AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಳು ತಿಂಗಳ ಗರ್ಭಿಣಿ, ತರಬೇತಿ ನಿರತ ಪೊಲೀಸ್​ ಸಿಬ್ಬಂದಿ ಕೊರೊನಾಗೆ ಬಲಿ; ಕರ್ನಾಟಕ ಪೊಲೀಸ್​ ಇಲಾಖೆಯಲ್ಲಿ ಸಾವಿಗೀಡಾದ ಕಿರಿಯ ಸಿಬ್ಬಂದಿ

ಗರ್ಭಿಣಿಯಾಗಿದ್ದ ಕಾರಣ ಕೊರೊನಾ ಲಸಿಕೆ ಪಡೆಯದೇ ಉಳಿದಿದ್ದ ಶಾಮಿಲಿ ಸೋಂಕಿಗೆ ತುತ್ತಾದ ತಕ್ಷಣವೇ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ. ಮೇ 2ರಂದು ಕೋಲಾರದ ಆರ್​ಎಂ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.

ಏಳು ತಿಂಗಳ ಗರ್ಭಿಣಿ, ತರಬೇತಿ ನಿರತ ಪೊಲೀಸ್​ ಸಿಬ್ಬಂದಿ ಕೊರೊನಾಗೆ ಬಲಿ; ಕರ್ನಾಟಕ ಪೊಲೀಸ್​ ಇಲಾಖೆಯಲ್ಲಿ ಸಾವಿಗೀಡಾದ ಕಿರಿಯ ಸಿಬ್ಬಂದಿ
ಕೊರೊನಾ ಸೋಂಕಿನಿಂದ ನಿಧನರಾದ ತರಬೇತಿ ನಿರತ ಪಿಎಸ್​ಐ ಶಾಮಿಲಿ
Skanda
|

Updated on: May 18, 2021 | 2:26 PM

Share

ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಅತ್ಯಂತ ಅಪಾಯಕಾರಿಯಾಗಿ ವರ್ತಿಸುತ್ತಿದ್ದು ವಯಸ್ಸಿನ ಭೇದಭಾವವಿಲ್ಲದೆ ಅನೇಕರು ಸೋಂಕಿಗೆ ಜೀವ ಕಳೆದುಕೊಂಡಿದ್ದಾರೆ. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ತರಬೇತಿ ನಿರತ ಪಿಎಸ್​ಐ ಆಗಿದ್ದ 24ವರ್ಷದ ಶಾಮಿಲಿ ಎಂಬುವವರು ಇಂದು ಕೋಲಾರದ ಆಸ್ಪತ್ರೆಯಲ್ಲಿ ಮುಂಜಾನೆ 4.30ರ ಸುಮಾರಿಗೆ ನಿಧನರಾಗಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯಂತ ಕಿರಿಯ ವಯಸ್ಸಿನವರು ಕೊರೊನಾ ಸೋಂಕಿನಿಂದ ಸಾವನಪ್ಪಿರುವ ಘಟನೆ ಇದಾಗಿದ್ದು, ಮೃತರು ಏಳು ತಿಂಗಳ ಗರ್ಭಿಣಿಯಾಗಿದ್ದರು ಎನ್ನುವ ವಿಚಾರವೂ ತಿಳಿದುಬಂದಿದೆ.

ಗರ್ಭಿಣಿಯಾಗಿದ್ದ ಕಾರಣ ಕೊರೊನಾ ಲಸಿಕೆ ಪಡೆಯದೇ ಉಳಿದಿದ್ದ ಶಾಮಿಲಿ ಸೋಂಕಿಗೆ ತುತ್ತಾದ ತಕ್ಷಣವೇ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ. ಮೇ 2ರಂದು ಕೋಲಾರದ ಆರ್​ಎಂ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ. ಶಾಮಿಲಿ ಅವರು ಆಸ್ಪತ್ರೆಗೆ ದಾಖಲಾದಾಗಿನಿಂದ ಕೋಲಾರದ ಎಸ್​ಪಿ ಅವರು ವೈಯಕ್ತಿಕ ಮುತುವರ್ಜಿ ವಹಿಸಿದ್ದರಾದರೂ ಅವರನ್ನು ಉಳಿಸಿಕೊಳ್ಳಲಾಗಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ದಕ್ಷಿಣ ಕನ್ನಡ ವಿಭಾಗದಲ್ಲಿ 2021ರ ಜನವರಿ 12ರಂದು ಕರ್ತವ್ಯಕ್ಕೆ ಸೇರಿಕೊಂಡಿದ್ದ ಶಾಮಿಲಿ ರಜೆಯ ನಿಮಿತ್ತ ಲಾಕ್​ಡೌನ್​ಗೂ ಮುನ್ನ ಅಂದರೆ ಏಪ್ರಿಲ್ 20ರಂದು ಕೋಲಾರಕ್ಕೆ ತೆರಳಿದ್ದರು. ಆದರೆ, ಅಲ್ಲಿಗೆ ತೆರಳಿದ ಹತ್ತು ಹನ್ನೆರೆಡು ದಿನಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಪೊಲೀಸ್ ಇಲಾಖೆಯ ಕಿರಿಯ ಸಿಬ್ಬಂದಿ ಸಾವಿಗೆ ಡಿಜಿಪಿ ಪ್ರವೀಣ್ ಸೂದ್ ಸಂತಾಪ ವ್ಯಕ್ತಪಡಿಸಿದ್ದು, ಕೊರೊನಾ ವಿರುದ್ಧದ ಹೋರಾಟದಲ್ಲಿ ಪೊಲೀಸರಿಗೆ ಸಹಕರಿಸಿ ಇಂತಹ ಸಾವು ನೋವುಗಳನ್ನು ತಪ್ಪಿಸಲು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಒಂದೇ ಗ್ರಾಮದ 31 ಜನರಿಗೆ ಕೊರೊನಾ ಪಾಸಿಟಿವ್, 48 ಪೊಲೀಸ್​ ಸಿಬ್ಬಂದಿಗೂ ಸೋಂಕು ದೃಢ