ಕೋಲಾರದಲ್ಲಿದೆ ಏಷ್ಯಾದ ಬೃಹತ್ ಹಲಸಿನ ತೋಟ; ಒಂದೇ ಕಡೆ ಸಿಗುತ್ತೆ ಸುಮಾರು 39 ಜಾತಿಯ ಹಣ್ಣು

ಎರಡು ವರ್ಷದಿಂದ ವಿಶೇಷವಾಗಿ ಹಲಸು ಸಂಸ್ಕರಣಾ ಘಟಕ ಸ್ಥಾಪನೆ ಮಾಡಿ, ಹಲಸಿನ ವಿವಿಧ ಖಾದ್ಯಗಳನ್ನು, ವಿವಿಧ ಉತ್ಪನ್ನಗಳನ್ನು, ಇಲ್ಲೇ ತಯಾರು ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ಕೋಲಾರದಲ್ಲಿದೆ ಏಷ್ಯಾದ ಬೃಹತ್ ಹಲಸಿನ ತೋಟ; ಒಂದೇ ಕಡೆ ಸಿಗುತ್ತೆ ಸುಮಾರು 39 ಜಾತಿಯ ಹಣ್ಣು
ಹಲಸು (ಸಂಗ್ರಹ ಚಿತ್ರ)
Follow us
preethi shettigar
|

Updated on: May 08, 2021 | 9:43 AM

ಕೋಲಾರ: ಹಲಸಿನ ಹಣ್ಣು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಹಳ್ಳಿಗಳ ಹೊಲದ ಮಧ್ಯೆ ಅಥವಾ ರಸ್ತೆಯ ಪಕ್ಕದಲ್ಲಿ ಒಂದು ಮರ ಇದ್ದೇ ಇರುತ್ತದೆ. ಇತ್ತಿಚೇಗೆ ಆಧುನಿಕ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಹಣ್ಣು ಇದಾಗಿದ್ದು, ಈ ಕಾರಣಕ್ಕೆ ಕೋಲಾರದಲ್ಲಿ ಅತಿ ಹೆಚ್ಚು ಇದನ್ನು ಬೆಳೆಯಲಾಗುತ್ತದೆ. ಹೀಗಾಗಿ ಏಷ್ಯಾದ ಅತಿ ದೊಡ್ಡ ಹಲಸಿನ ಹಣ್ಣಿನ ತೋಟವನ್ನು ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಕೂಡ ಕೋಲಾರ ಜಿಲ್ಲೆ ಪಾತ್ರವಾಗಿದೆ.

ಹಲಸಿನ ಹಣ್ಣು ಕೇವಲ ರೈತರ ಹೊಲಗಳಲ್ಲಿ, ಅಲ್ಲೊಂದು ಇಲ್ಲೊಂದು ಬೆಳೆಯಲಾಗುತ್ತದೆ. ಜೊತೆಗೆ ಇದಕ್ಕೆ ಬೇಡಿಕೆಯೂ ಕಡಿಮೆ ಎನ್ನುವ ಮಾತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಲಸಿನ ಮಹತ್ವದ ಬಗ್ಗೆ ದೊಡ್ಡ ದೊಡ್ಡ ಸಂಶೋಧನೆಗಳು ನಡೆದ ಹಿನ್ನೆಲೆಯಲ್ಲಿ ಹಲಸಿನ ಹಣ್ಣಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿದೆ.

ಕೋಲಾರ ನಗರಕ್ಕೆ ಹೊಂದಿಕೊಂಡಂತೆ ಇರುವ ತೋಟಗಾರಿಕಾ ಮಹಾ ವಿಶ್ವವಿದ್ಯಾಲಯದ ಆವರಣದಲ್ಲಿರುವ 40 ಎಕರೆ ಪ್ರದೇಶದಲ್ಲಿ ಬೃಹತ್ತಾದ ಹಲಸಿನ ತೋಟವಿದೆ. ಏಷ್ಯಾದಲ್ಲಿಯೇ ಅತಿ ದೊಡ್ಡ ಹಲಸಿನ ತೋಟ ಎಂಬ ಹೆಗ್ಗಳಿಕೆಗೆ ಕೂಡ ಇದು ಪಾತ್ರವಾಗಿದೆ. ಈ ಹಲಸಿನ ತೋಟದಲ್ಲಿ 1800 ಕ್ಕೂ ಹೆಚ್ಚು ಹಲಸಿನ ಮರಗಳಿದ್ದು, ಇಲ್ಲಿನ ವಿಶೇಷ ಎಂದರೆ ಏಷ್ಯಾದಲ್ಲೇ ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಹಲಸಿನ ಮರಗಳನ್ನು ಹೊಂದಿರುವ ತೋಟ ಎಂಬುದೇ ಆಗಿದೆ.

