ಶಿವಮೊಗ್ಗ ಜಿಲ್ಲೆಯ ಎರಡು ವಾರ್ಡ್ ಸೀಲ್ಡೌನ್ ; ಮಲೆನಾಡು ಭಾಗದ ಜನರಲ್ಲಿ ಹೆಚ್ಚಿದ ಆತಂಕ
ಶಿವಮೊಗ್ಗದ ಕಾಶಿಪುರದ ವಾರ್ಡ್ ನಂ. 6 ಮತ್ತು 7 ರಲ್ಲಿ ಕಳೆದ ಒಂದು ವಾರದಲ್ಲಿ 232 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ವಾರ್ಡ್ನಲ್ಲೇ 20 ಜನರು ಮೃತಪಟ್ಟಿದ್ದಾರೆ. ಇದರಿಂದ ಈ ಎರಡು ವಾರ್ಡ್ನಲ್ಲಿರುವ ಜನರು ಗಾಬರಿಯಾಗಿದ್ದಾರೆ.
ಶಿವಮೊಗ್ಗ: ಕೊರೊನಾ ಎರಡನೇ ಅಲೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯಲ್ಲೀ ಏರಿಕೆಯಾಗುತ್ತಿದೆ. ಹೀಗಿರುವಾಗ ಮಲೆನಾಡಿನಲ್ಲಿ ಕೂಡ ಕೊರೊನಾ ಸ್ಪೋಟಗೊಂಡಿದ್ದು, ಕೊರೊನಾ ಪಾಸಿಟಿವ್ ಜೊತೆ ನಿತ್ಯ ಕೊರೊನಾಗೆ ಬಲಿಯಾಗುವರರ ಸಂಖ್ಯೆ ಶಿವಮೊಗ್ಗ ಜನರ ನಿದ್ದೆಗೆಡಿಸಿದೆ. ಜಿಲ್ಲೆಯ ಕೊರೊನಾ ಹಾಟ್ ಸ್ಪಾಟ್ ಶಿವಮೊಗ್ಗ ನಗರವಾಗಿದೆ ಎನ್ನುವಷ್ಟರಮಟ್ಟಿಗೆ ಇಲ್ಲಿ ಸೋಂಕಿತರಿದ್ದಾರೆ. ನಗರದ ಎರಡು ವಾರ್ಡ್ನಲ್ಲಿ ಕೊರೊನಾ ಸ್ಪೋಟಗೊಂಡಿದ್ದು, ಕೊರೊನಾಗೆ ಅನೇಕರು ಬಲಿಯಾಗಿದ್ದಾರೆ. ಇದರಿಂದ ಬೆಚ್ಚಿಬಿದ್ದ ವಾರ್ಡ್ ಜನರು ಸ್ವಯಂ ಪ್ರೇರಿತರವಾಗಿ ಲಾಕ್ಡೌನ್ ಮುಂದಾಗಿದ್ದಾರೆ.
ಶಿವಮೊಗ್ಗದಲ್ಲಿ ಲಾಕ್ಡೌನ್ ಘೋಷಣೆ ಮಾಡಿದ್ದರು ಜನರ ಓಡಾಟಕ್ಕೆ ಮಾತ್ರ ಇನ್ನು ತಡೆಯಾಗಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ನಿತ್ಯ 500 ರಿಂದ ಸಾವಿರ ಕೇಸ್ಗಳು ಪತ್ತೆಯಾಗಿದ್ದು, ನಿತ್ಯ 10 ರಿಂದ 20 ಜನರು ಕೊರೊನಾಗೆ ಬಲಿಯಾಗುತ್ತಿದ್ದಾರೆ. ಈ ನಡುವೆ ಶಿವಮೊಗ್ಗದ ಕಾಶಿಪುರದ ವಾರ್ಡ್ ನಂ. 6 ಮತ್ತು 7 ರಲ್ಲಿ ಕಳೆದ ಒಂದು ವಾರದಲ್ಲಿ 232 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ವಾರ್ಡ್ನಲ್ಲೇ 20 ಜನರು ಮೃತಪಟ್ಟಿದ್ದಾರೆ. ಇದರಿಂದ ಈ ಎರಡು ವಾರ್ಡ್ನಲ್ಲಿರುವ ಜನರು ಗಾಬರಿಯಾಗಿದ್ದಾರೆ.
