ಬಾಗಲಕೋಟೆಯಲ್ಲಿ ಲಾಕ್ಡೌನ್ ನಡುವೆ ಬಾಲ್ಯ ವಿವಾಹ; 28 ಬಾಲ್ಯ ವಿವಾಹಗಳನ್ನು ತಡೆದ ಅಧಿಕಾರಿಗಳು
ಬಾಗಲಕೋಟೆಯಲ್ಲಿ ಲಾಕ್ಡೌನ್ ನಡುವೆ ಬಾಲ್ಯ ವಿವಾಹ ನಿಗದಿಯಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಏಪ್ರಿಲ್, ಮೇನಲ್ಲಿ ಸುಮಾರು 35 ಬಾಲ್ಯ ವಿವಾಹಗಳು ನಿಗದಿಯಾಗಿತ್ತು. ಈ ಪೈಕಿ 28 ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ.
ಬಾಗಲಕೋಟೆ: ಮಕ್ಕಳು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಕನಸು ಕಟ್ಟಿರುತ್ತಾರೆ. ಆದರೆ ಕಂಡ ಕನಸು ಕನಸಾಗಿ ಉಳಿಯುವುದಕ್ಕೆ ಮುಖ್ಯ ಕಾರಣ ಪೋಷಕರೇ ಆಗಿರುತ್ತಾರೆ. ಬಾಲ್ಯ ವಿವಾಹದಂತಹ ಕೆಟ್ಟ ಪದ್ಧತಿಯಲ್ಲಿ ಮಕ್ಕಳನ್ನು ಸಿಲುಕಿ ಅವರ ಭವಿಷ್ಯವನ್ನೇ ಹಾಳುಮಾಡುತ್ತಾರೆ. ಈಗಲೂ ರಾಜ್ಯದ ಹಲವು ಜನರಿಗೆ ಅರಿವಿಲ್ಲ. ಬಾಲ್ಯ ವಿವಾಹದಿಂದ ಮಕ್ಕಳ ಮೇಲಾಗುವ ಪರಿಣಾಮ ಇನ್ನು ತಿಳಿದಿಲ್ಲ. ಈ ಬಗ್ಗೆ ಎಷ್ಟು ಅರಿವು ಮೂಡಿಸಿದರೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಜಿಲ್ಲೆಯಲ್ಲಿ ಲಾಕ್ಡೌನ್ ನಡುವೆಯೂ ಬಾಲ್ಯ ವಿವಾಹಗಳು ನಿಗದಿಯಾಗಿತ್ತು. ಆದರೆ ಅಧಿಕಾರಿಗಳು ಸರಿಯಾದ ಸಮಯಕ್ಕೆ ಹೋಗಿ ವಿವಾಹಗಳನ್ನು ತಡೆದಿದ್ದಾರೆ.
ಬಾಗಲಕೋಟೆಯಲ್ಲಿ ಲಾಕ್ಡೌನ್ ನಡುವೆ ಬಾಲ್ಯ ವಿವಾಹ ನಿಗದಿಯಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಏಪ್ರಿಲ್, ಮೇನಲ್ಲಿ ಸುಮಾರು 35 ಬಾಲ್ಯ ವಿವಾಹಗಳು ನಿಗದಿಯಾಗಿತ್ತು. ಈ ಪೈಕಿ 28 ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ. ಅದಾಗ್ಯೂ 7 ಬಾಲ್ಯ ವಿವಾಹಗಳು ನಡೆದಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಅಶೋಕ ಬಸವಣ್ಣವರ ಮಾಹಿತಿ ನೀಡಿದ್ದಾರೆ. ಏಪ್ರಿಲ್, ಮೇ ತಿಂಗಳು ನಡೆದ 7 ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ನೂರಕ್ಕೂ ಅಧಿಕ ಬಾಲ್ಯ ವಿವಾಹಕ್ಕೆ ತಯಾರಿ ಕಳೆದ ವರ್ಷವೂ ಜಿಲ್ಲೆಯಲ್ಲಿ ನೂರಕ್ಕೂ ಅಧಿಕ ಬಾಲ್ಯ ವಿವಾಹಕ್ಕೆ ತಯಾರಿ ನಡೆದಿತ್ತು. 113 ಬಾಲ್ಯ ವಿವಾಹಗಳ ಬಗ್ಗೆ ಇಲಾಖೆ ಗಮನಕ್ಕೆ ಮಾಹಿತಿ ಬಂದಿತ್ತು. ಈ ಪೈಕಿ 95 ಬಾಲ್ಯ ವಿವಾಹಗಳನ್ನು ಜಿಲ್ಲಾಡಳಿತ ತಡೆದಿತ್ತು. ಅದಾಗ್ಯೂ ಸುಮಾರು 18 ಬಾಲ್ಯ ವಿವಾಹ ನಡೆದು ಹೋಗಿದೆ. ಈ ಪೈಕಿ ಪ್ರಕರಣ ಮಾತ್ರ ದಾಖಲಾಗಿದ್ದು, ಉಳಿದ ಎಂಟು ಪ್ರಕರಣ ದಾಖಲಾಗಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.
ಇದನ್ನೂ ಓದಿ
ಕೊರೊನಾ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಏಳು ತಿಂಗಳ ಗರ್ಭಿಣಿ; ಪಿಎಸ್ಐ ಕರ್ತವ್ಯ ನಿಷ್ಠೆಗೆ ಜನರ ಮೆಚ್ಚುಗೆ
ಕೊರೊನಾ ಓಡಿಸಲು ನೂರಾರು ಕೆಜಿ ಅನ್ನ ಚೆಲ್ಲಿ ಮೌಢ್ಯಾಚರಣೆ, ಯುವಕರ ದೂರಿನ ಪ್ರತಿ ವೈರಲ್!
(Ready for a 35 Child Marriage between a lockdown in Bagalkot and Officials blocked 28 child marriages)
Published On - 11:20 am, Wed, 26 May 21