‘ಆ ಮುಸ್ಲಿಂ ಹುಡುಗ ದೇಗುಲಕ್ಕೆ ಬಂದಿದ್ದು ನೀರಿಗಾಗಿ ಅಲ್ಲ..’-ದಾಸ್ನಾದಲ್ಲಿ ಹಿಂದು ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು ವಿವರಿಸಿದ ಪ್ರಧಾನ ಅರ್ಚಕ

ಘಾಜಿಯಾಬಾದ್​: ನೀರು ಕುಡಿಯಲು ದೇವಸ್ಥಾನಕ್ಕೆ ಬಂದ ಮುಸ್ಲಿಂ ಬಾಲಕನೊಬ್ಬನಿಗೆ ಸ್ಥಳದಲ್ಲಿದ್ದ ಯುವಕನೊಬ್ಬ ಥಳಿಸಿ, ಅರೆಸ್ಟ್​ ಆಗಿದ್ದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್​​ನಲ್ಲಿ ಇತ್ತೀಚೆಗಷ್ಟೇ ನಡೆದಿದೆ. ಈ ಹಿಂದು ದೇವಾಲಯ ಇರುವುದು ಘಾಜಿಯಾಬಾದ್​​ನ ದಾಸ್ನಾ ಏರಿಯಾದಲ್ಲಿ. ಅಂದು ನಡೆದ ಘಟನೆಯ ಬಗ್ಗೆ ಇದೀಗ ದೇಗುಲದ ಪ್ರಧಾನ ಅರ್ಚಕ ಮಹಾಂತ ನರಸಿಂಹಾನಂದ ಸರಸ್ವತಿ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ನೀರು ಕುಡಿಯಲು ಬಂದಿದ್ದಕ್ಕೇ ಆ ಹುಡುಗನಿಗೆ ಹೊಡೆಯಲಾಗಿದೆ ಎಂಬುದನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ. ಈ ಪ್ರದೇಶದಲ್ಲಿ ಶೇ.95ರಷ್ಟು ಮುಸ್ಲಿಮರು ಇದ್ದಾರೆ. […]

‘ಆ ಮುಸ್ಲಿಂ ಹುಡುಗ ದೇಗುಲಕ್ಕೆ ಬಂದಿದ್ದು ನೀರಿಗಾಗಿ ಅಲ್ಲ..’-ದಾಸ್ನಾದಲ್ಲಿ ಹಿಂದು ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು ವಿವರಿಸಿದ ಪ್ರಧಾನ ಅರ್ಚಕ
ಮುಸ್ಲಿಂ ಯುವಕನಿಗೆ ಥಳಿಸುತ್ತಿರುವ ಚಿತ್ರ ಮತ್ತು ದೇಗುಲದ ಪ್ರಧಾನ ಅರ್ಚಕ
Follow us
Lakshmi Hegde
|

Updated on: Mar 16, 2021 | 5:35 PM

ಘಾಜಿಯಾಬಾದ್​: ನೀರು ಕುಡಿಯಲು ದೇವಸ್ಥಾನಕ್ಕೆ ಬಂದ ಮುಸ್ಲಿಂ ಬಾಲಕನೊಬ್ಬನಿಗೆ ಸ್ಥಳದಲ್ಲಿದ್ದ ಯುವಕನೊಬ್ಬ ಥಳಿಸಿ, ಅರೆಸ್ಟ್​ ಆಗಿದ್ದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್​​ನಲ್ಲಿ ಇತ್ತೀಚೆಗಷ್ಟೇ ನಡೆದಿದೆ. ಈ ಹಿಂದು ದೇವಾಲಯ ಇರುವುದು ಘಾಜಿಯಾಬಾದ್​​ನ ದಾಸ್ನಾ ಏರಿಯಾದಲ್ಲಿ. ಅಂದು ನಡೆದ ಘಟನೆಯ ಬಗ್ಗೆ ಇದೀಗ ದೇಗುಲದ ಪ್ರಧಾನ ಅರ್ಚಕ ಮಹಾಂತ ನರಸಿಂಹಾನಂದ ಸರಸ್ವತಿ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ನೀರು ಕುಡಿಯಲು ಬಂದಿದ್ದಕ್ಕೇ ಆ ಹುಡುಗನಿಗೆ ಹೊಡೆಯಲಾಗಿದೆ ಎಂಬುದನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.

