‘ಬಿಜೆಪಿಯವ್ರು ಹೆಣ್ಣುಮಕ್ಕಳಿಗೆ ಕಾಟ ಕೊಡ್ತಾರೆ.. ಅವರ ಕಾಟ ತಡೆಯೋಕಾಗದೆ ಹೆಣ್ಣುಮಕ್ಕಳು ಪಕ್ಷದಲ್ಲಿ ಇರಲ್ಲ’
ನೀವು ಅಲ್ಲೇ ಉದ್ಭವಿಸಿದವರಲ್ಲ, ನಮ್ಮಿಂದ ಹೋದವರೇ. ಆದ್ರೆ ನೀವು ಆದಷ್ಟು ಬೇಗ ವಾಪಸ್ ಬರುತ್ತೀರೆಂದು ಯು.ಬಿ.ವೆಂಕಟೇಶ್ ಟಾಂಗ್ ಕೊಟ್ಟರು. ಜೊತೆಗೆ, ಬಿಜೆಪಿಯವರು ಹೆಣ್ಣು ಮಕ್ಕಳಿಗೆ ಕಾಟ ಕೊಡುತ್ತಾರೆ. ಅವರ ಕಾಟ ತಡೆಯಲಾರದೆ ಹೆಣ್ಣುಮಕ್ಕಳು ಬಿಜೆಪಿಯಲ್ಲಿ ಇರಲ್ಲ ಎಂದು ಲೇವಡಿ ಮಾಡಿದರು.
ಬೆಂಗಳೂರು: ನಮ್ಮವರನ್ನು ಕರೆದುಕೊಂಡು ಹೋಗಿ ಸರ್ಕಾರ ಮಾಡಿದ್ದಾರೆ. ಈಗ ಈ ಸರ್ಕಾರ ಏಕೆ ಮಾಡಿದೆವೋ ಎಂದು ಅನಿಸಿರಬೇಕು. ಕೊರೊನಾ, ಪ್ರವಾಹ ಎಲ್ಲ ನೋಡಿ ಆ ರೀತಿ ಅನಿಸಿರಬೇಕು ಎಂದು ವಿಧಾನಪರಿಷತ್‌ನಲ್ಲಿ ವಿಪಕ್ಷ ನಾಯಕ S.R.ಪಾಟೀಲ್ ಹೇಳಿದರು. ಆಗ, ನಿಮ್ಮನ್ನು ಬಿಟ್ಟು ನಮ್ಮ ಜೊತೆ ಬಂದಿದ್ದಕ್ಕೆ ಸರ್ಕಾರ ಮಾಡಿದ್ದು ಎಂದು ವಿಧಾನಪರಿಷತ್‌ನಲ್ಲಿ ಬಿಜೆಪಿ ಸದಸ್ಯೆ ತೇಜಸ್ವಿನಿ ತಿರುಗೇಟು ಕೊಟ್ಟರು. ಈ ವೇಳೆ, ತೇಜಸ್ವಿನಿ ಮಾತಿಗೆ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಟಕ್ಕರ್ ಕೊಟ್ಟರು.
‘ನೀವು ಅಲ್ಲೇ ಉದ್ಭವಿಸಿದವರಲ್ಲ, ನಮ್ಮಿಂದ ಹೋದವರೇ’ ನೀವು ಅಲ್ಲೇ ಉದ್ಭವಿಸಿದವರಲ್ಲ, ನಮ್ಮಿಂದ ಹೋದವರೇ. ಆದ್ರೆ ನೀವು ಆದಷ್ಟು ಬೇಗ ವಾಪಸ್ ಬರುತ್ತೀರೆಂದು ಯು.ಬಿ.ವೆಂಕಟೇಶ್ ಟಾಂಗ್ ಕೊಟ್ಟರು. ಜೊತೆಗೆ, ಬಿಜೆಪಿಯವರು ಹೆಣ್ಣು ಮಕ್ಕಳಿಗೆ ಕಾಟ ಕೊಡುತ್ತಾರೆ. ಅವರ ಕಾಟ ತಡೆಯಲಾರದೆ ಹೆಣ್ಣುಮಕ್ಕಳು ಬಿಜೆಪಿಯಲ್ಲಿ ಇರಲ್ಲ ಎಂದು ಲೇವಡಿ ಮಾಡಿದರು.
