ಪ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಸುಮುಖ್, ರಶಿಕಾ ಶೆಟ್ಟಿ, ಅಂಜಲಿ ಅನೀಶ್, ರಂಗಾಯಣ ರಘು ಅವರುಗಳು ನಟಿಸಿದ್ದಾರೆ. ಸಂಗೀತ ವಿ ಹರಿಕೃಷ್ಣ ಅವರದ್ದು.
ವೀರ ಧೀರ ಶೂರನ್ 2
ಚಿಯಾನ್ ವಿಕ್ರಂ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ವೀರ ಧೀರ ಶೂರನ್’ ಭಾಗ 2 ಸಿನಿಮಾ ನಾಳೆ (ಮಾರ್ಚ್ 27) ತೆರೆಗೆ ಬರುತ್ತಿದೆ. ತಮಿಳಿನ ಈ ಸಿನಿಮಾ ಕನ್ನಡ ಸೇರಿದಂತೆ ಇತರೆ ಕೆಲ ಭಾಷೆಗಳಲ್ಲಿಯೂ ಏಕಕಾಲದಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ಅನ್ನು ಅರುಣ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಚಿಯಾನ್ ವಿಕ್ರಂ ಜೊತೆಗೆ ಎಸ್ಜೆ ಸೂರ್ಯ ಸಹ ನಟಿಸಿದ್ದಾರೆ. ಜಿವಿ ಪ್ರಕಾಶ್ ಸಂಗೀತವಿದೆ.
ಎಲ್ 2: ಎಂಪುರನ್
ಮೋಹನ್ ಲಾಲ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಲುಸಿಫರ್’ ಸಿನಿಮಾದ ಮುಂದುವರೆದ ಭಾಗ ‘ಎಲ್2: ಎಂಪುರನ್’ ಸಿನಿಮಾ ನಾಳೆ (ಮಾರ್ಚ್ 27) ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಪ್ಯಾನ್ ಇಂಡಿಯಾ ಮಲಯಾಳಂ ಸಿನಿಮಾ ಇದಾಗಿದ್ದು, ಮಲಯಾಳಂ, ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ. ಸಿನಿಮಾ ನಿರ್ದೇಶನ ಮಾಡಿರುವುದು ಮತ್ತೊಬ್ಬ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್.
ಇದನ್ನೂ ಓದಿ:ಜೂ ಎನ್ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಸಿಖಂಧರ್
ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟಿಸಿರುವ ‘ಸಿಂಖಧರ್’ ಸಿನಿಮಾ ಮಾರ್ಚ್ 30 ರಂದು ಬಿಡುಗಡೆ ಆಗಲಿದೆ. ತಮಿಳಿನ ಸ್ಟಾರ್ ನಿರ್ದೇಶಕ ಎ ಮುರುಗದಾಸ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಸಲ್ಮಾನ್ ಖಾನ್ರ ಆಪ್ತ ಗೆಳೆಯ ಸಾಜಿದ್ ನಾಡಿಯಾವಾಲ. ಸಿನಿಮಾದಲ್ಲಿ ಕನ್ನಡದ ನಟ ಕಿಶೋರ್ ಸಹ ಇದ್ದಾರೆ. ಜೊತೆಗೆ ಸತ್ಯರಾಜ್, ಕಾಜಲ್ ಅಗರ್ವಾಲ್, ಪ್ರತೀಕ್ ಬಬ್ಬರ್ ಅವರುಗಳು ಸಹ ಇದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