AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಮ್​ಡಿಸಿವಿರ್ ಇಂಜೆಕ್ಷನ್​ಗೆ ಏಕಾಏಕಿ ಕುಸಿದ ಬೇಡಿಕೆ

ಕೇವಲ 15 ದಿನಗಳಲ್ಲೇ ರೆಮ್​ಡಿಸಿವಿರ್ ಇಂಜಕ್ಷನ್​ಗೆ ಬೇಡಿಕೆ ಕುಸಿತವಾಗಿದೆ. ಆರೋಗ್ಯ ಇಲಾಖೆ ರೆಮ್​ಡಿಸಿವಿರ್​ಗೆ ಹೆಲ್ಪ್​ಲೈನ್​ ಮಾಡಿತ್ತು. ಒಂದೇ ಒಂದು ವಯಲ್ ಕೂಡ ಮಿಸ್ ಆಗದಂತೆ ಬಿಗಿ ಕ್ರಮ ಕೈಗೊಳ್ಳಲಾಗಿತ್ತು. ರೆಮ್​ಡಿಸಿವಿರ್ ಕೊರೊನಾಗೆ ಸೂಕ್ತ ಮದ್ದಲ್ಲ ಎಂದು ಸರ್ಕಾರ, ಐಸಿಎಂಆರ್ ಹೇಳಿದೆ.

ರೆಮ್​ಡಿಸಿವಿರ್ ಇಂಜೆಕ್ಷನ್​ಗೆ ಏಕಾಏಕಿ ಕುಸಿದ ಬೇಡಿಕೆ
ರೆಮ್​ಡಿಸಿವಿರ್ (ಸಂಗ್ರಹ ಚಿತ್ರ)
sandhya thejappa
|

Updated on: May 26, 2021 | 11:53 AM

Share

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ನಾನಾ ಸಮಸ್ಯೆಗಳು ಹುಟ್ಟಿಕೊಂಡಿವೆ. ಈ ಸಾಲಿಗೆ ರೆಮ್​ಡಿಸಿವಿರ್ ಇಂಜೆಕ್ಷನ್ ಅಕ್ರಮ ಮಾರಾಟವೂ ಸೇರಿದೆ. ಹೆಚ್ಚು ಹಣಕ್ಕೆ ಬೇಡಿಕೆಯಿಟ್ಟು ರೆಮ್​ಡಿಸಿವಿರ್​ ಇಂಜೆಕ್ಷನ್​ನ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಈ ಕೃತ್ಯದಲ್ಲಿ ಕೆಲ ಕಡೆ ಆಸ್ಪತ್ರೆ ಸಿಬ್ಬಂದಿಯೂ ಕೈ ಜೋಡಿಸಿತ್ತು. ಅಕ್ರಮ ಮಾರಾಟದ ಬಗ್ಗೆ ಮಾಹಿತಿ ಬೆಳಕಿಗೆ ಬಂದಂತೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಆದರೆ ರೆಮ್​ಡಿಸಿವಿರ್ ಇಂಜೆಕ್ಷನ್​ಗೆ ಇದ್ದಕ್ಕಿದ್ದಂತೆ ಬೇಡಿಕೆ ಕುಸಿದಿದೆ.

ಕೇವಲ 15 ದಿನಗಳಲ್ಲೇ ರೆಮ್​ಡಿಸಿವಿರ್ ಇಂಜಕ್ಷನ್​ಗೆ ಬೇಡಿಕೆ ಕುಸಿತವಾಗಿದೆ. ಆರೋಗ್ಯ ಇಲಾಖೆ ರೆಮ್​ಡಿಸಿವಿರ್​ಗೆ ಹೆಲ್ಪ್​ಲೈನ್​ ಮಾಡಿತ್ತು. ಒಂದೇ ಒಂದು ವಯಲ್ ಕೂಡ ಮಿಸ್ ಆಗದಂತೆ ಬಿಗಿ ಕ್ರಮ ಕೈಗೊಳ್ಳಲಾಗಿತ್ತು. ರೆಮ್​ಡಿಸಿವಿರ್ ಕೊರೊನಾಗೆ ಸೂಕ್ತ ಮದ್ದಲ್ಲ ಎಂದು ಸರ್ಕಾರ, ಐಸಿಎಂಆರ್ ಹೇಳಿದೆ. ಹೀಗಾಗಿ ರೆಮ್​ಡಿಸಿವಿರ್ ಇಂಜೆಕ್ಷನ್​ಗೆ ಬೇಡಿಕೆ ಕಡಿಮೆಯಾಗಿದೆ.

ಸದ್ಯ ರಾಜ್ಯದಲ್ಲಿ 77,059 ರೆಮ್​ಡಿಸಿವಿರ್​ ವಯಲ್ಸ್ ಇವೆ. ಇಂಜೆಕ್ಷನ್ ಸರಬರಾಜು ಮಾಡಲು ಕಂಪನಿಗಳು ಸಿದ್ಧವಾಗಿವೆ. ಉತ್ಪಾದನೆ ಹೆಚ್ಚಿಸಿ ಸರಬರಾಜಿಗೆ ಸರ್ಕಾರ ಸೂಚನೆ ನೀಡಿತ್ತು. ಆದರೆ ಈಗ ಏಕಾಏಕಿ ರೆಮ್​ಡಿಸಿವಿರ್​ಗೆ ಬೇಡಿಕೆ ಕುಸಿತವಾಗಿದೆ. ರೆಮ್ಡಿಸಿವಿರ್ ಬಳಕೆ ಅವಧಿ 6 ತಿಂಗಳಿಗೆ ಮುಗಿಯಲಿದೆ. ಹೀಗಾಗಿ ಸ್ಟಾಕ್ ಇದ್ದರೂ ಡಿಮ್ಯಾಂಡ್ ಇಲ್ಲ ಅಂತ ಆರೋಗ್ಯಧಿಕಾರಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ

ಕೊರೊನಾ ವಾರಿಯರ್​ ಆಗಿ ಕಾರ್ಯನಿರ್ವಹಿಸುತ್ತಿರುವ ಏಳು ತಿಂಗಳ ಗರ್ಭಿಣಿ; ಪಿಎಸ್​ಐ ಕರ್ತವ್ಯ ನಿಷ್ಠೆಗೆ ಜನರ ಮೆಚ್ಚುಗೆ

ಕೊರೊನಾ ಓಡಿಸಲು ನೂರಾರು ಕೆಜಿ ಅನ್ನ ಚೆಲ್ಲಿ ಮೌಢ್ಯಾಚರಣೆ, ಯುವಕರ ದೂರಿನ ಪ್ರತಿ ವೈರಲ್!

(demand for Remdesivir injection has fallen)

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