ಈ ಪ್ರದೇಶದಲ್ಲಿ ಶೇ.95ರಷ್ಟು ಮುಸ್ಲಿಮರು ಇದ್ದಾರೆ. ಶೇ.5ರಷ್ಟು ಮಾತ್ರ ಹಿಂದುಗಳು ಇಲ್ಲಿ ನೆಲೆಸಿದ್ದಾರೆ. ಘಟನೆ ನಡೆದಿದೆ ಎನ್ನಲಾದ ದೇವಸ್ಥಾನಕ್ಕೆ ಹತ್ತಿರದ ಹಳ್ಳಿಗಳಿಂದ ಹಲವು ಮಹಿಳೆಯರು ಆಗಾಗ ಭೇಟಿ ಕೊಡುತ್ತಿರುತ್ತಾರೆ. ಹೀಗೆ ಇಲ್ಲಿಗೆ ಬರುವ ಮಹಿಳೆಯರನ್ನು ಮುಸ್ಲಿಂ ಗೂಂಡಾಗಳು ಸದಾ ಹಿಂಸಿಸುತ್ತಿರುತ್ತಾರೆ. ಇನ್ನು ಯಾವುದೇ ಮಹಿಳೆ ಒಬ್ಬ ಮುಸ್ಲಿಂ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ನೀಡಿದರೆ, ಆತನ ಬೆಂಬಲಕ್ಕೆ ಇಲ್ಲಿರುವ ಎಲ್ಲ ಮುಸ್ಲಿಂ ಕುಟುಂಬಗಳೂ ಧಾವಿಸಿಬರುತ್ತವೆ ಎಂದು ಪ್ರಧಾನ ಅರ್ಚಕರು ಹೇಳಿಕೊಂಡಿದ್ದಾರೆ.

ದೇಗುಲಕ್ಕೆ ಬರುವ ಮಹಿಳೆಯರ ಮೇಲೆ ಅದೆಷ್ಟೋ ಸಲ ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವಕರು ಹಲ್ಲೆ ಮಾಡಿದ್ದಾರೆ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ, ದೇಗುಲಗಳಿಗೆ ಕನ್ನವನ್ನೂ ಹಾಕಿದ್ದಾರೆ. ಹಿಂದಿನ ಕೆಲವು ಅರ್ಚಕರನ್ನು ಕೊಲ್ಲಲಾಗಿದೆ. ಹಿಂದೆ ಹಲವು ಇಂಥ ಪ್ರಕರಣಗಳು ನಡೆದ ಬಳಿಕ ದೇವಸ್ಥಾನದ ಆವರಣಕ್ಕೆ ಮುಸ್ಲಿಮರಿಗೆ ಪ್ರವೇಶ ನಿಷೇಧ ಮಾಡಲಾಗಿದೆ. ಮುಸ್ಲಿಂ ಸಮುದಾಯಕ್ಕೆ ಪ್ರವೇಶವಿಲ್ಲ ಎಂಬ ಸೂಚನಾ ಫಲಕವನ್ನೂ ದೇವಸ್ಥಾನ ಆಡಳಿತ ಮಂಡಳಿ ಹಾಕಿದೆ ಎಂದು ಮಹಾಂತ ನರಸಿಂಹಾನಂದರು ತಿಳಿಸಿದ್ದಾರೆ.

