ನೀರು ಕುಡಿಯಲು ದೇವಸ್ಥಾನ ಪ್ರವೇಶಿಸಿದ್ದ ಮುಸ್ಲಿಂ ಹುಡುಗನಿಗೆ ಮನಬಂದಂತೆ ಥಳಿಸಿದ್ದವ ಅರೆಸ್ಟ್​; ಎಸ್​ಪಿಯಿಂದ ಖಡಕ್​ ಎಚ್ಚರಿಕೆ

ಶೃಂಗಿ ನಂದನ್​ ಯಾದವ್​ ಇಂಜಿನಿಯರಿಂಗ್​ ಪದವೀಧರನಾಗಿದ್ದು, ಮೂಲತಃ ಬಿಹಾರದ ಭಾಗಲ್​ಪುರದವನು. ನಿರುದ್ಯೋಗಿಯಾಗಿರುವ ಈತ ಕಳೆದ ಮೂರು ತಿಂಗಳಿಂದಲೂ ದೇವಸ್ಥಾನದಲ್ಲೇ ವಾಸವಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನೀರು ಕುಡಿಯಲು ದೇವಸ್ಥಾನ ಪ್ರವೇಶಿಸಿದ್ದ ಮುಸ್ಲಿಂ ಹುಡುಗನಿಗೆ ಮನಬಂದಂತೆ ಥಳಿಸಿದ್ದವ ಅರೆಸ್ಟ್​; ಎಸ್​ಪಿಯಿಂದ ಖಡಕ್​ ಎಚ್ಚರಿಕೆ
ಬಂಧಿತ ಶೃಂಗಿ ನಂದನ್ ಯಾದವ್​
Follow us
Lakshmi Hegde
|

Updated on: Mar 14, 2021 | 8:00 PM

ಘಾಜಿಯಾಬಾದ್​: ಬಾಯಾರಿಕೆ ಆಯಿತೆಂದು ನೀರು ಕುಡಿಯಲು ದೇವಸ್ಥಾನದ ಒಳಹೊಕ್ಕಿದ್ದ ಮುಸ್ಲಿಂ ಹುಡುಗನಿಗೆ ಹಿಗ್ಗಾಮುಗ್ಗಾ ಥಳಿಸಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್​ನಲ್ಲಿ ನಡೆದಿತ್ತು. 14 ವರ್ಷದ ಮುಸ್ಲಿಂ ಹುಡಗನೊಬ್ಬ ನೀರಿಗಾಗಿ ದೇವಾಲಯದ ಒಳಗೆ ಹೋಗಿದ್ದ. ಅದನ್ನು ನೋಡಿದ ಅಲ್ಲಿಯೇ ಇದ್ದ ಯುವಕನೊಬ್ಬ ಆತನನ್ನು ಹಿಡಿದುಕೊಂಡು ಸಿಕ್ಕಾಪಟೆ ಹೊಡೆದಿದ್ದ. ಈ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿದ್ದಲ್ಲದೆ, ನೆಟ್ಟಿಗರಿಂದ ತುಂಬ ಆಕ್ರೋಶವೂ ವ್ಯಕ್ತವಾಗಿತ್ತು. ಇದೀಗ ಹೊಡೆದವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್​ ಆದ ಬೆನ್ನಲ್ಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಬಂಧಿತನನ್ನು ಶೃಂಗಿ ನಂದನ್ ಯಾದವ್ ಎಂದು ಗುರುತಿಸಲಾಗಿದೆ. ಇಂಥ ಸಮಾಜವಿರೋಧಿ ಕೃತ್ಯದಲ್ಲಿ ತೊಡಗುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಘಾಜಿಯಾಬಾದ್ ಎಸ್​ಪಿ ಕಲಾನಿಧಿ ನೈಥಾನಿ ಖಡಕ್​ ಎಚ್ಚರಿಕೆ. ಮುಸ್ಲಿಂ ಹುಡುಗನೊಂದಿಗೆ ಯಾದವ್​ ತುಂಬ ಕ್ರೂರವಾಗಿ ನಡೆದುಕೊಂಡಿದ್ದು ವಿಡಿಯೋದಲ್ಲಿ ಕಾಣಿಸುತ್ತಿತ್ತು. ದೇವಸ್ಥಾನದ ಪ್ರವೇಶ ಮಾಡಿದ್ದ ಹುಡುಗನ ಬಳಿ, ನೀನು ಯಾರು? ನಿನ್ನ ಹೆಸರೇನು? ಅಪ್ಪನ ಹೆಸರೇನು ಎಂದು ಕೇಳಿದ್ದ ಯಾದವ್​? ದೇವಸ್ಥಾನಕ್ಕೆ ಯಾಕೆ ಬಂದೆ ಎಂದೂ ಪ್ರಶ್ನಿಸಿದ್ದ. ಅದಾದ ಬಳಿಕ ಹುಡುಗನ ತಲೆಗೆ ಹೊಡೆದಿದ್ದಲ್ಲದೆ, ಬಲಗೈಯನ್ನು ತಿರುಚಿದ್ದ.

ಇನ್ನು ಶೃಂಗಿ ನಂದನ್​ ಯಾದವ್​ ಇಂಜಿನಿಯರಿಂಗ್​ ಪದವೀಧರನಾಗಿದ್ದು, ಮೂಲತಃ ಬಿಹಾರದ ಭಾಗಲ್​ಪುರದವನು. ನಿರುದ್ಯೋಗಿಯಾಗಿರುವ ಈತ ಕಳೆದ ಮೂರು ತಿಂಗಳಿಂದಲೂ ದೇವಸ್ಥಾನದಲ್ಲೇ ವಾಸವಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ, ವಿಡಿಯೋ ವೈರಲ್​ ಆದ ತಕ್ಷಣ ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಕುಂದಾನಗರಿಯಲ್ಲಿ ಕೊರೊನಾರ್ಭಟ 2.0: ಒಂದೇ ದಿನ.. ಒಂದೇ ಕುಟುಂಬದ.. 14 ಮಂದಿಗೆ ವಕ್ಕರಿಸಿದ ವೈರಸ್​

ಒಡಿಶಾ ರೈತ ತಯಾರಿಸಿದ ವಿಶೇಷ ವಾಹನ; ಪೆಟ್ರೋಲ್​-ಡೀಸೆಲ್​ ಬೇಡ್ವೇ ಬೇಡ, ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 300 ಕಿಮೀ ದೂರ ಓಡಿಸಬಹುದು !