ಓಕಳಿ ಆಡಿದ ಗದಗದ ಗ್ರಾಮ ಸೀಲ್ಡೌನ್; ಕೊವಿಡ್ ನಿಯಮ ಉಲ್ಲಂಘಿಸಿದ ದೇವಸ್ಥಾನ ಅರ್ಚಕರ ವಿರುದ್ಧ ಪ್ರಕರಣ ದಾಖಲು
ತಾಲೂಕು ಆಡಳಿತ ಬನಹಟ್ಟಿ ಗ್ರಾಮವನ್ನು ಇಂದಿನಿಂದ ನಾಲ್ಕು ದಿನ ಸಂಪೂರ್ಣ ಲಾಕ್ ಮಾಡಿದೆ. ಗ್ರಾಮದಿಂದ ಯಾರೂ ಹೋಗುವಂತಿಲ್ಲ. ಹೊರಗಿನವರು ಗ್ರಾಮಕ್ಕೆ ಬರುವಂತಿಲ್ಲ. ಬನಹಟ್ಟಿ ಗ್ರಾಮದಲ್ಲಿ ತಹಶೀಲ್ದಾರ ಎ. ಡಿ. ಅಮರವಾದಿಗಿ ನೇತೃತ್ವದಲ್ಲಿ ಠಿಕಾಣಿ ಹೂಡಿದೆ. ಗ್ರಾಮದ ದೇವಸ್ಥಾನವೊಂದರಲ್ಲಿ ಗ್ರಾಮ ಹಿರಿಯ ಸಭೆ ಮಾಡಿದ ತಹಶೀಲ್ದಾರ ಮನೆ ಬಿಟ್ಟು ಯಾವುದೇ ಕಾರಣಕ್ಕೂ ಹೊರಬರುವಂತಿಲ್ಲ ಎಂದು ಖಡಕ್ ವಾರ್ನಿಂಗ್ ಮಾಡಿದ್ದಾರೆ.
ಗದಗ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಹಳ್ಳಿಗಳಲ್ಲೂ ಕೊವಿಡ್ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಲಾಕ್ಡೌನ್ ಘೋಷಿಸಿದೆ. ಆದರೂ ಎಚ್ಚೆತ್ತುಕೊಳ್ಳದ ಕೆಲವು ಹಳ್ಳಿಗರು ಇನ್ನು ಕೂಡ ಗುಂಪು ಸೇರುವುದನ್ನು ಬಿಟ್ಟಿಲ್ಲ. ಇದಕ್ಕೆ ಉದಾಹರಣೆ ಎನ್ನುವಂತೆ ಗದಗ ಜಿಲ್ಲೆಯ ಗ್ರಾಮದಲ್ಲಿ ಕೊವಿಡ್ ನಿಯಮ ಗಾಳಿಗೆ ತೂರಿ ಓಕಳಿ ಸಂಭ್ರಮ ಆಚರಿಸಲಾಗಿದೆ. ಈ ಓಕಳಿ ನೋಡಲು ಜನ ಸಾಗರವೇ ಹರಿದು ಬಂದಿತ್ತು. ಇನ್ನು ಮಾದ್ಯಮದಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ಗ್ರಾಮಕ್ಕೆ ದೌಡಾಯಿಸಿದ ಆಡಳಿತಾಧಿಕಾರಿಗಳು ಇಡೀ ಗ್ರಾಮವನ್ನೇ ಸೀಲ್ಡೌನ್ ಮಾಡಿದ್ದಾರೆ. ಅಷ್ಟೇ ಅಲ್ಲ ಗ್ರಾಮಕ್ಕೆ ಸಂಪರ್ಕ ಮಾಡುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿದ್ದು, ಇಡೀ ಊರಿನ ಜನರಿಗೆ ಕೊರೊನಾ ಟಸ್ಟ್ ಮಾಡಿಸಲಾಗಿದೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಬನಹಟ್ಟಿ ಗ್ರಾಮದ ಹನುಮಂತ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಹಿನ್ನಲೆ ಭರ್ಜರಿ ಓಕಳಿ ನಡೆಸಲಾಗಿದೆ. ದೇವಸ್ಥಾನ ಮುಂಬಾಗದಲ್ಲಿ ನೂರಾರು ಜನರು ಈ ವೇಳೆ ಮಾಸ್ಕ್ ಹಾಕದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಓಕಳಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ವಿಷಯ ತಿಳಿಯುತ್ತಿದ್ದಂತೆ ದೇವಸ್ಥಾನ ಅರ್ಚಕರು ಸೇರಿ ಕಮೀಟಿಯ ಎಂಟು ಜನ ಸದಸ್ಯರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ದೂರು ದಾಖಲು ಮಾಡಿಕೊಂಡಿದೆ. ಪಿಡಿಓ, ಗ್ರಾಮ ಸಹಾಯಕ, ಗ್ರಾಮಲೆಕ್ಕಾಧಿಕಾರಿಗಳ ಹಾಗೂ ನೂಡಲ್ ಅಧಿಕಾರಿಗೆ ಕರ್ತವ್ಯ ನಿರ್ಲಕ್ಷ್ಯ ಹಿನ್ನಲೆಯಲ್ಲಿ ತಹಶೀಲ್ದಾರ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