ಅಂದು ಮುಸ್ಲಿಂ ಬಾಲಕನ ಮೇಲೆ ಹಲ್ಲೆಯಾಗಿದ್ದರ ಬಗ್ಗೆ ಮಾತನಾಡಿದ ಅವರು, ಆತನ ಉದ್ದೇಶ ನೀರು ಕುಡಿಯುವುದು ಆಗಿರಲಿಲ್ಲ. ಹಾಗೊಮ್ಮೆ ನೀರು ಬೇಕು ಎಂದಿದ್ದರೆ ದೇಗುಲವನ್ನು ಪ್ರವೇಶಿಸುವ ಅಗತ್ಯವೇ ಇರಲಿಲ್ಲ. ಪ್ರವೇಶದ್ವಾರದ ಬಲಬದಿಯಲ್ಲೇ ಒಂದು ಕುಡಿಯುವ ನೀರಿನ ನಲ್ಲಿ ಇದೆ. ಇನ್ನೊಂದು ಅದೇ ರಸ್ತೆಯಲ್ಲಿ, ದೇಗುಲ ಸಮೀಪವೇ ಇದೆ. ಅಲ್ಲೇ ಕುಡಿಯಬಹುದಿತ್ತು ಎಂದು ಹೇಳಿದ್ದಾರೆ.

ಮುಸ್ಲಿಂ ಸಮುದಾಯದವರಿಗೆ ಪ್ರವೇಶ ಇಲ್ಲ ಎಂದು ದೇಗುಲದ ದ್ವಾರದ ಬಳಿಯೇ ಬೋರ್ಡ್​ ಹಾಕಿದ್ದೇವೆ. ಆ ಹುಡುಗನಿಗೆ 14 ವರ್ಷ ಆಗಿದೆ. ಅದನ್ನು ಓದಲು ಬರುವುದಿಲ್ಲವೇ? ಒಂದೊಮ್ಮೆ ಬರುವುದಿಲ್ಲ ಎಂದಾದರೆ ಆ ಸಮುದಾಯದಲ್ಲಿ ಮಕ್ಕಳಿಗೆ ಮೂಲಭೂತ ಶಿಕ್ಷಣವನ್ನೂ ನೀಡುತ್ತಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದೇ ಕಾರಣಕ್ಕೆ ಅವರೆಲ್ಲ ಕಳ್ಳತನ, ಲೂಟಿ, ದರೋಡೆಯಂತ ಕೃತ್ಯದಲ್ಲಿ ತೊಡಗಿಕೊಂಡಿದ್ದಾರೆ ಎನ್ನಿಸುತ್ತದೆ. ಇದೇ ದೇಗುಲದಲ್ಲಿ ನಾಲ್ಕು ಬಾರಿ ಕಳವಾಗಿದೆ. ಅಷ್ಟೂ ಬಾರಿಯೂ ಆರೋಪಿಗಳು ಮುಸ್ಲಿಂ ಯುವಕರೇ ಆಗಿದ್ದಾರೆ ಎಂದು ಪ್ರಧಾನ ಅರ್ಚಕರು ತಿಳಿಸಿದ್ದಾರೆ.