ಒಂದೇ ತೋಟದಲ್ಲಿ ಸಿಗುತ್ತೆ ಸುಮಾರು 39 ಜಾತಿಯ ಹಲಸು ತೋಟಗಾರಿಕಾ ಮಹಾವಿದ್ಯಾಲಯದ 40 ಎಕರೆ ಪ್ರದೇಶದಲ್ಲಿ ಸುಮಾರು 39 ವಿವಿಧ ಜಾತಿಯ ಹಲಸಿನ ಹಣ್ಣುಗಳಿವೆ. ಅದರಲ್ಲೂ ಜಾಣಗೆರೆ, ತೂಗುಗೆರೆ, ಸಿಂಗಾಪುರ ಹಸಲು, ಚಂದ್ರಹಲಸು, ಅಂಟಿಲ್ಲದ, ಹಲಸು ಸೇರಿದಂತೆ ವಿವಿಧ ತಳಿಗಳನ್ನು ಇಲ್ಲಿ ಬೆಳೆಯಲಾಗುತ್ತದೆ.

ಹಲಸಿನ ಹಣ್ಣಿಗೆ ಹೆಚ್ಚಾದ ಬೇಡಿಕೆ ಸುಮಾರು 1600 ಕ್ಕೂ ಹೆಚ್ಚು ಹಲಸಿನ ಮರಗಳನ್ನು ಇಲ್ಲಿ ಬೆಳೆಸಲಾಗಿದ್ದು, ಈ ಪೈಕಿ 39 ವಿವಿಧ ದೇಶೀಯ ತಳಿಗಳನ್ನು ಇಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಹಾಗಾಗಿ ಇಷ್ಟು ವರ್ಷಗಳಲ್ಲಿ ಇಲ್ಲಿ ಬೆಳೆಯಲಾಗುತ್ತಿದ್ದ ಹಲಸನ್ನು ಮಾರಾಟ ಮಾಡಲಾಗುತ್ತಿತ್ತು, ಆದರೆ ಎರಡು ವರ್ಷದಿಂದ ವಿಶೇಷವಾಗಿ ಹಲಸು ಸಂಸ್ಕರಣಾ ಘಟಕ ಸ್ಥಾಪನೆ ಮಾಡಿ, ಹಲಸಿನ ವಿವಿಧ ಖಾದ್ಯಗಳನ್ನು, ವಿವಿಧ ಉತ್ಪನ್ನಗಳನ್ನು, ಇಲ್ಲೇ ತಯಾರು ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ಇದಕ್ಕಾಗಿ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದರೆ ಕೋವಿಡ್​ ಕಾರಣಕ್ಕಾಗಿ ಕೆಲಸ ಕಾರ್ಯಗಳು ಕುಂಠಿತವಾಗಿದೆ. ಇನ್ನು ಹಲಸಿನ ಹಣ್ಣಿನಿಂದ, ಹಲಸಿನ ಹಣ್ಣಿನ ಐಸ್​ಕ್ರೀಂ, ಬರ್ಪಿ, ಚಿಪ್ಸ್​, ಜಾಮ್​, ಪಲ್ಪಿ ಜ್ಯೂಸ್​, ಸೇರಿದಂತೆ ಹಲವು ಖಾದ್ಯಗಳನ್ನು ತಯಾರು ಮಾಡುವ ಮೂಲಕ ಹಲಸಿನ ಮಹತ್ವವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಈ ಹಲಸಿನ ತೋಟವನ್ನು ಒಳ್ಳೆಯ ಪ್ರವಾಸಿ ಕೇಂದ್ರವನ್ನಾಗಿ ಮಾಡುವ ಕುರಿತು ಚಿಂತನೆ ಮಾಡಲಾಗಿದೆ ಎಂದು ಕೋಲಾರ ತೋಟಗಾರಿಕಾ ಮಹಾವಿದ್ಯಾಲಯದ ಕುಲಪತಿಗಳಾದ ಡಾ.ಪ್ರಕಾಶ್ ತಿಳಿಸಿದ್ದಾರೆ.

ಒಟ್ಟಾರೆ ಇಷ್ಟುದಿನ ಕೇವಲ ಹಳ್ಳಿಯ ಹಣ್ಣಾಗಿದ್ದ ಹಲಸಿನಹಣ್ಣು ಇನ್ನು ಮುಂದೆ ವಿಶೇಷ ಹಣ್ಣಾಗಿ ಕಲ್ಪವೃಕ್ಷದಂತೆ ಅಭಿವೃದ್ಧಿ ಪಡಿಸಲು ಚಿಂತನೆ ನಡೆದಿದ್ದು, ಆ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇ ಆದಲ್ಲಿ ಹಲಸಿನ ಮಹತ್ವ ದ್ವಿಗುಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಇದನ್ನೂ ಓದಿ:

ಅಮೆರಿಕದಲ್ಲೂ ಹುಟ್ಟೂರಿನ ಬೇರುಗಳು! ಹಿತ್ತಲಿನಲ್ಲಿ ಹಲಸಿನ ಜೊತೆ ಡಾ. ವಿವೇಕ್..

ಅತಿ ಹೆಚ್ಚು ತೂಕದ ಮಾವಿನ ಹಣ್ಣು ಬೆಳೆದು ವಿಶ್ವ ದಾಖಲೆಗೆ ಹೆಸರಾದ ಕೊಲಂಬಿಯಾ ರೈತರು

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