ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಶಿರೋಳ ಗ್ರಾಮದ ಓರ್ವ ರೈತ ತನ್ನ ಬೆಳೆಗೆ ದೃಷ್ಟಿ ತಾಗಬಾರದೆಂದು ವಿನೂತನ ದಾರಿ ಕಂಡುಕೊಂಡಿದ್ದಾರೆ. ಕಲ್ಮೇಶ್ ಹಾಗೂ ಶಿವಕುಮಾರ ಹಂಚಿನಾಳ ರೈತ ಸಹೋದರರು ತಮ್ಮ ಹೊಲದಲ್ಲಿ ಬೆಳೆದಿರುವ ಎಲೆಕೋಸು ಬೆಳೆಗೆ ದೃಷ್ಟಿ ತಾಗದಿರಲೆಂದು ಗೊಂಬೆ ಬದಲಿಗೆ ಚಿತ್ರನಟಿಯರ ಭಾವಚಿತ್ರ ನೇತು ಹಾಕಿದ್ದಾರೆ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಶಿರೋಳ ಗ್ರಾಮದ ಓರ್ವ ರೈತ ತನ್ನ ಬೆಳೆಗೆ ದೃಷ್ಟಿ ತಾಗಬಾರದೆಂದು ವಿನೂತನ ದಾರಿ ಕಂಡುಕೊಂಡಿದ್ದಾರೆ. ಕಲ್ಮೇಶ್ ಹಾಗೂ ಶಿವಕುಮಾರ ಹಂಚಿನಾಳ ರೈತ ಸಹೋದರರು ತಮ್ಮ ಹೊಲದಲ್ಲಿ ಬೆಳೆದಿರುವ ಎಲೆಕೋಸು ಬೆಳೆಗೆ ದೃಷ್ಟಿ ತಾಗದಿರಲೆಂದು ಗೊಂಬೆ ಬದಲಿಗೆ ಚಿತ್ರನಟಿಯರಾದ ರಚಿತಾ ರಾಮ್, ರಶ್ಮಿಕಾ, ಶ್ರೀಲೀಲಾ, ರೀಷ್ಮಾ ಭಾವಚಿತ್ರ ನೇತು ಹಾಕಿದ್ದಾರೆ.
ಸಹೋದರರು ಹಿಂದೆ ಇದೇ ಹೊಲದಲ್ಲಿ ಕಲ್ಲಂಗಡಿ ಬೆಳೆದಿದ್ದರು. ಚೆನ್ನಾಗಿ ಬೆಳೆದ ಕಲ್ಲಂಗಡಿಗೆ ಜನರ ದೃಷ್ಟಿ ಬಿದ್ದು ಮುಂದೆ ಸರಿಯಾಗಿ ಬೆಳೆಯದೆ ಲಾಸ್ ಆಗಿತ್ತು. ಹೀಗಾಗಿ, ಇದೀಗ ಜನರ ವಕ್ರ ದೃಷ್ಟಿ ತಪ್ಪಿಸಲು ರೈತರ ಸಹೋದರರು ಚಿತ್ರ ನಟಿಯರು ಕಟೌಟ್ ಹಾಕಿದ್ದಾರೆ.
Latest Videos