ಕೊರೊನಾ ವಾರಿಯರ್​ ಆಗಿ ಕಾರ್ಯನಿರ್ವಹಿಸುತ್ತಿರುವ ಏಳು ತಿಂಗಳ ಗರ್ಭಿಣಿ; ಪಿಎಸ್​ಐ ಕರ್ತವ್ಯ ನಿಷ್ಠೆಗೆ ಜನರ ಮೆಚ್ಚುಗೆ

ಹಾವೇರಿ ಜಿಲ್ಲೆ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮಹಿಳಾ ಪಿಎಸ್ಐ ಆಗಿ ಕೆಲಸ ಮಾಡುತ್ತಿರುವ ದೀಪು.ಎಂ.ಟಿ. ಸದ್ಯ ಎಲ್ಲರಿಗೆ ಮಾದರಿಯಾಗಿದ್ದಾರೆ. ಮೂರು ವರ್ಷಗಳ‌ ಹಿಂದೆ ಪಿಎಸ್ಐ ಆಗಿ ನೇಮಕವಾಗಿರುವ ದೀಪು, ಕಳೆದ ಕೆಲವು ತಿಂಗಳುಗಳಿಂದ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೊರೊನಾ ವಾರಿಯರ್​ ಆಗಿ ಕಾರ್ಯನಿರ್ವಹಿಸುತ್ತಿರುವ ಏಳು ತಿಂಗಳ ಗರ್ಭಿಣಿ; ಪಿಎಸ್​ಐ ಕರ್ತವ್ಯ ನಿಷ್ಠೆಗೆ ಜನರ ಮೆಚ್ಚುಗೆ
ಮಹಿಳಾ ಪಿಎಸ್ಐ ದೀಪು.ಎಂ.ಟಿ.
Follow us
preethi shettigar
|

Updated on: May 26, 2021 | 11:08 AM

ಹಾವೇರಿ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಹೀಗಾಗಿ ಸರ್ಕಾರ ಪರಿಸ್ಥಿತಿಯನ್ನು ಸುಧಾರಿಸಲು ಲಾಕ್​ಡೌನ್ ಘೋಷಣೆ ಮಾಡಿದೆ. ಜತೆಗೆ ಆರೋಗ್ಯದ ಬಗ್ಗೆ ಜನರು ಹೆಚ್ಚು ಕಾಳಜಿ ವಹಿಸುವಂತೆ ಸೂಚಿಸಿದೆ. ಹೀಗಾಗಿ ಕೊರೊನಾ ಕಾಲಘಟ್ಟದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುವುದು ಸೂಕ್ತ. ಅದರಲ್ಲೂ ಗರ್ಭಿಣಿಯರು ಹೆಚ್ಚು ಮುತುವರ್ಜಿ ವಹಿಸುವುದು ಅಗತ್ಯವಾಗಿದೆ. ಆದರೆ ಹಾವೇರಿಯ ಮಹಿಳಾ ಪಿಎಸ್ಐ ಏಳು ತಿಂಗಳ ಗರ್ಭಿಣಿ ಆಗಿದ್ದರೂ, ಕೊರೊನಾಗೆ ಹೆದರದೆ, ಕೊವಿಡ್ ನಿಯಂತ್ರಣಕ್ಕೆ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಜತೆಗೆ ಕೊರೊನಾ ವಾರಿಯರ್ ಆಗಿ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ.

ಹಾವೇರಿ ಜಿಲ್ಲೆ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮಹಿಳಾ ಪಿಎಸ್ಐ ಆಗಿ ಕೆಲಸ ಮಾಡುತ್ತಿರುವ ದೀಪು.ಎಂ.ಟಿ. ಸದ್ಯ ಎಲ್ಲರಿಗೆ ಮಾದರಿಯಾಗಿದ್ದಾರೆ. ಮೂರು ವರ್ಷಗಳ‌ ಹಿಂದೆ ಪಿಎಸ್ಐ ಆಗಿ ನೇಮಕವಾಗಿರುವ ದೀಪು, ಕಳೆದ ಕೆಲವು ತಿಂಗಳುಗಳಿಂದ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗ ಪಿಎಸ್ಐ ದೀಪು ಏಳು ತಿಂಗಳ ಗರ್ಭೀಣಿ, ಚೊಚ್ಚಲ ಹೆರಿಗೆಗೆ ವೈದ್ಯರು ಆಗಸ್ಟ್ ತಿಂಗಳಲ್ಲಿ ದಿನಾಂಕ‌ ನೀಡಿದ್ದಾರೆ.

