Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯತಮೆಗೆ ಬಟ್ಟೆ ಕೊಡಿಸುತ್ತಿದ್ದ ಪತಿಗೆ ಎಲ್ಲರೆದುರೂ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ; ಗಲಾಟೆ ಮಧ್ಯೆ ಲವರ್​ ಸೈಲೆಂಟ್ ಎಸ್ಕೇಪ್​

ಘಟನೆ ನಡೆಯುತ್ತಿದ್ದ ಸ್ಥಳದಲ್ಲಿ ಭರ್ಜರಿ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಈ ಗುಂಪನ್ನು ನೋಡಿ ಅಲ್ಲಿಗೆ ಬಂದ ನೌಚಂಡಿ ಪೊಲೀಸರು ಪತಿ-ಪತ್ನಿ ಹೊಡೆದಾಟವನ್ನು ನಿಲ್ಲಿಸಿದ್ದಾರೆ.

ಪ್ರಿಯತಮೆಗೆ ಬಟ್ಟೆ ಕೊಡಿಸುತ್ತಿದ್ದ ಪತಿಗೆ ಎಲ್ಲರೆದುರೂ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ; ಗಲಾಟೆ ಮಧ್ಯೆ ಲವರ್​ ಸೈಲೆಂಟ್ ಎಸ್ಕೇಪ್​
ಸಾರ್ವಜನಿಕ ಸ್ಥಳದಲ್ಲಿ ಪತಿಗೆ ಹೊಡೆದ ಪತ್ನಿ
Follow us
Lakshmi Hegde
|

Updated on: Mar 16, 2021 | 6:11 PM

ಮೀರತ್​: ಪ್ರಿಯತಮೆಗೆ ಬಟ್ಟೆ ಖರೀದಿ ಮಾಡಲು ಬಂದಿದ್ದವನನ್ನು ಆತನ ಪತ್ನಿ ರೆಡ್​ಹ್ಯಾಂಡ್ ಆಗಿ ಹಿಡಿದಿದ್ದಾರೆ. ಅಷ್ಟೇ ಅಲ್ಲ, ಆತ ಸಿಕ್ಕಿಬಿದ್ದ ಸ್ಥಳದಲ್ಲಿ ದೊಡ್ಡ ನಾಟಕ, ಗಲಾಟೆಯೇ ನಡೆದುಹೋಗಿದೆ. ಸಾರ್ವಜನಿಕರ ಸ್ಥಳದಲ್ಲಿ, ಎಲ್ಲರೂ ನೋಡುತ್ತಿದ್ದಂತೆ ಪತ್ನಿ, ಪತಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನೆರೆದಿದ್ದವರೆಲ್ಲ ಮೌನವಾಗಿ ನೋಡುತ್ತ ನಿಂತಿದ್ದರೆ, ಆ ಗಲಾಟೆ ಮಧ್ಯೆ ಪ್ರಿಯತಮೆ ಸೈಲೆಂಟ್​ ಆಗಿ ಎಸ್ಕೇಪ್​ ಆಗಿದ್ದಾಳೆ.

ಮೀರತ್​ನ ಶಾಸ್ತ್ರಿನಗರದ, ಸೆಂಟ್ರಲ್​ ಮಾರುಕಟ್ಟೆಯ ಬಳಿ ಈ ಹೈಡ್ರಾಮಾ ನಡೆದಿದೆ. ಅದ್ನಾನ್​ ಮತ್ತು ಆಯೇಷಾ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ಅದ್ನಾನ್​ ತನ್ನ ಪತ್ನಿಗೆ ಹಿಂಸೆ ನೀಡಲು, ಹೊಡೆಯಲು ಶುರು ಮಾಡಿದ್ದಾನೆ. ಇದರಿಂದ ಆಯೇಷಾಗೆ ಪತಿಯ ಮೇಲೆ ಅನುಮಾನ ಬಂದು, ಸೋಮವಾರ (ಮಾ.15) ಬೆಳಗ್ಗೆ ಅವನನ್ನು ಹಿಂಬಾಲಿಸಿದ್ದಾರೆ. ಆತ ಇನ್ನೊಬ್ಬಳೊಂದಿಗೆ ಬಟ್ಟೆ ಅಂಗಡಿಗೆ ಹೋಗುವುದನ್ನು ನೋಡಿದ ಆಯೇಷಾ, ಅಂಗಡಿಯ ಹೊರಗೇ ಕಾಯುತ್ತಿದ್ದರು. ಪ್ರಿಯತಮೆಯೊಂದಿಗೆ ಅದ್ನಾನ್​ ಹೊರಬರುತ್ತಿದ್ದಂತೆ ಅವನನ್ನು ಹಿಡಿದುಕೊಂಡ ಆಯೆಷಾ ಸಿಕ್ಕಾಪಟೆ ಬೈದಿದ್ದಾರೆ. ಒಂದೇ ಸಮ ಹೊಡೆಯಲು ಪ್ರಾರಂಭಿಸಿದ್ದಾರೆ.

ಘಟನೆ ನಡೆಯುತ್ತಿದ್ದ ಸ್ಥಳದಲ್ಲಿ ಭರ್ಜರಿ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಈ ಗುಂಪನ್ನು ನೋಡಿ ಅಲ್ಲಿಗೆ ಬಂದ ನೌಚಂಡಿ ಪೊಲೀಸರು ಪತಿ-ಪತ್ನಿ ಹೊಡೆದಾಟವನ್ನು ನಿಲ್ಲಿಸಿದ್ದಾರೆ. ಇಬ್ಬರನ್ನೂ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ನಾನು ಆಯೇಷಾಗೆ ಈಗಾಗಲೇ ಡಿವೋರ್ಸ್​ ನೀಡಿದ್ದಾಗಿ ಅದ್ನಾನ್​ ಹೇಳಿಕೊಂಡಿದ್ದಾನೆ. ಆದರೆ ಅದಕ್ಕೆ ಸಂಬಂಧಪಟ್ಟ ಯಾವುದೇ ದಾಖಲೆಯನ್ನೂ ಆತ ನೀಡಿಲ್ಲ. ಆಯೇಷಾ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾಳೆ ಎಂದೂ ದೂರು ನೀಡಿದ್ದಾನೆ. ಅದ್ನಾನ್​ ಆರೋಪವನ್ನು ತಳ್ಳಿಹಾಕಿದ ಆಯೇಷಾ, ಆತನ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ನೀಡಿದ್ದಾರೆ.

ಇದನ್ನೂ ಓದಿ: ‘ಬಿಜೆಪಿಯವ್ರು ಹೆಣ್ಣುಮಕ್ಕಳಿಗೆ ಕಾಟ ಕೊಡ್ತಾರೆ.. ಅವರ ಕಾಟ ತಡೆಯೋಕಾಗದೆ ಹೆಣ್ಣುಮಕ್ಕಳು ಪಕ್ಷದಲ್ಲಿ ಇರಲ್ಲ’

‘ಆ ಮುಸ್ಲಿಂ ಹುಡುಗ ದೇಗುಲಕ್ಕೆ ಬಂದಿದ್ದು ನೀರಿಗಾಗಿ ಅಲ್ಲ..’-ದಾಸ್ನಾದಲ್ಲಿ ಹಿಂದು ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು ವಿವರಿಸಿದ ಪ್ರಧಾನ ಅರ್ಚಕ

ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