AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಎರಡನೇ ಅಲೆಯಲ್ಲಿ 180 ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸೋಂಕು; ಬಳ್ಳಾರಿ ಜನರಲ್ಲಿ ಹೆಚ್ಚಿದ ಆತಂಕ

ಎರಡನೇ ಅಲೆಯಲ್ಲಿ 180ಕ್ಕೂ ಹೆಚ್ಚು ಮಂದಿ ಸೋಂಕಿಗೆ ಗುರಿಯಾಗಿದ್ದು, ಈ ಪೈಕಿ 134 ಮಂದಿ ಗರ್ಭಿಣಿಯರು ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಈಗಾಗಲೇ 7 ಸೋಂಕಿತ ಗರ್ಭಿಣಿಯರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ನಿಟ್ಟಿನಲ್ಲಿ ಗರ್ಭಿಣಿಯರು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಬೇಕು ಎಂದು ಜಿಲ್ಲಾಸ್ಪತ್ರೆ ವೈದ್ಯರಾದ ಡಾ.ಬಸರೆಡ್ಡಿ ಹೇಳಿದ್ದಾರೆ.

ಕೊರೊನಾ ಎರಡನೇ ಅಲೆಯಲ್ಲಿ 180 ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸೋಂಕು; ಬಳ್ಳಾರಿ ಜನರಲ್ಲಿ ಹೆಚ್ಚಿದ ಆತಂಕ
ಪ್ರಾತಿನಿಧಿಕ ಚಿತ್ರ
preethi shettigar
|

Updated on: May 22, 2021 | 3:55 PM

Share

ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಜಿಲ್ಲಾಡಳಿತ ಮತ್ತು ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ. ಹೀಗಿರುವಾಗಲೇ ಬಳ್ಳಾರಿ ಜಿಲ್ಲೆಯ ಗರ್ಭಿಣಿಯರಿಗೆ ಈಗ ಕೊರೊನಾ ಸೋಂಕು ತಗಲುತ್ತಿದ್ದು, ಭಯ ಇನ್ನಷ್ಟು ತೀವ್ರ ಹಂತ ತಲುಪಿದೆ. ಕೊರೊನಾ ಎರಡನೇ ಅಲೆಗೆ ಬಳ್ಳಾರಿಯ 180 ಕ್ಕೂ ಹೆಚ್ಚು ಗರ್ಭಿಣಿಯರು ತತ್ತರಿಸಿ ಹೋಗಿದ್ದು, ಸೋಂಕಿತ ಗರ್ಭಿಣಿಯರ ಜತೆಗೆ ಗರ್ಭದಲ್ಲಿರುವ ಮಗು ಕೂಡ ಸಾವನ್ನಪ್ಪುತ್ತಿದೆ.

ಕೊರೊನಾ ಮೊದಲ ಅಲೆಗಿಂತ ಎರಡನೇ ಅಲೆ ಗರ್ಭಿಣಿಯರಿಗೆ ಸಾಕಷ್ಟು ಸಮಸ್ಯೆಯನ್ನು ತಂದೊಡ್ಡುತ್ತಿದೆ. ಏಕೆಂದರೆ ಮೊದಲ ಅಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತ ಗರ್ಭಿಣಿಯರು ಹೆರಿಗೆಗಾಗಿ ದಾಖಲಾಗಿ ಯಾವುದೇ ತೊಂದರೆ ಇಲ್ಲದೇ ಹೆರಿಗೆ ಮಾಡಿಕೊಂಡು ವಾಪಾಸ್ಸಾಗುತ್ತಿದ್ದರು. ಆದರೆ ಈಗ ಎರಡನೇ ಅಲೆಯಲ್ಲಿ 180ಕ್ಕೂ ಹೆಚ್ಚು ಮಂದಿ ಸೋಂಕಿಗೆ ಗುರಿಯಾಗಿದ್ದು, ಈ ಪೈಕಿ 134 ಮಂದಿ ಗರ್ಭಿಣಿಯರು ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಈಗಾಗಲೇ 7 ಸೋಂಕಿತ ಗರ್ಭಿಣಿಯರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನು 4 ಗರ್ಭಿಣಿಯರಿಗೆ ಅಬೋಷನ್ ಆಗಿದೆ ಮತ್ತು 7 ಸೋಂಕಿತ ಗರ್ಭಿಣಿಯರಿಗೆ ಗರ್ಭದಲ್ಲಿಯೇ ಕಂದಮ್ಮಗಳು ಸಾವನ್ನಪ್ಪಿವೆ. ಈ ನಿಟ್ಟಿನಲ್ಲಿ ಗರ್ಭಿಣಿಯರು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಬೇಕು ಎಂದು ಜಿಲ್ಲಾಸ್ಪತ್ರೆ ವೈದ್ಯರಾದ ಡಾ.ಬಸರೆಡ್ಡಿ ಹೇಳಿದ್ದಾರೆ.