ಆದರೆ ಈಗ ಎಲ್ಲೆಲ್ಲೂ ಕೊರೊನಾ ಎರಡನೇ ಅಲೆಯ ಅಬ್ಬರ ಶುರುವಾಗಿದೆ. ಕೆಲವೆಡೆ ಕೊರೊನಾ ವಾರಿಯರ್ಸ್ ಆಗಿರುವ ಪೊಲೀಸರು ಮತ್ತು ಪೊಲೀಸ್ ಅಧಿಕಾರಿಗಳಿಗೆ ಕೊರೊನಾ ಸೋಂಕು ತಗುಲುತ್ತಿದೆ. ಆದರೂ ಪಿಎಸ್ಐ ದೀಪು ಯಾವುದಕ್ಕೂ ಭಯಪಡದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜನರ ಓಡಾಟ, ಅಂಗಡಿ ಮುಂಗಟ್ಟುಗಳ ಕಾರ್ಯನಿರ್ವಹಣೆ ಬಗ್ಗೆ ನಿಗಾ ವಹಿಸುತ್ತಾ ಕೊರೊನಾ ನಿಯಂತ್ರಣಕ್ಕೆ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಸಿಖ್ ಲಿವ್ ಇದ್ದರು ರಜೆ ಪಡೆಯದೆ ಕೊರೊನಾ ಅಬ್ಬರದ ಈ ಸಮಯದಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೊರೊನಾ ಎರಡನೆ ಅಲೆ ಶುರುವಾದ ಮೇಲೆ ಕೊರೊನಾ ಸೋಂಕಿನಿಂದ ಕೆಲವೆಡೆ ಪೊಲೀಸರು ಮತ್ತು ಪೊಲೀಸ್ ಅಧಿಕಾರಿಗಳು ಮೃತಪಟ್ಟ ಸುದ್ದಿ ಕೇಳಿದಾಗ ಕೊರೊನಾ ಬಗ್ಗೆ ಭಯ ಅನ್ನಿಸಿತ್ತು. ಆದರೆ ಇಲಾಖೆಯ ಕರ್ತವ್ಯವನ್ನು ಚಾಚೂ ತಪ್ಪದೆ ಪಾಲನೆ ಮಾಡಬೇಕು ಎಂಬ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ ಎಂದು ಹಿರೇಕೆರೂರು ಪೊಲೀಸ್ ಠಾಣೆ ಪಿಎಸ್ಐ ದೀಪು.ಎಂ.ಟಿ ಹೇಳಿದ್ದಾರೆ.

ಯಾವುದಕ್ಕೂ ಹೆದರದೆ ಮುಂಜಾಗ್ರತಾ ಕ್ರಮಗಳೊಂದಿಗೆ ಗರ್ಭಿಣಿಯಾಗಿರುವ ಪಿಎಸ್ಐ ದೀಪು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಅರೆ. ಅನಗತ್ಯವಾಗಿ ಹೊರಗೆ ಓಡಾಡುವವರ ಬಗ್ಗೆ ಯಾವ ಮುಲಾಜು ಇಲ್ಲದೆ ಬೈಕ್, ಕಾರ್ ಗಳನ್ನ ಸೀಜ್ ಮಾಡುವುದು, ದಂಡ ಹಾಕಿಸುವುದು ಸೇರಿದಂತೆ ಖಡಕ್‌ ನಿರ್ಧಾರಗಳ ಮೂಲಕ ಕೊರೊನಾ ಸೋಂಕು ಹರಡದಂತೆ ತಡೆಯಲು ಕೆಲಸ ಮಾಡುತ್ತಿದ್ದಾರೆ. ಏಳು ತಿಂಗಳ ಗರ್ಭಿಣಿಯತಾಗಿದ್ದರೂ, ಯಾವುದಕ್ಕೂ ಹೆದರದೆ ಕೊರೊನಾ ಎರಡನೆ ಅಲೆಯ ಈ ಅಬ್ಬರದಲ್ಲಿ ಕೆಲಸ‌ ಮಾಡುತ್ತಿರುವ ಪಿಎಸ್ಐ ದೀಪು ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ:

ಏಳು ತಿಂಗಳ ಗರ್ಭಿಣಿ, ತರಬೇತಿ ನಿರತ ಪೊಲೀಸ್​ ಸಿಬ್ಬಂದಿ ಕೊರೊನಾಗೆ ಬಲಿ; ಕರ್ನಾಟಕ ಪೊಲೀಸ್​ ಇಲಾಖೆಯಲ್ಲಿ ಸಾವಿಗೀಡಾದ ಕಿರಿಯ ಸಿಬ್ಬಂದಿ

ಕೊರೊನಾ ಎರಡನೇ ಅಲೆಯಲ್ಲಿ 180 ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸೋಂಕು; ಬಳ್ಳಾರಿ ಜನರಲ್ಲಿ ಹೆಚ್ಚಿದ ಆತಂಕ