AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಸಿಟಿವ್-ನೆಗೆಟಿವ್ ಇದ್ದರೂ ಒಂದೇ ಮನೆಯಲ್ಲೇ ವಾಸ.. ಯಾವ ಅಧಿಕಾರಿಗಳೂ ಸಹಾಯಕ್ಕೆ ಬರಲಿಲ್ಲ ಎಂದು ಕಣ್ಣೀರಾಕಿದ ಸೋಂಕಿತ ದಂಪತಿ

ಗ್ರಾಮದಲ್ಲಿ 9 ಜನ ಕೊರೊನಾ ಸೋಂಕಿತರು ಇದ್ದಾರೆ. ಆದ್ರೆ ಕೊರೊನಾ ಸೋಂಕಿತರು ಬಡವರಾಗಿದ್ದು ಚಿಕಿತ್ಸೆಗೆ ಹಣವೂ ಇಲ್ಲ. ಜೊತೆಗೆ ಸಣ್ಣ ಸಣ್ಣ ಮನೆಗಳಲ್ಲಿ ವಾಸವಾಗಿದ್ದಾರೆ. ಒಂದೇ ಕುಟುಂಬದ ದಂಪತಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಅವರ ಚಿಕ್ಕ ಮಗುವಿಗೆ ಕೊರೊನಾ ನೆಗೆಟಿವ್ ಇದೆ. ಮಗುವನ್ನು ಕರೆದುಕೊಂಡು ಆಸ್ಪತ್ರೆ ಇಲ್ಲಾ ಸಿಸಿಸಿ ಕೇಂದ್ರ ದಾಖಲು ಆಗಲು ನಿರಾಕರಿಸಿದ್ದು ಮನೆಯಲ್ಲೆ ಹೋಮ್ ಐಸೋಲೇಷನ್ ಆಗಿದ್ದಾರೆ.

ಪಾಸಿಟಿವ್-ನೆಗೆಟಿವ್ ಇದ್ದರೂ ಒಂದೇ ಮನೆಯಲ್ಲೇ ವಾಸ.. ಯಾವ ಅಧಿಕಾರಿಗಳೂ ಸಹಾಯಕ್ಕೆ ಬರಲಿಲ್ಲ ಎಂದು ಕಣ್ಣೀರಾಕಿದ ಸೋಂಕಿತ ದಂಪತಿ
ಚಿಕ್ಕಬಳ್ಳಾಪುರ ಗ್ರಾಮವೊಂದರ ದೃಶ್ಯ
ಆಯೇಷಾ ಬಾನು
|

Updated on: May 21, 2021 | 12:54 PM

Share

ಚಿಕ್ಕಬಳ್ಳಾಪುರ: ಮಂಚನಬಲೆ ಗ್ರಾಮವೊಂದರಲ್ಲಿ 90 ಜನಕ್ಕೆ ಕೊರೊನಾ ಸೋಂಕು ಹರಡಿದ್ದು, ಬಹುತೇಕರು ಗುಣಮುಖರಾಗಿದ್ದಾರೆ. ಆದರೆ ಈ ಪೈಕಿ 10 ಜನ ಮೃತಪಟ್ಟಿದ್ದಾರೆ. ಮೃತರಲ್ಲಿ 5 ಜನರಿಗೆ ಕೊರೊನಾ ಸೋಂಕು ತಗುಲಿರುವು ದೃಢಪಟ್ಟಿದೆ. ಇದ್ರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಇನ್ನು ಗ್ರಾಮದಲ್ಲಿ 9 ಜನ ಕೊರೊನಾ ಸೋಂಕಿತರು ಇದ್ದಾರೆ. ಆದ್ರೆ ಕೊರೊನಾ ಸೋಂಕಿತರು ಬಡವರಾಗಿದ್ದು ಚಿಕಿತ್ಸೆಗೆ ಹಣವೂ ಇಲ್ಲ. ಜೊತೆಗೆ ಸಣ್ಣ ಸಣ್ಣ ಮನೆಗಳಲ್ಲಿ ವಾಸವಾಗಿದ್ದಾರೆ. ಒಂದೇ ಕುಟುಂಬದ ದಂಪತಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಅವರ ಚಿಕ್ಕ ಮಗುವಿಗೆ ಕೊರೊನಾ ನೆಗೆಟಿವ್ ಇದೆ. ಮಗುವನ್ನು ಕರೆದುಕೊಂಡು ಆಸ್ಪತ್ರೆ ಇಲ್ಲಾ ಸಿಸಿಸಿ ಕೇಂದ್ರ ದಾಖಲು ಆಗಲು ನಿರಾಕರಿಸಿದ್ದು ಮನೆಯಲ್ಲೆ ಹೋಮ್ ಐಸೋಲೇಷನ್ ಆಗಿದ್ದಾರೆ.

ಸೋಂಕಿತನ ತಂದೆಗೆ ನೆಗಟಿವ್ ವರದಿ ಇದ್ದು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ರೇಷನ್ ಆಂಗಡಿಗಳಿಗೆ ಹೋದ್ರೆ ಜನ ಅನುಮಾನದಿಂದ ನೋಡುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ಕೊಡುತ್ತಿಲ್ಲ ಆದ್ರೆ ಯಾರೊ ಪುಣ್ಯಾತ್ಮರು ದಿನಸಿ ಕಿಟ್ ನೀಡಿ ಮಾನವಿಯತೆ ಮೆರೆದಿದ್ದಾರೆ. ಸೋಂಕಿತರ ಮನೆಗೆ ಸ್ಥಳಿಯ ಪಿ.ಡಿ.ಓ ಹಾಗೂ ಸ್ಥಳೀಯ ಕಾರ್ಯಪಡೆ ಸದಸ್ಯರು ಮಾತ್ರ ಭೇಟಿ ನೀಡಿ ಅಗತ್ಯ ಔಷಧಿ ನೀಡಿದ್ದಾರೆ, ದೈರ್ಯ ತುಂಬಿದ್ದಾರೆ. ಆದ್ರೆ ಆರೋಗ್ಯಾಧಿಕಾರಿಗಳು, ವೈದ್ಯರು, ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಸೋಂಕಿತರ ಮನೆಗಳ ಕಡೆ ಸುಳಿದಿಲ್ಲವೆಂದು ನೊಂದ ದಂಪತಿ ಅವಲತ್ತುಕೊಂಡಿದ್ದಾರೆ.

ಇದನ್ನೂ ಓದಿ: Income tax return filing: ಆದಾಯ ತೆರಿಗೆ ಫೈಲಿಂಗ್​ ಗಡುವು ವಿಸ್ತರಿಸಿದ ಸಿಬಿಡಿಟಿ