ಕೋವಿಡ್, ಬ್ಲ್ಯಾಕ್ ಫಂಗಸ್ ಗೆದ್ದ ವ್ಯಕ್ತಿ ಹೃದಯಾಘಾತದಿಂದ ಸಾವು…

heart attack: ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಬ್ಲ್ಯಾಕ್ ಫಂಗಸ್‌ ವಿರುದ್ಧವೂ ಹೋರಾಡಿ ಗುಣಮುಖರಾಗಿದ್ದರು. ಮೂರು-ನಾಲ್ಕು ದಿನಗಳಿಂದ ಮನೆಯಲ್ಲಿದ್ದರು. ಆದರೆ ನಿನ್ನೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕೋವಿಡ್, ಬ್ಲ್ಯಾಕ್ ಫಂಗಸ್ ಗೆದ್ದ ವ್ಯಕ್ತಿ ಹೃದಯಾಘಾತದಿಂದ ಸಾವು...
ಕೋವಿಡ್, ಬ್ಲ್ಯಾಕ್ ಫಂಗಸ್ ಗೆದ್ದ ವ್ಯಕ್ತಿ ಹೃದಯಾಘಾತದಿಂದ ಸಾವು...
Follow us
ಸಾಧು ಶ್ರೀನಾಥ್​
|

Updated on: May 26, 2021 | 10:16 AM

ಬಾಗಲಕೋಟೆ: ಕೊರೊನಾ ಕಾಲದಲ್ಲಿ ಸಾವು ಯಾವೆಲ್ಲಾ ರೂಪದಲ್ಲಿ ಬಂದೆರಗುತ್ತದೋ ಮನುಷ್ಯನ ಎಣಿಕೆಗೆ ಸಿಲುಕದ ವಿಷಯವಾಗಿದೆ. ವೈದ್ಯರೂ ಎಷ್ಟೇ ಹರಸಾಹಸ ಪಟ್ಟರೂ ಅವರಿಂದಲೂ ಜನರನ್ನು ಬದುಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟರಮಟ್ಟಿಗೆ ಕೊರೊನಾ ಕ್ರಮಿಯ ಅಟ್ಟಹಾಸ ಮಿತಿಮೀರಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹನಗಂಡಿ ಗ್ರಾಮದ 45 ವರ್ಷದ ವ್ಯಕ್ತಿಯೊಬ್ಬರು ಮೊದಲು ಕೋವಿಡ್, ಬಳಿಕ ಬ್ಲ್ಯಾಕ್ ಫಂಗಸ್ ವಿರುದ್ಧ ಗೆದ್ದಿದ್ದರೂ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಸಾಗರ ದಾದಾಸಾಹೇಬ ದೇಸಾಯಿ(45) ಮೃತ ವ್ಯಕ್ತಿ. ಕೋವಿಡ್ ನಿಂದ ನರಳಾಡಿ ಗುಣಮುಖರಾಗುವಷ್ಟರಲ್ಲಿ ಅವರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿತ್ತು. ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಬ್ಲ್ಯಾಕ್ ಫಂಗಸ್‌ ವಿರುದ್ಧವೂ ಹೋರಾಡಿ ಗುಣಮುಖರಾಗಿದ್ದರು. ಕಳೆದ ಮೂರು-ನಾಲ್ಕು ದಿನಗಳಿಂದ ಮನೆಯಲ್ಲಿದ್ದರು. ಆದರೆ ನಿನ್ನೆ ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬ್ಲ್ಯಾಕ್ ಫಂಗಸ್‌ನಿಂದ ಪಾರಾಗಿದ್ದರೂ ನಂತರದ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ ದೇಸಾಯಿಗೆ ಪತ್ನಿ ಮತ್ತು ಇಬ್ಬರು ಪುತ್ರರಿದ್ದಾರೆ.

(after waging battle successfully against coronavirus and black fungus a villager loses battle for heart attack in hanagandi village)

Family Suicide: 17 ವರ್ಷದ ಮಗ ಹೃದಯಾಘಾತದಿಂದ ಸಾವು, ನೋವು ತಾಳಲಾರದೆ ಮನೆಯವರೆಲ್ಲ ನೇಣಿಗೆ ಶರಣು