‘ಇದು ವಿವಾಹೇತರ ಸಂಬಂಧಕ್ಕೆ ಹುಟ್ಟಿರುವ ಸರ್ಕಾರ’ ಈ ವೇಳೆ ಮಧ್ಯಪ್ರವೇಶ ಮಾಡಿದ ಎಸ್.ಆರ್.ಪಾಟೀಲ್ ರಾಜ್ಯ ಬಿಜೆಪಿ ಸರ್ಕಾರ ಒಂದು ಅನೈತಿಕ ಶಿಶು ಎಂದು ಕಾಲೆಳೆದರು. ಇದು ವಿವಾಹೇತರ ಸಂಬಂಧಕ್ಕೆ ಹುಟ್ಟಿರುವ ಸರ್ಕಾರ. ಪಕ್ಷಾಂತರಿಗಳು ಗೆದ್ದು ಬರುವವರೆಗೆ ಲಿವಿಂಗ್ ಟುಗೆದರ್ ನಡೆದಿದೆ. ಆಗ ಅನೈತಿಕವಾಗಿ ಈ ಸರ್ಕಾರ ಹುಟ್ಟಿದೆ ಎಂದು S.R.ಪಾಟೀಲ್ ಹೇಳಿದರು. ನ್ಯಾಯಾಲಯ ಬೇರೆ ಅನೈತಿಕ ಸಂಬಂಧ ತಪ್ಪಲ್ಲ ಎಂದಿದೆ ಎಂದು ಸಿಕ್ಕಾಪಟ್ಟೆ ಲೇವಡಿ ಮಾಡಿದರು.
ಇದಕ್ಕೆ, S.R.ಪಾಟೀಲ್‌ರವರೇ ನೀವಾ ಆ ರೀತಿಯಾಗಿ ಹೇಳಬೇಡಿ. ಬಿಜೆಪಿಯವರು ಕೋರ್ಟ್‌ಗೆ ಹೋದರೆ ಕಷ್ಟವಾಗುತ್ತದೆ. ಸ್ಟೇ ಕೊಡಿ ಎಂದು ಸದಸ್ಯ ಶ್ರೀನಿವಾಸ ಮಾನೆ ಹೇಳಿದರು. ಈ ವೇಳೆ ಬಿಜೆಪಿ, ‘ಕೈ’ ಸದಸ್ಯರ ನಡುವೆ ಮಾತಿನ ಚಕಮಕಿ ಸಹ ನಡೆಯಿತು.
ಪದೇಪದೆ ಅನೈತಿಕ ಸಂಬಂಧಕ್ಕೆ ಹುಟ್ಟಿದ ಶಿಶು ಎಂದಿದ್ದಕ್ಕೆ ವಿಧಾನಪರಿಷತ್‌ನಲ್ಲಿ ಬಿಜೆಪಿ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಈ ವೇಳೆ, ಸಂಕಷ್ಟದಿಂದ ಪಾರಾಗಲು ಪಕ್ಷ ಬಿಟ್ಟೆವು ಎಂದು ಪರಿಷತ್‌ನಲ್ಲಿ ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ್ ಹೇಳಿದರು.
‘ಬಾತ್‌ರೂಮ್‌ಗೆ ಹೋಗ್ತೀನೆಂದು ಓಡಿ ಹೋದವರು ನೀವು’ ಆಗ, ರೆಸಾರ್ಟ್‌ಗೆ ಸೂಟ್‌ಕೇಸ್‌ನಲ್ಲಿ ಬಟ್ಟೆ ಇಟ್ಟುಕೊಂಡು ಬಂದಿದ್ರೀ. ಬಳಿಕ ಬಾತ್‌ರೂಮ್‌ಗೆ ಹೋಗ್ತೀನೆಂದು ಓಡಿ ಹೋದವರು ನೀವು ಎಂದು ಶ್ರೀಮಂತ ಪಾಟೀಲ್‌ಗೆ ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ಕೌಂಟರ್ ಕೊಟ್ಟರು. ಈ ವೇಳೆ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ಮತ್ತೆ ಮಾತಿನ ಚಕಮಕಿ. ಆಗ, ಇದು ಯಾವುದೂ ಕಡತಕ್ಕೆ ಹೋಗುವುದು ಬೇಡವೆಂದು ಸಭಾಪತಿ ಆದೇಶ ನೀಡಿದರು.
ಇದನ್ನೂ ಓದಿ: ಹೆಜ್ಜಾಲ-ಚಾಮರಾಜನಗರ ರೈಲ್ವೆ ಯೋಜನೆಗೆ ಬೇಗ ಚಾಲನೆ ನೀಡಿ ಎಂದು 30 ಸೆಕೆಂಡ್ನಲ್ಲಿ ಮನವಿ ಸಲ್ಲಿಸಿದ ಸಂಸದೆ ಸುಮಲತಾ!
Published On - 5:58 pm, Tue, 16 March 21