Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸಿಲ್ಲವೆಂದು ವಿವಾಹಿತೆ ಆತ್ಮಹತ್ಯೆ.. ಗಂಡನನ್ನು ಅರೆಸ್ಟ್ ಮಾಡಿದ ಪೊಲೀಸರು

ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸಿಲ್ಲವೆಂದು ಮಮತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದ್ದು ಮೃತ ಮಮತಾಳ ಪೋಷಕರು ಪತಿಯೇ ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಸದ್ಯ ಮಹಾದೇವ್ ಅಲಿಯಾಸ್ ಮಣಿಕಂಠನನ್ನು ಗುಡಿಬಂಡೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸಿಲ್ಲವೆಂದು ವಿವಾಹಿತೆ ಆತ್ಮಹತ್ಯೆ.. ಗಂಡನನ್ನು ಅರೆಸ್ಟ್ ಮಾಡಿದ ಪೊಲೀಸರು
ಮಮತಾ ಮತ್ತು ಮಹಾದೇವ್
Follow us
ಆಯೇಷಾ ಬಾನು
|

Updated on: May 26, 2021 | 10:06 AM

ಚಿಕ್ಕಬಳ್ಳಾಪುರ: ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸಿಲ್ಲವೆಂದು ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ವಾಲ್ಮೀಕಿನಗರದಲ್ಲಿ ನಡೆದಿದೆ. 17 ವರ್ಷದ ವಿವಾಹಿತೆ ಮಮತಾ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸಿಲ್ಲವೆಂದು ಮಮತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದ್ದು ಮೃತ ಮಮತಾಳ ಪೋಷಕರು ಪತಿಯೇ ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಸದ್ಯ ಮಹಾದೇವ್ ಅಲಿಯಾಸ್ ಮಣಿಕಂಠನನ್ನು ಗುಡಿಬಂಡೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಮಹಾದೇವ್ ಅಪ್ರಾಪ್ತೆಯನ್ನು ಪ್ರೀತಿಸಿ ಕಾನೂನುಬಾಹಿರವಾಗಿ ಬಲವಂತವಾಗಿ ಮದುವೆಯಾಗಿದ್ದನಂತೆ. ಮಹಾದೇವ್ ಅಲಿಯಾಸ್ ಮಣಿಕಂಠನೇ ನನ್ನ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ. ಪ್ರೀತಿ ಹೆಸರಲ್ಲಿ ಮದುವೆಯಾಗಿ ನಂಬಿಸಿ ಮೋಸ ಮಾಡಿ ಈಗ ಕೊಲೆನೂ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಗುಡಿಬಂಡೆ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಬಳಿಕವೇ ಸತ್ಯ ಹೊರ ಬೀಳಲಿದೆ.

ಇದನ್ನೂ ಓದಿ… ಪ್ರಿಯತಮೆಗೆ ಬಟ್ಟೆ ಕೊಡಿಸುತ್ತಿದ್ದ ಪತಿಗೆ ಎಲ್ಲರೆದುರೂ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ; ಗಲಾಟೆ ಮಧ್ಯೆ ಲವರ್​ ಸೈಲೆಂಟ್ ಎಸ್ಕೇಪ್​

ಎತ್ತುಗಳಿಗೆ ಮಾಸ್ಕ್ ಹಾಕಿ ಕೂರಿಗೆ ಪೂಜೆ ನಡೆಸಿದ ಬಾಗಲಕೋಟೆಯ ರೈತ ಕುಟುಂಬ

(17 year old married girl hanged herself police arrest husband in chikkaballapur)