AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್ ಸಿಕ್ಕ ಮೇಲೆ ಬದುಕು ಬದಲಾಯಿತು; ಅರ್ಜುನ್ ಜನ್ಯ ಹೇಳಿದ ಅಪರೂಪದ ವಿಚಾರ

ಅರ್ಜುನ್ ಜನ್ಯ ಅವರು ಕನ್ನಡ ಚಲನಚಿತ್ರರಂಗದ ಪ್ರಮುಖ ಸಂಗೀತ ಸಂಯೋಜಕರಾಗಿದ್ದಾರೆ. ‘ಕೆಂಪೇಗೌಡ’ ಚಿತ್ರದ ನಂತರ ಅವರ ವೃತ್ತಿಜೀವನ ಬದಲಾಯಿತು. ಕಿಚ್ಚ ಸುದೀಪ್ ಅವರೊಂದಿಗಿನ ಸಹಯೋಗವು ಅವರಿಗೆ ದೊಡ್ಡ ತಿರುವು ನೀಡಿತು ಎಂದು ಅರ್ಜುನ್ ಜನ್ಯ ಅವರು ‘ಸರಿಗಮಪ’ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ‘ಕೆಂಪೇಗೌಡ’ ಚಿತ್ರದ ಯಶಸ್ಸಿನ ನಂತರ, ಅವರ ಕೆಲಸದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

ಸುದೀಪ್ ಸಿಕ್ಕ ಮೇಲೆ ಬದುಕು ಬದಲಾಯಿತು; ಅರ್ಜುನ್ ಜನ್ಯ ಹೇಳಿದ ಅಪರೂಪದ ವಿಚಾರ
ಸುದೀಪ್ - ಅರ್ಜುನ್ ಜನ್ಯ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jan 06, 2025 | 8:03 AM

Share

ಅರ್ಜುನ್ ಜನ್ಯ ಅವರು ಈಗಿನ ಕನ್ನಡದ ಅತಿ ಬೇಡಿಕೆಯ ಸಂಗೀತ ಸಂಯೋಜಕರಲ್ಲಿ ಒಬ್ಬರು. ಅವರು ಹಲವು ಸೂಪರ್ ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ. ಅದರಲ್ಲೂ ಅವರು ಕಂಪೋಸ್ ಮಾಡಿದ ಮೆಲೋಡಿ ಸಾಂಗ್​ಗಳು ಹೆಚ್ಚು ಇಷ್ಟ ಆಗುತ್ತವೆ. ಪ್ರತಿ ವರ್ಷ ಅವರು ಕಂಪೋಸ್ ಮಾಡುವ 10ಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆಗುತ್ತವೆ. ಇದಕ್ಕೆ ಕಾರಣ ಆಗಿರೋದು ಕಿಚ್ಚ ಸುದೀಪ್ ಎಂದು ಹಳೆಯ ಘಟನೆಯನ್ನು ಅವರು ನೆನಪು ಮಾಡಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿ ನೋಡೋಣ.

ಕಿಚ್ಚ ಸುದೀಪ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅದರಲ್ಲಿ ‘ಕೆಂಪೇಗೌಡ’ ಸಿನಿಮಾ ಕೂಡ ಒಂದು. ಅವರದ್ದೇ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿದ್ದು ಮಾತ್ರವಲ್ಲ ಅರ್ಜುನ್ ಜನ್ಯ ಬದುಕು ಕೂಡ ಬದಲಾಯಿಸಿತು ಎಂಬುದು ಅವರ ಮಾತು.

ಕಳೆದ ವಾರ ‘ಸರಿಗಮಪ’ ವೇದಿಕೆ ಮೇಲೆ ಸುದೀಪ್ ಅವರು ಆಗಮಿಸಿದರು. ಅವರು, ಜಡ್ಜ್​​ಗಳಾದ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಜೊತೆ ಕುಳಿತಿದ್ದರು. ಈ ಮೂವರಿಗೂ ಸುದೀಪ್ ಜೊತೆ ಬಾಂಧವ್ಯ ಇದೆ. ಗೆಳೆತನದ ಬಗ್ಗೆ ಹೇಳುವಾಗ ಅರ್ಜುನ್ ಜನ್ಯ ಅವರು ಹಳೆಯ ಘಟನೆಯೊಂದನ್ನು ಹೇಳಿದರು. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಯಿತು.

‘ಕೆಂಪೇಗೌಡ ಸಿನಿಮಾ ಮಾಡುವುದಕ್ಕೂ ಮೊದಲು ನಾನು 12 ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದೆ. ಅದೂ ಐದು ವರ್ಷಗಳಲ್ಲಿ. ಯಾವಾಗ ಕೆಂಪೇಗೌಡ ಸಿನಿಮಾ ಬಂತೋ ವರ್ಷಕ್ಕೆ 12 ಸಿನಿಮಾ ಮಾಡುವಂತೆ ಆಯಿತು’ ಎಂದರು ಅರ್ಜುನ್ ಜನ್ಯ. ಸದ್ಯ ಅರ್ಜುನ್ ಜನ್ಯ ಕೈಯಲ್ಲಿ ಸುಮಾರು 10ಕ್ಕೂ ಅಧಿಕ ಸಿನಿಮಾಗಳಿವೆ. ಅರ್ಜುನ್ ಜನ್ಯ ಅವರು ರಿಯಾಲಿಟಿ ಶೋಗಳ ಜೊತೆಗೆ ಸಿನಿಮಾ ಹಾಡುಗಳನ್ನು ಕಂಪೋಸ್ ಮಾಡಲು ಸಮಯ ಮೀಸಲಿಡುತ್ತಿದ್ದಾರೆ.

ಇದನ್ನೂ ಓದಿ: ನೋಡುವಷ್ಟು ನೋಡಿ ಹನುಮಂತನ ಮುಖವಾಡ ಕಳಚಿದ ಕಿಚ್ಚ ಸುದೀಪ್

ಸುದೀಪ್ ಅವರು ‘ಸರಿಗಮಪ’ ವೇದಿಕೆ ಮೇಲೆ ಸಖತ್ ಫನ್ ಆಗಿ ನಡೆಯಿತು. ಎಲ್ಲಾ ಸ್ಪರ್ಧಿಗಳಿಗೆ ಬೆನ್ನು ತಟ್ಟುವ ಕೆಲಸ ಮಾಡಿದರು. ಈ ಎಪಿಸೋಡ್ ಸಾಕಷ್ಟು ಮೆಚ್ಚುಗೆ ಪಡೆಯಿತು. ಸುದೀಪ್ ಕುಟುಂಬದವರು ಕೂಡ ಬಂದು ಗಮನ ಸೆಳೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.