ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?

ಮಂಜುನಾಥ ಸಿ.
|

Updated on: Jan 09, 2025 | 5:04 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ರ ಫಿನಾಲೆಗೆ ಕೆಲವೇ ದಿನಗಳು ಉಳಿದಿವೆ. ಎಲ್ಲ ಸ್ಪರ್ಧಿಗಳು ಶಕ್ತಿಮೀರಿ ಪ್ರದರ್ಶನ ತೋರುತ್ತಿದ್ದಾರೆ. ಎಲ್ಲರಿಗೂ ಫಿನಾಲೆ ಟಿಕೆಟ್ ಗಿಟ್ಟಿಸಿಕೊಳ್ಳುವ ಆಸೆ. ಆದರೆ ಟಾಸ್ಕ್​ಗಳು ಒಂದಕ್ಕಿಂತಲೂ ಒಂದು ಕಠಿಣ ಆಗುತ್ತಾ ಸಾಗುತ್ತಿವೆ. ಇದೀಗ ಉಗ್ರಂ ಮಂಜು ಹಾಗೂ ಗೌತಮಿ ಒಟ್ಟಾಗಿ ಟಾಸ್ಕ್ ಆಡಿದ್ದು ಯಾರು ಗೆದ್ದಿದ್ದಾರೆ ಎಂಬುದು ಗೊತ್ತಾಗಲಿದೆ.

ಫಿನಾಲೆಗೆ ಇನ್ನು ಕೆಲವೇ ದಿನ ಬಾಕಿ ಇದೆ. ಫಿನಾಲೆಗೆ ಹೋಗಲು ಸ್ಪರ್ಧಿಗಳು ಶಕ್ತಿಮೀರಿ ಯತ್ನಿಸುತ್ತಿದ್ದಾರೆ. ಟಾಸ್ಕ್​ಗಳು ಸಹ ಕಠಿಣ ಆಗುತ್ತಲೇ ಸಾಗುತ್ತಿವೆ. ಇದೀಗ ಕಠಿಣವಾದ ಟಾಸ್ಕ್ ಒಂದನ್ನು ಬಿಗ್​ಬಾಸ್ ಸ್ಪರ್ಧಿಗಳಿಗೆ ನೀಡಿದ್ದಾರೆ. ಸತತವಾಗಿ ನೀರು ತುಂಬುತ್ತಿರುವ ತೊಟ್ಟಿಯಲ್ಲಿ ಒಬ್ಬ ಸ್ಪರ್ಧಿ ಮಲಗಬೇಕು, ಮತ್ತೊಬ್ಬ ಸ್ಪರ್ಧಿ ಆ ತೊಟ್ಟಿಯಿಂದ ನೀರನ್ನು ತೆಗೆದುಕೊಂಡು ಹೋಗಿ ದೂರದಲ್ಲಿ ಇರಿಸಿರುವ ಟ್ಯಾಂಕ್​ಗೆ ಸುರಿಯಬೇಕು, ಯಾರು ಹೆಚ್ಚು ಸಮಯ ಇನ್ನೊಬ್ಬ ಸ್ಪರ್ಧಿಯನ್ನು ಮುಳುಗಿಸದೆ ನೋಡಿಕೊಳ್ಳುತ್ತಾರೋ ಅವರು ಗೆದ್ದಂತೆ. ಈ ಟಾಸ್ಕ್​ನಲ್ಲಿ ಗೌತಮಿ ಮತ್ತು ಉಗ್ರಂ ಮಂಜು ಆಡಿದ್ದಾರೆ. ‘ಇದೊಂದು ಬಾರಿ ಗೆಳೆಯನನ್ನು ನೀರಲ್ಲಿ ಮುಳುಗಿಸಬೇಡಿ’ ಎಂದು ಗೌತಮಿ ಬಳಿ ಮನವಿ ಮಾಡಿದ್ದಾರೆ. ಆದರೆ ಗೌತಮಿ ಮಾಡಿದ್ದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