AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aishwarya Shindogi: ಐಶ್ವರ್ಯಾಗೆ ಭರ್ಜರಿ ಅದೃಷ್ಟ; ಹೆಚ್ಚುವರಿಯಾಗಿ ಅವರಿಗೆ ಸಿಕ್ಕ ದಿನಗಳೆಷ್ಟು?

Bigg Boss Kannada Elimination: ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಐಶ್ವರ್ಯಾ ಶಿಂಧೋಗಿ ಅವರ ಎಲಿಮಿನೇಷನ್ ಆಗಿದೆ. ಈ ಮೊದಲು ಅನಿರೀಕ್ಷಿತ ಟ್ವಿಸ್ಟ್​ನಲ್ಲಿ ಶೋಭಾ ಶೆಟ್ಟಿ ಅವರ ಹೊರಗುಳಿಯುವಿಕೆಯಿಂದ ಐಶ್ವರ್ಯಾ ಉಳಿದರು. ಮೂರು ತಿಂಗಳ ಕಾಲ ದೊಡ್ಮನೆಯಲ್ಲಿದ್ದ ಅವರು ಅನೇಕ ಸವಾಲುಗಳನ್ನು ಎದುರಿಸಿದರು.

Aishwarya Shindogi: ಐಶ್ವರ್ಯಾಗೆ ಭರ್ಜರಿ ಅದೃಷ್ಟ; ಹೆಚ್ಚುವರಿಯಾಗಿ ಅವರಿಗೆ ಸಿಕ್ಕ ದಿನಗಳೆಷ್ಟು?
ಐಶ್ವರ್ಯಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Dec 30, 2024 | 7:31 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಐಶ್ವರ್ಯಾ ಶಿಂಧೋಗಿ ಅವರು ಎಲಿಮಿನೇಟ್ ಆಗಿದ್ದಾರೆ. ಮೂರು ತಿಂಗಳ ಕಾಲ ದೊಡ್ಮನೆಯಲ್ಲಿ ಸಮಯ ಕಳೆದ ಅವರು ಈಗ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದಿದ್ದಾರೆ. ಅವರು ಅತ್ಯುತ್ತಮವಾಗಿ ಆಟ ಆಡಿ ಎಲ್ಲರ ಗಮನ ಸೆಳೆದರು. ಆದಾಗ್ಯೂ ಅವರಿಗೆ ದೊಡ್ಮನೆಯಲ್ಲಿ ಫಿನಾಲೆ ತಲುಪುವ ಅವಕಾಶ ಸಿಗಲೇ ಇಲ್ಲ. ಐಶ್ವರ್ಯಾಗೆ ಇತ್ತೀಚೆಗೆ ಸಾಕಷ್ಟು ಅವಕಾಶಗಳು ಸಿಕ್ಕಿದ್ದವು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆದಿವೆ.

ಡಿಸೆಂಬರ್ 1ರಂದು (ಭಾನುವಾರ) ಐಶ್ವರ್ಯಾ ಹಾಗೂ ಶಿಶಿರ್ ಅವರು ಎಲಿಮಿನೇಷನ್ ಕೊನೆಯ ಹಂತದಲ್ಲಿ ಇದ್ದರು. ಆ ಸಮಯದಲ್ಲಿ ಐಶ್ವರ್ಯಾಗಿಂತ ಶಿಶಿರ್ ಅವರು ಉತ್ತಮವಾಗಿ ಆಟ ಆಡುತ್ತಿದ್ದರು. ಹೀಗಾಗಿ, ಐಶ್ವರ್ಯಾ ಎಲಿಮಿನೇಟ್ ಆಗುತ್ತಿದ್ದುದು ಬಹುತೇಕ ಖಚಿತ ಆಗಿತ್ತು. ಪ್ರೇಕ್ಷಕರಿಗೆ ಮಾತ್ರವಲ್ಲ ಸ್ವತಃ ಐಶ್ವರ್ಯಾ ಅವರಿಗೂ ಈ ವಿಚಾರ ಪಕ್ಕಾ ಆಯಿತು. ಈ ಕಾರಣದಿಂದಲೇ ಅವರ ಕಣ್ಣಲ್ಲಿ ನೀರು ಬಂದಿತ್ತು. ಆಗ ಎದುರಾಗಿತ್ತು ಟ್ವಿಸ್ಟ್.

ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟ ಶೋಭಾ ಶೆಟ್ಟಿ ಆಗಲೇ ಕುಗ್ಗಿ ಹೋಗಿದ್ದರು. ಅವರು ದೊಡ್ಮನೆಯಿಂದ ಹೊರ ಹೋಗುತ್ತೇನೆ ಎಂದರು. ಸುದೀಪ್ ಅವರು ಶೋಭಾ ಅವರ ಮನ ಒಲಿಸುವ ಕೆಲಸ ಮಾಡಿದರು. ಆದರೆ, ಶೋಭಾ ಮಾತು ಕೇಳಲೇ ಇಲ್ಲ. ಆ ವಾರ ಎಲಿಮಿನೇಷನ್ ನಡೆಯಲೇ ಇಲ್ಲ. ಬದಲಿಗೆ ಶೋಭಾ ಶೆಟ್ಟಿ ಅವರು ಔಟ್ ಆದರು. ಈ ಮೂಲಕ ಐಶ್ವರ್ಯಾ ಬಚಾವ್ ಆದರು.

ಮುಂದಿನ ವಾರ ಐಶ್ವರ್ಯಾ ಅವರು ನಾಮಿನೇಟ್ ಆಗಲೇ ಇಲ್ಲ. ಅದಕ್ಕೂ ಮುಂದಿನ ವಾರಗಳಲ್ಲಿ ಐಶ್ವರ್ಯಾ ನಾಮಿನೇಟ್ ಆದಾಗ ವೋಟಿಂಗ್ ಲೈನ್ ತೆರೆಯುತ್ತಿರಲಿಲ್ಲ. ಹೀಗಾಗಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಿರಲಿಲ್ಲ. ಐಶ್ವರ್ಯಾ ನಾಮಿನೇಟ್ ಆಗದೇ ಇದ್ದಾಗ ಎಲಿಮಿನೇಷನ್ ಪ್ರಕ್ರಿಯೆ ನಡೆಸಿ ಬೇರೆಯವರನ್ನು ಎಲಿಮಿನೇಟ್ ಮಾಡಲಾಯಿತು. ಈ ಎಲ್ಲಾ ಕಾರಣಕ್ಕೆ ಐಶ್ವರ್ಯಾ ಅವರು ಒಂದು ತಿಂಗಳು ಹೆಚ್ಚುವರಿಯಾಗಿ ದೊಡ್ಮನೆಯಲ್ಲಿ ಉಳಿದುಕೊಂಡರು.

ಇದನ್ನೂ ಓದಿ: BBK 11 Elimination: ‘ಹೋಗಿ ಬಾ ಮಗಳೇ’; ಐಶ್ವರ್ಯಾಗೆ ಬಿಗ್ ಬಾಸ್ ಭಾವುಕ ವಿದಾಯ

ಐಶ್ವರ್ಯಾ ಅವರು ಸಾಕಷ್ಟು ಕಷ್ಟದಿಂದ ಜೀವನ ನಡೆಸಿದವರು. ತಂದೆ-ತಾಯಿ ಇಲ್ಲದೆ ಅವರು ಜೀವನ ಸಾಗಿಸುತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ಕೊಂಚ ಸಿಂಪತಿಯೂ ಸಿಕ್ಕಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:30 am, Mon, 30 December 24