ನಟಿ ತಾರಾಗೆ ಗೌರವ ಡಾಕ್ಟರೇಟ್: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಹಿರಿಯ ನಟಿ ತಾರಾ ಅವರಿಗೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ. ಆ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಉತ್ತರ ಕರ್ನಾಟಕದ ಜೊತೆ ತಮಗೆ ಇರುವ ನಂಟಿನ ಬಗ್ಗೆ ಅವರು ಮಾತಾಡಿದರು. ‘ಈ ಭಾಗಕ್ಕೂ ನನಗೂ ಅವಿನಾಭಾವ ನಂಟು ಇದೆ’ ಎಂದು ಅವರು ಹೇಳಿದರು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದಲ್ಲಿ ತಾರಾ ಅನುರಾಧಾ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ‘ತುಂಬ ಹೆಮ್ಮೆ ಎನಿಸುತ್ತಿದೆ. ಕಲಾವಿದೆಯಾಗಿ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರಬಹುದು. ಆದರೆ ಮಹಿಳಾ ವಿಶ್ವವಿದ್ಯಾಲಯ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿದ್ದು ನನ್ನ ಗುರು-ಹಿರಿಯರ ಆಶೀರ್ವಾದ ಅಂತ ಭಾವಿಸುತ್ತೇನೆ. ಕಳೆದ ಜನ್ಮದಲ್ಲಿ ನಾನು ಉತ್ತರ ಕರ್ನಾಟಕದವಳೇ ಆಗಿರಬೇಕು. ಮೊದಲು ಎಂಎಲ್ಸಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದು ಇಲ್ಲೇ. ನನ್ನ ಮಗ ಹೊಟ್ಟೆಯಲ್ಲಿ ಇದ್ದಾನೆ ಅಂತ ಗೊತ್ತಾಗಿದ್ದು ಇಲ್ಲಿಗೆ ಶೂಟಿಂಗ್ ಬಂದಾಗ. ಹಲವು ಸಿನಿಮಾಗಳ ಶೂಟಿಂಗ್ ಇಲ್ಲಿ ಮಾಡಿದ್ದೇನೆ. ಅದೆಲ್ಲ ಒಳ್ಳೆಯ ನೆನಪುಗಳು’ ಎಂದು ತಾರಾ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos