ಕೊವಿಡ್ ನಿಯಮ ಉಲ್ಲಂಘನೆ: ಅಧಿಕಾರಿಗಳನ್ನು ನೋಡುತ್ತಲೇ ವಧುವನ್ನೇ ಬಿಟ್ಟು ವರ ಪರಾರಿ!
ಚಿಕ್ಕಮಗಳೂರಿನ ಕಡೀರು ತಾಲೂಕಿನ ಕರಿಕಲ್ಲಳ್ಳಿಯಲ್ಲಿ ಮದುವೆಯ ಆರ್ಭಟ ಜೋರಾಗಿ ನಡೆಯುತ್ತಿತ್ತು. ಕೊವಿಡ್ ನಿಯಮ ಉಲ್ಲಂಘನೆ ಮಾಡಿರುವ ವಿಷಯ ತಿಳಿಯುತ್ತಿದ್ದಂತೆಯೇ ಜೋಡಿಹೋಚಿಹಳ್ಳಿ ಗ್ರಾಮ ಪಂಚಾಯತಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿರುವುದನ್ನು ಕಂಡಿದ್ದೇ ತಡ, ವಧುವನ್ನು ಮಂಟಪದಲ್ಲೇ ಬಿಟ್ಟು ವರ ಪರಾರಿಯಾಗಿದ್ದಾನೆ.
ಚಿಕ್ಕಮಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಿದಾಡುತ್ತಿರುವ ಕಾರಣದಿಂದಾಗಿ ಲಾಕ್ಡೌನ್ ಜಾರಿಯಲ್ಲಿದೆ. ಹಲವು ಕಟ್ಟುನಿಟ್ಟಿನ ಕ್ರಮವನ್ನು ಪಾಲಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಮದುವೆ-ಸಮಾರಂಭಗಳನ್ನು ಆದಷ್ಟು ಕಡಿಮೆ ಮಾಡಿ ಎಂದು ಸೂಚಿಸಲಾಗಿದೆ. ಜತೆಗೆ ಮದುವೆಯಲ್ಲಿ ಕಡಿಮೆ ಜನ ಸೇರುವಂತೆ ಹೇಳಲಾಗಿದೆ. ಅದಾಗ್ಯೂ ಕೂಡಾ ಹೆಚ್ಚು ಜನರನ್ನು ಸೇರಿಸಿ ಮದುವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಷಯ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಮಧುವನ್ನು ಮಂಟಪದಲ್ಲೆ ಬಿಟ್ಟು ವರ ಪರಾರಿಯಾದ ಘಟನೆ ನಡೆದಿದೆ.
ಚಿಕ್ಕಮಗಳೂರಿನ ಕಡೂರು ತಾಲೂಕಿನ ಕರಿಕಲ್ಲಳ್ಳಿಯಲ್ಲಿ ಮದುವೆಯ ಆರ್ಭಟ ಜೋರಾಗಿ ನಡೆಯುತ್ತಿತ್ತು. ಕೊವಿಡ್ ನಿಯಮ ಉಲ್ಲಂಘಿಸಿ ಅದ್ದೂರಿ ಮದುವೆಗೆ ಏರ್ಪಾಟು ಮಾಡಲಾಗಿತ್ತು. ಅಧಿಕಾರಿಗಳ ಬಳಿ 10 ಜನರಿಗೆ ಅನುಮತಿ ಪಡೆದು ನೂರಾರು ಮಂದಿಗೆ ಆಹ್ವಾನ ನೀಡಿ ಮದುವೆ ನಡೆಸಲಾಗಿತ್ತು. ಬಂದ ಅತಿಥಿಗಳಿಗೆ ಭಾರೀ ಭೋಜನದ ವ್ಯವಸ್ಥೆ ಮಾಡಿದ್ದರು. ಕೊವಿಡ್ ನಿಯಮ ಉಲ್ಲಂಘನೆ ಮಾಡಿರುವ ವಿಷಯ ತಿಳಿಯುತ್ತಿದ್ದಂತೆಯೇ ಜೋಡಿಹೋಚಿಹಳ್ಳಿ ಗ್ರಾಮ ಪಂಚಾಯತಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿರುವುದನ್ನು ಕಂಡಿದ್ದೇ ತಡ, ವಧುವನ್ನು ಮಂಟಪದಲ್ಲೇ ಬಿಟ್ಟು ವರ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಧಾರವಾಡದಲ್ಲಿ ಮದುವೆಗೆ ನಿಷೇಧ; ಕೊರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಮಹತ್ವದ ನಿರ್ಧಾರ
ವಿಮಾನದಲ್ಲಿ ಮದುವೆಯಾದರೂ ಕೊವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ಶುರುವಾಯ್ತು ತನಿಖೆ
Published On - 5:18 pm, Tue, 25 May 21