AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೋಟದಲ್ಲಿ ವಶಪಡಿಸಿಕೊಂಡ ಚಿಕನ್ ಟಿಕ್ಕ ಸವಿದ ಪೊಲೀಸರು; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಪೊಲೀಸರನ್ನು ನೋಡಿದ ಯುವಕರು ಅಲ್ಲಿಂದ ಎದ್ನೋ ಬಿದ್ನೋ ಎಂದು ಕಾಲ್ಕಿತ್ತಿದ್ದಾರೆ. ಭಯದಲ್ಲಿ ಟಿಕ್ಕವನ್ನು ಕೂಡ ಮರೆತಿದ್ದಾರೆ. ಬಳಿಕ ಅಲ್ಲಿ ಬೆಂದು ತಿನ್ನಲು ರೆಡಿಯಾಗಿದ್ದ ಚಿಕನ್ ಟಿಕ್ಕ ಮತ್ತು ಬೆಯುತ್ತಿದ್ದ ಟಿಕ್ಕವನ್ನು ಪೊಲೀಸರೆ ಸವಿದಿದ್ದಾರೆ. ಚಿಕನ್ ಟಿಕ್ಕವನ್ನು ತಿಂದ ನಂತರದಲ್ಲಿ ಪೊಲೀಸರು ಅಲ್ಲಿದ್ದ ಯುವಕರ ಬೈಕ್​ಗಳನ್ನು ವಶಪಡಿಸಿಕೊಂಡು, ಗೂಡ್ಸ್ ವಾಹನದಲ್ಲಿ ಹಾಕಿ ಠಾಣೆಗೆ ತಂದಿದ್ದಾರೆ.

ತೋಟದಲ್ಲಿ ವಶಪಡಿಸಿಕೊಂಡ ಚಿಕನ್ ಟಿಕ್ಕ ಸವಿದ ಪೊಲೀಸರು; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ತೋಟದಲ್ಲಿ ವಶಪಡಿಸಿಕೊಂಡ ಚಿಕನ್ ಟಿಕ್ಕ ಸವಿದ ಪೊಲೀಸರು
preethi shettigar
|

Updated on: May 26, 2021 | 12:14 PM

Share

ದಕ್ಷಿಣ ಕನ್ನಡ: ಕೊರೊನಾ ಎರಡನೇ ಅಲೆಯಿಂದಾಗಿ ದೇಶದೆಲ್ಲೇಡೆ ಆತಂಕ ಸೃಷ್ಟಿಯಾಗಿದೆ. ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಹೀಗಾಗಿ ಸರ್ಕಾರ ಪರಿಸ್ಥಿತಿಯನ್ನು ಹತೋಟಿಗೆ ತರಲು ಲಾಕ್​ಡೌನ್ ಘೋಷಣೆ ಮಾಡಿದೆ. ಆದರೆ ಲಾಕ್​ಡೌನ್ ಮಾಡಿದ್ದೇ ತಡ ನಗರ ಪ್ರದೇಶಗಳಿಗೆ ಕೆಲಸದ ನಿಮ್ಮಿತ ಹೋದವರೆಲ್ಲ ಊರು ಸೇರಿಕೊಂಡಿದ್ದಾರೆ. ಹೀಗೆ ಊರು ಸೇರಿಕೊಂಡವರಿಂದಲೇ ಕೊರೊನಾ ಹರಡುವ ಆತಂಕ ಶುರುವಾಗಿದ್ದು, ಇದಕ್ಕೆ ಕಾರಣ ಬಂದವರು ಮನೆಯಲ್ಲಿ ಕೂರದೆ ಊರು ಸುತ್ತುತ್ತಿದ್ದಾರೆ. ಹೀಗಾಗಿ ಇದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ಹಳ್ಳಿಗಳ ಕಡೆಗೂ ಹೆಚ್ಚಿನ ಗಮನ ಹರಿಸಿದ್ದಾರೆ.

ಮಂಗಳೂರಿಗೆ ಹೊಂದಿಕೊಂಡತಿರುವ ಕೇರಳದ ಕಾಸರಗೋಡಿನಲ್ಲೂ ಕೇರಳ ಪೊಲೀಸರು ಕಟ್ಟುನಿಟ್ಟಿನ ಲಾಕ್​ಡೌನ್ ಜಾರಿ ಮಾಡಿದ್ದಾರೆ. ಹೀಗಾಗಿ ಹಳ್ಳಿ ಹಳ್ಳಿಗಳಿಗೂ ನುಗ್ಗಿ ಜನರನ್ನು ಮನೆ ಒಳಗೆ ಕಳುಹಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿದ ಕಾಸರಗೋಡಿನ ಗ್ರಾಮದ ಯುವಕರ ತಂಡವೊಂದು ಗ್ರಾಮದ ಹೊರಗಿನ ತೋಟದಲ್ಲಿ ಚಿಕನ್ ಟಿಕ್ಕ ಪಾರ್ಟಿಯನ್ನು ನಡೆಸುತ್ತಿತ್ತು.