#WATCH | Karnataka: A ceremony was held in Banahatti Village of Nargund Tehsil in Gadag district earlier today. #COVID19 norms flouted by people. pic.twitter.com/T4ljFnVrfp
— ANI (@ANI) May 20, 2021
ತಾಲೂಕು ಆಡಳಿತ ಬನಹಟ್ಟಿ ಗ್ರಾಮವನ್ನು ಇಂದಿನಿಂದ ನಾಲ್ಕು ದಿನ ಸಂಪೂರ್ಣ ಲಾಕ್ ಮಾಡಿದೆ. ಗ್ರಾಮದಿಂದ ಯಾರೂ ಹೋಗುವಂತಿಲ್ಲ. ಹೊರಗಿನವರು ಗ್ರಾಮಕ್ಕೆ ಬರುವಂತಿಲ್ಲ. ಬನಹಟ್ಟಿ ಗ್ರಾಮದಲ್ಲಿ ತಹಶೀಲ್ದಾರ ಎ. ಡಿ. ಅಮರವಾದಿಗಿ ನೇತೃತ್ವದಲ್ಲಿ ಠಿಕಾಣಿ ಹೂಡಿದೆ. ಗ್ರಾಮದ ದೇವಸ್ಥಾನವೊಂದರಲ್ಲಿ ಗ್ರಾಮ ಹಿರಿಯ ಸಭೆ ಮಾಡಿದ ತಹಶೀಲ್ದಾರ ಮನೆ ಬಿಟ್ಟು ಯಾವುದೇ ಕಾರಣಕ್ಕೂ ಹೊರಬರುವಂತಿಲ್ಲ ಎಂದು ಖಡಕ್ ವಾರ್ನಿಂಗ್ ಮಾಡಿದ್ದಾರೆ.
ಸ್ವತಃ ತಹಶೀಲ್ದಾರರೇ ಮುಂದೇ ನಿಂತು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿಸಿದ್ದಾರೆ. ಇಡೀ ಗ್ರಾಮ ಸೀಲ್ಡೌನ್ ಮಾಡಲಾಗುತ್ತದೆ. ಗ್ರಾಮಸ್ಥರು ಯಾರೂ ಮನೆಬಿಟ್ಟು ಹೊರಬರದಂತೆ ಎಚ್ಚರಿಕೆ ನೀಡಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ ಎರಡು ಗಂಟೆ ಅವಕಾಶ ನೀಡಲಾಗಿದೆ. ಇನ್ನು ಗುಂಪು ಗುಂಪಾಗಿ ಓಕಳಿ ಸಂಭ್ರಮದಲ್ಲಿ ಭಾಗಿಯಾಗಿದ್ರಿಂದ ಗ್ರಾಮದಲ್ಲಿ ಪ್ರತಿಯೊಬ್ಬರಿಗೂ ಕರೊನಾ ಟೆಸ್ಟ್ ಮಾಡಲಾಗುತ್ತಿದೆ. ಇನ್ನು ಮಾಸ್ಕ್ ಹಾಕಿಕೊಳ್ಳದೇ ಓಕಳಿ ಕಾರ್ಯಕ್ರಮದಲ್ಲಿ ಭಾಗಿಯಾದ ಜನರಿಗೆಗೆ ದಂಡ ಹಾಕಲಾಗುತ್ತಿದೆ ಎಂದು ತಹಶೀಲ್ದಾರ ಎ.ಡಿ.ಅಮರವಾದಿಗಿ ತಿಳಿಸಿದ್ದಾರೆ.
ಕೊರೊನಾ ಅಪಾಯದಲ್ಲಿ ಇಷ್ಟೊಂದು ಜನರು ಓಕಳಿ ಸಂಭ್ರಮದಲ್ಲಿ ಭಾಗಿಯಾಗಿದ್ದು, ವಿಪರ್ಯಾಸವೇ ಸರಿ. ಜಿಲ್ಲಾಡಳಿತ ಕೂಡ ಸರಿಯಾಗಿ ನಿಗಾ ವಹಿಸಿಲ್ಲ ಎನ್ನುವುದು ನಿಜ. ಗ್ರಾಮ ಪಂಚಾಯತ್ ಪಿಡಿಓ, ಗ್ರಾಮಲೆಕ್ಕಾಧಿಕಾರಿಗಳಿಗೆ ಈ ವಿಷಯ ಗೋತ್ತಾಗಿದೆ. ಆದರೆ, ತಾಲೂಕಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತರದೇ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ. ಪೊಲೀಸ್ ಇಲಾಖೆ ನಿರ್ಲಕ್ಷ್ಯವೂ ಇಲ್ಲಿ ಎದ್ದು ಕಾಣುತ್ತಿದೆ. ಅದೇನೆ ಇರಲಿ ಈಗ ಓಕಳಿ ಆಟದಲ್ಲಿ ಭಾಗಿಯಾದ ಎಲ್ಲರಿಗೂ ಕೊರೊನಾ ಕಂಟಕ ಎದುರಾಗಿದ್ದು ಮಾತ್ರ ಸತ್ಯ.
ಇದನ್ನೂ ಓದು:
Published On - 1:54 pm, Fri, 21 May 21