ಪ್ರಾರ್ಥನೆ ಸಲ್ಲಿಸುವುದಾದರೆ ಬರಲಿ ಮುಸ್ಲಿಮರು ದೇವಸ್ಥಾನಕ್ಕೆ ಬರುವುದಾದರೆ, ನಮ್ಮ ಹಿಂದುಗಳ ಸಂಪ್ರದಾಯ, ನಂಬಿಕೆಯಂತೆ ಪೂಜೆ ಮಾಡಬೇಕು. ಪ್ರಾರ್ಥನೆ ಸಲ್ಲಿಸಬೇಕು. ಅದು ಬಿಟ್ಟು ಹಿಂದು ಮಹಿಳಾ ಭಕ್ತರ ಮೇಲೆ ದೌರ್ಜನ್ಯ ಎಸಗಲು, ಹಿಂದು ದೇವರ ಮೂರ್ತಿಗಳನ್ನು ಹಾಳುಗೆಡವಲು, ಕಳ್ಳತನ ಮಾಡಲು, ಕೊಲೆ ಪಿತೂರಿಗಾಗಿ ಬರುವಂತಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ ಮಹಾಂತ ನರಸಿಂಹಾನಂದರು. ಅಷ್ಟೇ ಅಲ್ಲ, ತಮಗೂ ಸಹ ಕೊಲೆ ಬೆದರಿಕೆ ಇದೆ. ಪಿಎಫ್​​ಐ ಸಂಘಟನೆ ಮತ್ತು ಸ್ಥಳೀಯ ಮುಸ್ಲಿಮರು ಸದಾ ಜೀವ ಬೆದರಿಕೆ ಕರೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ದೇವಸ್ಥಾನ ಸಾರ್ವಜನಿಕ ಆಸ್ತಿಯಲ್ಲ ನಮ್ಮ ಹಿಂದು ದೇವಾಲಯ ಸಾರ್ವಜನಿಕ ಆಸ್ತಿಯಲ್ಲ. ಇದು ಖಾಸಗಿ ಒಡೆತನಕ್ಕೆ ಸೇರಿದ್ದು. ಇಲ್ಲಿಗೆ ಬರುವ ಸರ್ಕಾರಿ ಅಧಿಕಾರಿಗಳೇ ಇರಲಿ, ಪತ್ರಕರ್ತರೇ ಇರಲಿ.. ಅವರು ಮುಸ್ಲಿಮರಾಗಿದ್ದರೆ ಖಂಡಿತ ಒಳಗೆ ಪ್ರವೇಶ ಇಲ್ಲ. ಕಳೆದ ವರ್ಷ ಸ್ಥಳೀಯ ಎಂಎಲ್​ಎ ಅಸ್ಲಾಂ ಚೌಧರಿಯ ಮಗ ದೇಗುಲದ ಆವರಣದಲ್ಲಿ ಮಹಿಳೆಯೊಬ್ಬಳಿಗೆ ದೌರ್ಜನ್ಯ ನೀಡಿದ್ದ. ಆತನಿಗೂ ಥಳಿಸಲಾಗಿತ್ತು. ಆತನೂ ಬಾಲಕನೇ ಆಗಿದ್ದ. ಸಿಸಿಟಿವ ಕ್ಯಾಮರಾದಲ್ಲೂ ದೃಶ್ಯಗಳು ಸೆರೆಯಾಗಿದ್ದವು. ಪೊಲೀಸರ ಮೇಲೆ ಒತ್ತಡ ಹೇರಿ ಪ್ರಕರಣ ಹಿಂಪಡೆಯುವಂತೆ ಮಾಡಲಾಯಿತು ಎಂದು ಮಹಾಂತ ಅವರು ತಿಳಿಸಿದ್ದಾರೆ. ಇಷ್ಟೆಲ್ಲ ಹಿನ್ನೆಲೆ ಇರುವಾಗ ನಾವು ಒಬ್ಬ ಮುಸ್ಲಿಂ ಹುಡುಗ ನೀರು ಕುಡಿಯಲು ಬಂದ ಅಂದತಕ್ಷಣ ನಂಬುವ ಸ್ಥಿತಿಯಲ್ಲಿ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಇದನ್ನೂ ಓದಿ: ನೀರು ಕುಡಿಯಲು ದೇವಸ್ಥಾನ ಪ್ರವೇಶಿಸಿದ್ದ ಮುಸ್ಲಿಂ ಹುಡುಗನಿಗೆ ಮನಬಂದಂತೆ ಥಳಿಸಿದ್ದವ ಅರೆಸ್ಟ್​; ಎಸ್​ಪಿಯಿಂದ ಖಡಕ್​ ಎಚ್ಚರಿಕೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫ್ಯಾನ್ಸ್‌ಗೆ ಬೇಸರದ ಸುದ್ದಿ, ಮೈಸೂರಿನಲ್ಲಿ ನಡೆಯಬೇಕಿದ್ದ ಯುವ ಸಂಭ್ರಮ ರದ್ದು