ವೈದ್ಯರ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಗೋಪಾಲಯ್ಯ ಚಾಲನೆ, ಹಳ್ಳಿಗಳತ್ತ ಹೊರಟ ವೈದ್ಯರು
ಜಿಲ್ಲೆಯಾದ್ಯಂತ 50 ವೈದ್ಯರ ತಂಡ ಸಂಚರಿಸಲಿದ್ದು ಹಳ್ಳಿ ಹಳ್ಳಿಗೆ ತೆರಳಿ ಜನರ ಆರೋಗ್ಯ ತಪಾಸಣೆ ಹಾಗೂ ಕೊರೊನ ಪರೀಕ್ಷೆ ನಡೆಸಲಿದ್ದಾರೆ. ಪ್ರತಿ ತಂಡದಲ್ಲಿ ವೈದ್ಯರು, ನರ್ಸ್, ಲ್ಯಾಬ್ ಟೆಕ್ನಿಷಿಯನ್ ಟೀಂ ಇರಲಿದೆ. ಈ ತಂಡ ಒಂದು ದಿನಕ್ಕೆ ನಾಲ್ಕು ಗ್ರಾಮಗಳನ್ನು ಸಂಚರಿಸಿ ಜನರ ಆರೋಗ್ಯ ಪರಿಶೀಲಿಸಲಿದ್ದಾರೆ.
ಹಾಸನ: ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಕೊವಿಡ್ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣ, ಜಾಗೃತಿ ಮೂಡಿಸಲು ವೈದ್ಯರ ನಡೆ ಹಳ್ಳಿಗಳ ಕಡೆ ಎಂಬ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಸದ್ಯ ಈಗ ಹಾಸನ ಜಿಲ್ಲೆಯ ಹಳ್ಳಿಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮ ಶುರುವಾಗಿದೆ.
ಜಿಲ್ಲೆಯಾದ್ಯಂತ 50 ವೈದ್ಯರ ತಂಡ ಸಂಚರಿಸಲಿದ್ದು ಹಳ್ಳಿ ಹಳ್ಳಿಗೆ ತೆರಳಿ ಜನರ ಆರೋಗ್ಯ ತಪಾಸಣೆ ಹಾಗೂ ಕೊರೊನ ಪರೀಕ್ಷೆ ನಡೆಸಲಿದ್ದಾರೆ. ಪ್ರತಿ ತಂಡದಲ್ಲಿ ವೈದ್ಯರು, ನರ್ಸ್, ಲ್ಯಾಬ್ ಟೆಕ್ನಿಷಿಯನ್ ಟೀಂ ಇರಲಿದೆ. ಈ ತಂಡ ಒಂದು ದಿನಕ್ಕೆ ನಾಲ್ಕು ಗ್ರಾಮಗಳನ್ನು ಸಂಚರಿಸಿ ಜನರ ಆರೋಗ್ಯ ಪರಿಶೀಲಿಸಲಿದ್ದಾರೆ. ಜಿಲ್ಲೆಯಲ್ಲಿ ಎರಡು ಸಾವಿರ ಹಳ್ಳಿಗಳಿದ್ದು ತಪಾಸಣೆ ಕೈಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಇಂದು ಉಸ್ತುವಾರಿ ಸಚಿವ ಗೋಪಾಲಯ್ಯ ಚಾಲನೆ ನೀಡಿದ್ದಾರೆ. ಸದ್ಯ ಹಾಸನದಿಂದ ಹಳ್ಳಿ ಹಳ್ಳಿಗೆ ಹೊರಡಲು ವೈದ್ಯರ ತಂಡ ಸಿದ್ಧವಾಗಿದೆ.
ವೈದ್ಯರ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದ ಮಾರ್ಗಸೂಚಿ ಸೋಂಕಿನ ಲಕ್ಷಣಗಳಿದ್ದಲ್ಲಿ ಸ್ಥಳದಲ್ಲಿಯೇ ಆರ್ಎಟಿ ಪರೀಕ್ಷೆ ಮಾಡಲಾಗುತ್ತದೆ. ರೋಗಿಯನ್ನು ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಸ್ಥಳದಲ್ಲೇ ನಿರ್ಧಾರ ಕೈಗೊಳ್ಳಲಾಗುತ್ತದೆ. ಕೊವಿಡ್ ಸೋಂಕಿತರಿಗೆ ಮೆಡಿಕಲ್ ಕಿಟ್ ವಿತರಿಸಿ ಅಗತ್ಯ ಮಾಹಿತಿ ನೀಡುಲಾಗುತ್ತದೆ. ಸೋಂಕಿತರ ಸಂಪರ್ಕದಲ್ಲಿರುವವರನ್ನು ಪರೀಕ್ಷೆ ಮಾಡುವುದು. ಹೋಂ ಐಸೋಲೇಶನ್ ಆಗಬಲ್ಲ ವ್ಯವಸ್ಥೆ ಇದ್ದರೆ ಮನೆಯಲ್ಲಿಯೇ ಹೋಂ ಐಸೋಲೇಷನ್ಗೆ ಅವಕಾಶ ಮಾಡಿಕೊಡುವುದು. ಅಂತಹ ವ್ಯವಸ್ಥೆ ಇಲ್ಲದಿದ್ದರೆ ಕೊವಿಡ್ ಕೇರ್ ಸೆಂಟರ್ನಲ್ಲಿ ಹೋಂ ಐಸೋಲೇಶನ್ಗೆ ವ್ಯವಸ್ಥೆ ಮಾಡಲಾಗುತ್ತದೆ.
ಅಷ್ಟೇ ಅಲ್ಲದೇ, ಹೋಂ ಐಸೋಲೇಷನ್ನಲ್ಲಿರುವವರನ್ನು ಟೆಸ್ಟ್ ಮಾಡಲಾಗುತ್ತದೆ. ತಪಾಸಣೆ ಮಾಡಿದ ವಿವರವನ್ನು ಆ್ಯಪ್ನಲ್ಲಿ ನಮೂದಿಸಲಾಗುತ್ತದೆ. ಮೊಬೈಲ್ ಕ್ಲಿನಿಕ್ ತಂಡ ದಿನದ ವರದಿಯನ್ನು ಆರೋಗ್ಯಾಧಿಕಾರಿಗಳಿಗೆ ಒಪ್ಪಿಸಬೇಕು ಎಂದು ಮಾರ್ಗಸೂಚಿಯಲ್ಲಿ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ವೈದ್ಯರ ನಡಿಗೆ ಹಳ್ಳಿ ಕಡೆಗೆ: ಕರ್ನಾಟಕ ಸರ್ಕಾರದ ಬಿಡುಗಡೆಗೊಳಿಸಿದ ಮಾರ್ಗಸೂಚಿಯ ವಿವರ ಇಲ್ಲಿದೆ