ನಾಟಿ ಕೋಳಿಯನ್ನು ಚೆನ್ನಾಗಿ ಶುಚಿಗೊಳಿಸಿದ 15 ಜನರ ಈ ಯುವಕರ ತಂಡ ಚಿಕನ್ ಟಿಕ್ಕವನ್ನು ಮಾಡಲು ಮುಂದಾಗಿತ್ತು. ತೋಟದಲ್ಲಿನ ಗರಿಗಳನ್ನೇಲ್ಲಾ ಸೇರಿಸಿ ಬೆಂಕಿ ಹಚ್ಚಿದ ಚಿಕನ್ ಟಿಕ್ಕ ಇನ್ನೇನು ಚೆನ್ನಾಗಿ ಬೆಂದು ತಿನ್ನಲು ಸಿದ್ಧವಾಯಿತು ಎನ್ನುವ ಹೊತ್ತಿಗೆ ಪೊಲೀಸರು ಅಲ್ಲಿಗೆ ಬಂದಿದ್ದಾರೆ. ಪೊಲೀಸರನ್ನು ನೋಡಿದ ಯುವಕರು ಅಲ್ಲಿಂದ ಎದ್ನೋ ಬಿದ್ನೋ ಎಂದು ಕಾಲ್ಕಿತ್ತಿದ್ದಾರೆ.

ಭಯದಲ್ಲಿ ಟಿಕ್ಕವನ್ನು ಕೂಡ ಮರೆತಿದ್ದಾರೆ. ಬಳಿಕ ಅಲ್ಲಿ ಬೆಂದು ತಿನ್ನಲು ರೆಡಿಯಾಗಿದ್ದ ಚಿಕನ್ ಟಿಕ್ಕ ಮತ್ತು ಬೆಯುತ್ತಿದ್ದ ಟಿಕ್ಕವನ್ನು ಪೊಲೀಸರೆ ಸವಿದಿದ್ದಾರೆ. ಚಿಕನ್ ಟಿಕ್ಕವನ್ನು ತಿಂದ ನಂತರದಲ್ಲಿ ಪೊಲೀಸರು ಅಲ್ಲಿದ್ದ ಯುವಕರ ಬೈಕ್​ಗಳನ್ನು ವಶಪಡಿಸಿಕೊಂಡು, ಗೂಡ್ಸ್ ವಾಹನದಲ್ಲಿ ಹಾಕಿ ಠಾಣೆಗೆ ತಂದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಒಟ್ಟಾರೆ ಲಾಕ್​ಡೌನ್ ಮರೆತು ಸ್ನೇಹಿತರ ಜೊತೆಗೂಡಿ ಅಡುಗೆ, ಪಾರ್ಟಿ, ಕ್ರಿಕೆಟ್ ಆಡುವ ಯುವಕರ ತಂಡಕ್ಕೆ ಪೊಲೀಸರು ತಡೆಯೊಡ್ಡುತ್ತಿದ್ದಾರೆ. ಇನ್ನಾದರೂ ಲಾಕ್​ಡೌನ್​ ಅನ್ನು ಗಂಭೀರವಾಗಿ ತೆಗೆದುಕೊಂದು ಸರ್ಕಾರದ ನಿಯಮವನ್ನು ಪಾಲಿಸಬೇಕಿದೆ.

ಇದನ್ನೂ ಓದಿ:

ಕೊರೊನಾ ವಾರಿಯರ್​ ಆಗಿ ಕಾರ್ಯನಿರ್ವಹಿಸುತ್ತಿರುವ ಏಳು ತಿಂಗಳ ಗರ್ಭಿಣಿ; ಪಿಎಸ್​ಐ ಕರ್ತವ್ಯ ನಿಷ್ಠೆಗೆ ಜನರ ಮೆಚ್ಚುಗೆ

ಮಧ್ಯಪ್ರದೇಶ: ಲಾಕ್​ಡೌನ್ ಪರಿಶೀಲನೆ ವೇಳೆ ಅಂಗಡಿ ಮಾಲೀಕನ ಕೆನ್ನೆಗೆ ಹೊಡೆದ ಎಡಿಎಂ, ವಿಡಿಯೊ ವೈರಲ್