ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋನಲ್ಲಿ ಇನ್ನು ಉಳಿದಿರುವುದು ಕೆಲವೇ ದಿನಗಳು ಮಾತ್ರ. ಫಿನಾಲೆ ಸಮೀಪ ಆದಂತೆಲ್ಲ ಪೈಪೋಟಿಯ ಕಾವು ಜೋರಾಗುತ್ತಿದೆ. ಈಗ ಕೆಲವೇ ಮಂದಿ ಮಾತ್ರ ದೊಡ್ಮನೆಯೊಳಗೆ ಇದ್ದಾರೆ. ಪರಸ್ಪರರ ತಪ್ಪುಗಳನ್ನು ಟೀಕಿಸಲಾಗುತ್ತಿದೆ. ಭಾನುವಾರದ (ಡಿಸೆಂಬರ್ 29) ಸಂಚಿಕೆಯಲ್ಲಿ ಈ ವಿಷಯ ನಡೆದಿದೆ.
ತಟ್ಟೆಯಲ್ಲಿ ಸ್ಪರ್ಧಿಗಳ ಫೋಟೋ ಇಡಲಾಗಿದೆ. ಆ ಸ್ಪರ್ಧಿಯ ಯಾವ ಗುಣ ಬದಲಾಗಬೇಕು ಎಂದು ಕಮೆಂಟ್ ಮಾಡಿ, ಸುತ್ತಿಗೆಯಿಂದ ಪ್ಲೇಟ್ ಒಡೆಯಲಾಗಿದೆ. ಗುಣವನ್ನು ಟೀಕಿಸುವಾಗ ಮಾತಿನ ಏಟು ನೀಡಲಾಗಿದೆ. ಆ ಪ್ರೋಮೋ ಇಲ್ಲಿದೆ. ಇನ್ನೇನು ಸ್ವಲ್ಪ ದಿನಗಳಲ್ಲೇ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದ ಫಿನಾಲೆ ಬರಲಿದೆ. ಯಾರು ಗೆಲ್ಲುತ್ತಾರೆ ಎಂಬುದನ್ನು ತಿಳಿಯುವ ಕೌತುಕ ವೀಕ್ಷಕರಲ್ಲಿ ಹೆಚ್ಚಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Dec 29, 2024 04:34 PM
Latest Videos