ಕೊರೊನಾದಿಂದ ತಂದೆ-ತಾಯಿಯನ್ನು ಕಳೆದುಕೊಂಡ ಸಾವಿರ ಮಕ್ಕಳಿಗೆ ಸಹಾಯ ಮಾಡುತ್ತಿರುವ ನಟಿ ಲಕ್ಷ್ಮೀ ಮಂಚು
ಟೀಚ್ ಫಾರ್ ಚೇಂಜ್ ಎನ್ಜಿಓ ಮೂಲಕ ಈ ಕೆಲಸ ಮಾಡಲಾಗುತ್ತಿದೆ. ಕೊವಿಡ್ನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ವಸತಿ, ಶಿಕ್ಷಣ ಮುಂತಾದ ಮೂಲಭೂತ ನೆರವುಗಳನ್ನು ನೀಡುವಲ್ಲಿ ಲಕ್ಷ್ಮೀ ಮಂಚು ಅವರ ಈ ಎನ್ಜಿಓ ನಿರತವಾಗಿದೆ.
ದೇಶಾದ್ಯಂತ ಕೊರೊನಾ ವೈರಸ್ ಹಾವಳಿ ಮಿತಿ ಮೀರಿದೆ. ಹಲವು ರೀತಿಯಲ್ಲಿ ಇದು ಜನರ ಮೇಲೆ ಪರಿಣಾಮ ಆಗಿದೆ. ಸಾವಿರಾರು ಜನರು ತಮ್ಮವರನ್ನು ಕಳೆದುಕೊಂಡು ಕಣ್ಣೀರು ಸುರಿಸುವಂತಾಗಿದೆ. ಅದರಲ್ಲೂ ಕೊವಿಡ್ನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಗೋಳು ಹೇಳತೀರದು. ಮಹಾಮಾರಿಯ ಶಾಪಕ್ಕೆ ಪಾಲಕರು ನಿಧನರಾದ ಕಾರಣ ಮಕ್ಕಳು ಅನಾಥರಾಗುವಂತಾಗಿದೆ. ಅಂಥ ಮಕ್ಕಳ ಭವಿಷ್ಯ ಚಿಂತಾಜನಕ ಆಗುತ್ತಿದೆ. ಇದನ್ನು ಅರಿತಿರುವ ಟಾಲಿವುಡ್ ನಟಿ ಲಕ್ಷ್ಮೀ ಮಂಚು ಅವರು ಸಹಾಯಕ್ಕೆ ಧಾವಿಸಿದ್ದಾರೆ.
ಕೊವಿಡ್ನಿಂದ ಉಂಟಾಗಿರುವ ದುರಂತ ಪರಿಸ್ಥಿತಿಯಲ್ಲಿ ಅನೇಕ ಸೆಲೆಬ್ರಿಟಿಗಳು ಜನರಿಗೆ ಸಹಾಯ ಮಾಡುತ್ತಿದ್ದಾರೆ. ದಿನಸಿ ನೀಡುವುದು, ಅಗತ್ಯ ವಸ್ತುಗಳನ್ನು ಪೂರೈಸುವುದು, ಆರ್ಥಿಕ ನೆರವು ನೀಡುವುದು ಮುಂತಾದ ಕೆಲಸಗಳಲ್ಲಿ ನಟ-ನಟಿಯರು ತೊಡಗಿಕೊಂಡಿದ್ದಾರೆ. ಟಾಲಿವುಡ್ನ ಅನುಭವಿ ನಟಿ ಲಕ್ಷ್ಮೀ ಮಂಚು ಕೂಡ ತಮ್ಮ ಎನ್ಜಿಓ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈಗ ಅವರು ಒಂದು ಸಾವಿರ ಮಕ್ಕಳಿಗೆ ನೆರವಾಗುತ್ತಿದ್ದಾರೆ.
ಟೀಚ್ ಫಾರ್ ಚೇಂಜ್ ಎನ್ಜಿಓ ಮೂಲಕ ಈ ಕೆಲಸ ಮಾಡಲಾಗುತ್ತಿದೆ. ಕೊವಿಡ್ನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ವಸತಿ, ಶಿಕ್ಷಣ ಮುಂತಾದ ಮೂಲಭೂತ ನೆರವುಗಳನ್ನು ನೀಡುವಲ್ಲಿ ಈ ಎನ್ಜಿಓ ನಿರತವಾಗಿದೆ. ‘ವೈಯಕ್ತಿಕವಾಗಿ ನಾನು ಅನೇಕರಿಗೆ ಸಹಾಯ ಮಾಡುತ್ತಿದ್ದೇನೆ. ಬೆಡ್ ವ್ಯವಸ್ಥೆ ಮಾಡುವುದರ ಜೊತೆಗೆ, ಔಷಧಿಗಳನ್ನು ಒದಗಿಸುತ್ತಿದ್ದೇನೆ. ಕೊವಿಡ್ನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಹೆಚ್ಚು ಕಷ್ಟ ಆಗುತ್ತಿದೆ. ನಮ್ಮ ಎನ್ಜಿಓ ಕಡೆಯಿಂದ ಇಂಥ ಮಕ್ಕಳಿಗೆ ಶಿಕ್ಷಣ, ಟ್ಯೂಷನ್, ಬಟ್ಟೆ ಮುಂತಾದನ್ನು ಒದಗಿಸುತ್ತೇವೆ’ ಎಂದು ಲಕ್ಷ್ಮೀ ಮಂಚು ಹೇಳಿದ್ದಾರೆ.
View this post on Instagram
ಕೊವಿಡ್ನಿಂದಾಗಿ ಅನೇಕ ಕುಟುಂಬಗಳು ತೊಂದರೆಗೆ ಒಳಗಾಗಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವರಿಗೆ ಪ್ರತಿ ದಿನ ಊಟದ ವ್ಯವಸ್ಥೆ ಮಾಡಿಕೊಳ್ಳುವುದು ಕಷ್ಟ ಆಗುತ್ತಿದೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ಪ್ರತಿ ದಿನ ಸಾವಿರ ಜನರಿಗೆ ಊಟ ವಿತರಿಸುವ ಕೆಲಸವನ್ನು ಲಕ್ಷ್ಮೀ ಮಂಚು ಅವರ ನೇತೃತ್ವದ ಎನ್ಜಿಓ ಮಾಡುತ್ತಿದೆ. ಅವರ ಈ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡದಲ್ಲಿ ಕೂಡ ಅನೇಕ ನಟ-ನಟಿಯರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಉಪೇಂದ್ರ, ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಚ, ಶ್ರೀಮುರಳಿ ಮುಂತಾದವರು ಜನರಿಗೆ ನೆರವಾಗುತ್ತಿದ್ದಾರೆ.
ಇದನ್ನೂ ಓದಿ:
Kichcha Sudeep: ಹಿರಿಯ ಕಲಾವಿದರ ಸಹಾಯಕ್ಕೆ ನಿಂತ ಸುದೀಪ್; ಅಗತ್ಯ ವಸ್ತುಗಳ ಜತೆ ಪತ್ರ ತಲುಪಿಸಿದ ಕಿಚ್ಚ
ಭುವನ್ ಪೊನ್ನಣ್ಣ ನಿಜವಾದ ಬಿಗ್ ಬಾಸ್; ಕೊವಿಡ್ ಸಂಕಷ್ಟದಲ್ಲಿ ಮಾಡಿದ ಸಹಾಯ ನೆನೆದು ಭಾವುಕರಾದ ಹಿರಿಯ ನಟ