ಈ ಕೊರೊನಾ ಸೋಂಕು ತಡೆಯುವುದಕ್ಕೆ ಈಗಾಗಲೇ ರಾಜ್ಯದಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಈ ನಡುವೆ ವಾರ್ಡ್ ಜನರು ಸ್ವಯಂ ಪ್ರೇರಿತರಾಗಿ ತಮ್ಮ ಎರಡು ವಾರ್ಡ್ನ ಎಲ್ಲ ಏರಿಯಾವನ್ನು ಸೀಲ್ಡೌನ್ ಮಾಡಿದ್ದೇವೆ. ಒಂದು ವಾರದವರೆಗೆ ಸಂಪೂರ್ಣವಾಗಿ ಎರಡು ವಾರ್ಡ್ನಲ್ಲಿ ಎಲ್ಲ ಚಟುವಟಿಕೆಗೆ ಬ್ರೇಕ್ ಹಾಕಿದ್ದೇವೆ. ಸದ್ಯ ಈ ಎರಡು ವಾರ್ಡ್ನಲ್ಲಿ ಎಲ್ಲ ರಸ್ತೆಗಳನ್ನು ಸೀಲ್ಡೌನ್ ಮಾಡಲಾಗಿದೆ ಎಂದು ವಾರ್ಡ್ನ ಪ್ರಮುಖರಾದ ಮಂಜುನಾಥ್ ಹೇಳಿದ್ದಾರೆ.
ಒಟ್ಟಾರೆ ಕೊರೊನಾ ಗಂಭೀರತೆಯನ್ನು ಅರಿತ ಶಿವಮೊಗ್ಗದ ಜನತೆ ಸ್ವಯಂ ಪ್ರೇರಿತರಾಗಿ ಸೀಲ್ಡೌನ್ ಮಾಡಿಕೊಂಡಿದ್ದಾರೆ. ಜನರ ಓಡಾಟದ ಮೇಲೆ ಇನ್ನಾದರು ನಿಯಂತ್ರಣ ಬೀಳಬೇಕು. ಪರಿಸ್ಥಿತಿ ಉತ್ತುಂಗಕ್ಕೆ ಹೋದ ಮೇಲೆ ಆ ಬಗ್ಗೆ ಗಮನಕೊಡುವುದಕ್ಕಿಂತ ಮುಂಚಿತವಾಗಿ ಒಂದಷ್ಟು ತಯಾರಿಯನ್ನು ಮಾಡಿಕೊಳ್ಳುವುದು ಅಗತ್ಯವಾಗಿದೆ.
ಇದನ್ನೂ ಓದಿ:
ಬೆಳಗಾವಿಯ ಕಾಡಂಚಿನ ಗ್ರಾಮದಲ್ಲಿ ಅರ್ಧಕ್ಕರ್ಧ ಜನರಿಗೆ ಕೊರೊನಾ ಪಾಸಿಟಿವ್: ಇಡೀ ಊರನ್ನೇ ಸೀಲ್ಡೌನ್ ಮಾಡಿದ ಅಧಿಕಾರಿಗಳು
ಓಕಳಿ ಆಡಿದ ಗದಗದ ಗ್ರಾಮ ಸೀಲ್ಡೌನ್; ಕೊವಿಡ್ ನಿಯಮ ಉಲ್ಲಂಘಿಸಿದ ದೇವಸ್ಥಾನ ಅರ್ಚಕರ ವಿರುದ್ಧ ಪ್ರಕರಣ ದಾಖಲು