ಇದುವರೆಗೆ ಹೆರಿಗೆಯಾಗಿರುವ ಕೆಲವು ಗರ್ಭಿಣಿರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆದರೆ ಜನಿಸಿದ ನವಜಾತ ಶಿಶುಗಳಿಗೆ ಕೊರೊನಾ ಸೋಂಕು ದೃಢಪಟ್ಟಿಲ್ಲ ಎನ್ನುವುದು ಮಾತ್ರ ಸಮಾಧಾನಕರ ವಿಚಾರ. ಇದುವರೆಗೆ 2-3 ನವಜಾತ ಶಿಶುಗಳಿಗೆ ಪಾಸಿಟಿವ್ ಪತ್ತೆಯಾಗಿತ್ತು. ಡಿಸ್ಸಾರ್ಚ್ ಆಗುವ ವೇಳೆಗಾಗಲೇ ಆ ನವಜಾತ ಶಿಶುಗಳ ಕೊವಿಡ್ ರಿಪೋರ್ಟ್ ಕೂಡ ನೆಗಟಿವ್ ಬಂದಿದೆ. ಗರ್ಭಿಣಿಯರಿಗೆ ಹೆರಿಗೆಗೆ ಮುನ್ನ ಕೊವಿಡ್ ಟೆಸ್ಟ್ ಮಾಡಿಸಲಾಗುತ್ತಿದೆ. ಈ ವೇಳೆ ಕೆಲ ಗರ್ಭಿಣಿಯರಿಗೆ ಸೋಂಕು ದೃಢಪಡುತ್ತಿದೆ. ಇದು ಗರ್ಭಿಣಿರ ಆತಂಕಕ್ಕೆ ಕಾರಣವಾಗಿದೆ.

ಇನ್ನೂ ಜಿಲ್ಲಾ ಕೊವಿಡ್ ಆಸ್ಪತ್ರೆಗಳಲ್ಲಿ ಸೋಂಕಿತ ಗರ್ಭಿಣಿಯರ ಹೆರಿಗೆ ಮಾಡುವುದು ಸವಾಲಿನ ಕೆಲಸ. ಸ್ವಲ್ಪ ಹೆಚ್ಚು ಕಡಿಮೆಯಾದರೂ ವೈದ್ಯರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು ಇರುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯರ ತಂಡ ಪಿಪಿಇ ಕಿಟ್ ಧರಿಸಿ, ಸಾಕಷ್ಟು ಮುಂಜಾಗ್ರತ ಕ್ರಮಗಳನ್ನ ಕೈಗೊಂಡು ಸೋಂಕಿತ ಗರ್ಭಿಣಿಯರಿಗೆ ಇದುವರೆಗೆ ಯಶಸ್ವಿ ಹೆರಿಗೆ ಮಾಡಿದ್ದಾರೆ.

ಜಿಲ್ಲೆಯಲ್ಲಿ ಒಂದು ಕಡೆ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇನ್ನೊಂದು ಕಡೆ ಗರ್ಭಿಣಿಯರಲ್ಲಿ ಸೋಂಕು ಹೆಚ್ಚಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಹೆಚ್ಚಿನ ಗಮನಹರಿಸಿ ಮುಂದೆ ಆಗುವ ಅನಾಹುತವನ್ನು ತಪ್ಪಿಸಬೇಕಿದೆ.

ಇದನ್ನೂ ಓದಿ:

ಕೊರೊನಾದಿಂದ ತಂದೆ-ತಾಯಿಯನ್ನು ಕಳೆದುಕೊಂಡ ಸಾವಿರ ಮಕ್ಕಳಿಗೆ ಸಹಾಯ ಮಾಡುತ್ತಿರುವ ನಟಿ ಲಕ್ಷ್ಮೀ ಮಂಚು

ಬೆಂಗಳೂರಲ್ಲಿ 4 ಗರ್ಭಿಣಿಯರಿಗೆ ಕೊರೊನಾ ದೃಢ! ಎಲ್ಲ ಗರ್ಭಿಣಿಯರಿಗೆ ಕೋವಿಡ್​ ಪರೀಕ್ಷೆ ಕಡ್ಡಾಯ