Quran: ಕೊರೊನಾ ತೊಲಗಲಿ ಎಂದು ಕುಂದಗೋಳ ತಾಲೂಕಿನಲ್ಲಿ ಮುಸಲ್ಮಾನ ಮಹಿಳೆಯರಿಂದ ಕುರಾನ್ ಪಠಣ
Muslim women: ಕುಂದಗೋಳ ತಾಲೂಕಿನ ಹಿರೇ ಹರಕುಣಿ ಗ್ರಾಮದಲ್ಲಿ ಹಜರತ್ ಸೈಯದ ದಾದಾಪೀರ್ ದರ್ಗಾದಲ್ಲಿ ಐದು ದಿನಗಳ ಕಾಲ ಪ್ರತಿ ದಿನ ಬೆಳಿಗ್ಗೆ 5 ರಿಂದ 7 ವರೆಗೆ ನಿರಂತರ ಕುರಾನ ಪಠಣ ಹಮ್ಮಿಕೊಳ್ಳಲಾಗಿದೆ. ಮುಸಲ್ಮಾನ ಮಹಿಳೆಯರಿಗೆ ಗ್ರಾಮದ ಮುಸ್ಲಿಂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಹ ಸಾಥ್ ನೀಡಿದ್ದಾರೆ.
ಹುಬ್ಬಳ್ಳಿ: ಕೊರೊನಾ ಕ್ರಿಮಿಯ ಮುಂದೆ ಬಲಾಢ್ಯ ಮನುಜ ಸೋತು ಬಸವಳಿಸಿದ್ದಾನೆ. ಹೇಗಾದರೂ ಸರಿಯೇ ಈ ಪೆಡಂಭೂತದ ಕಾಟ ದೂರವಾಗಲಿ ಎಂದು ಸಿಕ್ಕಿಸಿಕ್ಕಿದ ಆಚರಣೆಗಳಿಗೆಲ್ಲಾ ಮೊರೆಹೋಗುತ್ತಿದ್ದಾನೆ. ಅದು ದೈವ ಬಲವೋ, ಮೂಢನಂಬಿಕೆಯೋ ಮತ್ತೊಂದೋ… ಒಟ್ಟು ಮನುಜ ಕುಲ ಅದರಿಂದ ಪಾರಾದರೆ ಸಾಕಪ್ಪಾ ಅನ್ನಿಸಿಬಿಟ್ಟಿದೆ. ಮನುಷ್ಯನನ್ನು ಕೊರೊನಾ ಅಷ್ಟೊಂದು ದಯನೀಯ ಸ್ಥಿತಿಗೆ ದೂಡಿಬಿಟ್ಟಿದೆ. ಅದು ಚಪ್ಪಾಳೆ ಹೊಡೆಯುವುದೋ, ಜಾಗಟೆ ಬಾರಿಸುವುದೋ, ಹೋಮ ಹವನ ಮಾಡಿಸುವುದೋ ಅಥವಾ ಊರ ಮಂದಿಯೆಲ್ಲಾ ಸೇರಿಕೊಂಡು ಅನ್ನ ತೋಡಿಕೊಂಡು ಟ್ರ್ಯಾಕ್ಟರ್ನಲ್ಲಿ ಅದನ್ನು ಊರ ಹೊರಗೆ ಚೆಲ್ಲುವುದು.. ಹೀಗೆ ನಾನಾ ಆಚರಣೆಗಳಲ್ಲಿ ಮನುಷ್ಯ ತೊಡಗಿದ್ದಾನೆ. ಇದರ ಸಾರಾಂಶ ಇಷ್ಟೇ… ಹೇಗಾದರೂ ಮಾಡಿ ಶತಮಾನದ ಪೆಡಂಭೂತ ಕೊರೊನಾ ತೊಲಗಲಿ ಎಂಬ ಸದುದ್ದೇಶವಿದೆಯಷ್ಟೇ. ಹಾಗಂತ ಇದು ಮೂಢನಂಬಿಕೆಯನ್ನು ಪೋಷಿಸುವುದು ಅಂತಲ್ಲ. ಆದರೂ ಜನ ತಮಗೆ ತೋಚಿದಂತೆ ತಮ್ಮ ಶಕ್ತ್ಯಾನುಸಾರ ಕೊರೊನಾ ವಿರೋಧಿ ಆಚರಣೆಯಲ್ಲಿ ತೊಡಗಿದ್ದಾರೆ.
ತಾಜಾ ಪ್ರಕರಣದಲ್ಲಿ.. ಕೊರೊನಾ ತೊಲಗಲಿ ಎಂದು ಕುರಾನ್ ಪಠಣ ನಡೆದಿದೆ. ಪ್ರತಿದಿನ ಬೆಳಗ್ಗೆ 5ರಿಂದ 7ರವರೆಗೆ ಕುರಾನ್ ಪಠಣ ನಡೆಯುತ್ತಿದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಿರೇ ಹರಕುಣಿ ಗ್ರಾಮದಲ್ಲಿ ಹೀಗೆ ಕುರಾನ್ ಪಠಣ ನಡೆದಿದೆ. ಕೊರೊನಾ ಓಡಿಸಲು ಗ್ರಾಮದ ಮುಸ್ಲಿಂ ಮಹಿಳೆಯರು ಕುರಾನ್ ಪಠಣಕ್ಕೆ ಮೊರೆಹೋಗಿದ್ದಾರೆ. ಗ್ರಾಮದಲ್ಲಿ ಕೊರೊನಾ ಹೆಚ್ಚಾದ ಹಿನ್ನೆಲೆಯಲ್ಲಿ ಮುಸ್ಲಿಂ ಮಹಿಳೆಯರು ಕುರಾನ್ ಪಠಣದಲ್ಲಿ ತೊಡಗಿದ್ದಾರೆ.
ಗ್ರಾಮದ ಹಜರತ್ ಸೈಯದ ದಾದಾಪೀರ್ ದರ್ಗಾದಲ್ಲಿ ಐದು ದಿನಗಳ ಕಾಲ ಪ್ರತಿ ದಿನ ಬೆಳಿಗ್ಗೆ 5 ರಿಂದ 7 ವರೆಗೆ ನಿರಂತರ ಕುರಾನ ಪಠಣ ಹಮ್ಮಿಕೊಳ್ಳಲಾಗಿದೆ. ಮುಸಲ್ಮಾನ ಮಹಿಳೆಯರಿಗೆ ಗ್ರಾಮದ ಮುಸ್ಲಿಂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಹ ಸಾಥ್ ನೀಡಿದ್ದಾರೆ. ಇದು ಅವರವರ ನಂಬಿಕೆಯ ವಿಷಯವಷ್ಟೇ…
(another superstition or desperation during corona times muslims in a village in kundgol dharwad chant noble quran for 5 days)
Published On - 9:48 am, Wed, 26 May 21