ಅತಿ ಹೆಚ್ಚು ತೂಕದ ಮಾವಿನ ಹಣ್ಣು ಬೆಳೆದು ವಿಶ್ವ ದಾಖಲೆಗೆ ಹೆಸರಾದ ಕೊಲಂಬಿಯಾ ರೈತರು

ಕೊಲಂಬಿಯಾ ರೈತರು ವಿಶ್ವದಲ್ಲಿಯೇ ಅತಿ ಹೆಚ್ಚು ಮಾವಿನ ಹಣ್ಣನ್ನು ಬೆಳೆದಿದ್ದಾರೆ ಮತ್ತು ಅತಿ ಹೆಚ್ಚು ತೂಕದ ಮಾವು ಬೆಳೆದು ಗಿನ್ನಿಸ್​ ದಾಖಲೆಗೆ ಹೆಸರಾಗಿದ್ದಾರೆ.

  • Publish Date - 12:11 pm, Sun, 2 May 21 Edited By: Ayesha Banu
ಅತಿ ಹೆಚ್ಚು ತೂಕದ ಮಾವಿನ ಹಣ್ಣು ಬೆಳೆದು ವಿಶ್ವ ದಾಖಲೆಗೆ ಹೆಸರಾದ ಕೊಲಂಬಿಯಾ ರೈತರು
ವಿಶ್ವ ದಾಖಲೆ ಸೃಷ್ಟಿಸಿದ ಮಾವಿನ ಹಣ್ಣು

ಮಾವು ಎಂದ ತಕ್ಷಣ ಬಾಯಿಯಲ್ಲಿ ನೀರೂರುವುದು ಸಹಜ. ತಿಳಿಹಳದಿ ಬಣ್ಣದ ಮಾವಿನ ಹಣ್ಣನ್ನು ನೋಡಿದಾಕ್ಷಣ ತಿನ್ನಬೇಕು ಎಂದೆನಿಸುತ್ತದೆ. ರಸಭರಿತ ಮಾವು ಸವಿಯುವ ಕಾಲವನ್ನೇ ಜನರು ಎದುರು ನೋಡುತ್ತಿರುತ್ತಾರೆ. ಗೆಳೆಯರೆಲ್ಲಾ ಕೂಡಿ ಹಣ್ಣಿನ ಬುಟ್ಟಿಯನ್ನೇ ಎದುರಿಗಿಟ್ಟುಕೊಂಟು ತಿನ್ನುವ ಭರಾಟೆಯಲ್ಲಿ ಪೈಪೋಟಿ ನಡೆಸುತ್ತಾ ಮಾವನ್ನು ಸವಿಯುವುದುಂಡು. ಅದಕ್ಕಾಗಿಯೇ ರಸವತ್ತಾದ ಹಣ್ಣಿನ ಬುಟ್ಟಿಯನ್ನು ಸ್ನೇಹದ ಸೂಚಕ ಎಂದು ಪರಿಗಣಿಸಲಾಗುತ್ತದೆ. ಬುಟ್ಟಿಯಲ್ಲಿ ಹಣ್ಣನ್ನು ಆಯ್ಕೆ ಮಾಡಿಕೊಳ್ಳುವಾಗ ದೊಡ್ಡದಾಗಿರುವ ಹಣ್ಣಿನ ಕಡೆಗೆ ಕಣ್ಣು ಸೆಳೆಯುತ್ತದೆ. ಹೀಗಾಗಿ ಮಾವಿನ ಹಣ್ಣಿನ ಪ್ರಿಯರ ಬೇಡಿಕೆಯನ್ನು ಈಡೇರಿಸಲು ಕೊಲಂಬಿಯಾ ರೈತರು ಮುಂದಾಗಿದ್ದು, ವಿಶ್ವದಲ್ಲಿಯೇ ಅತಿ ಹೆಚ್ಚು ಮಾವಿನ ಹಣ್ಣನ್ನು ಬೆಳೆದಿದ್ದಾರೆ ಮತ್ತು ಅತಿ ಹೆಚ್ಚು ತೂಕದ ಮಾವಿನ ಹಣ್ಣು ಬೆಳೆದು ಗಿನ್ನಿಸ್​ ದಾಖಲೆಗೆ ಪಾತ್ರರಾಗಿದ್ದಾರೆ.

4.25 ಕಿ.ಗ್ರಾಂ ಭಾರದ ಮಾವು ಬೆಳೆದ ಕೊಲಂಬಿಯಾ ರೈತರು ಈ ಹಿಂದಿನ ದಾಖಲೆ ಮುರಿದು ಮೊದಲ ಸ್ಥಾನಗಳಿಸಿಕೊಂಡಿದ್ದಾರೆ. ಈ ಹಿಂದೆ 2009ರಲ್ಲಿ ಫಿಲಿಪೈನ್​ನಲ್ಲಿ ಕಂಡುಬರುವ ಮಾವಿನ ಹಣ್ಣಿನ ತೂಕದ 3.43 ಕೆಜಿಯ ದಾಖಲೆಯನ್ನು ಈ ಬಾರಿ ಕೊಲಂಬಿಯಾದ ಗ್ಯಾಟ್​ ಪ್ರದೇಶದಲ್ಲಿ ಜರ್ಮನ್​ ಒರ್ಲ್ಯಾಂಡೋ ನೊವಾ ಬ್ಯಾರೆರಾ ಮತ್ತು ರೀನಾ ಮಾರಿಯಾ ಮರೋಕ್ವಿನ್​ ಮೀರಿಸಿದ್ದಾರೆ.

ಕೊಲಂಬಿಯಾ ಜನರು ಪರಿಶ್ರಮ ಜೀವಿಗಳು ಎಂದು ಜಗತ್ತಿಗೆ ತೋರ್ಪಡಿಸುವ ಉದ್ದೇಶ ನಮ್ಮದು ಎಂದು ಜರ್ಮನ್​ ಅಭಿಪ್ರಾಯ ಹಂಚಿಕೊಂಡಿದ್ದು, ನನ್ನ ಭೂಮಿ ಎಂದರೆ ನನಗೆ ತುಂಬಾ ಇಷ್ಟ. ನನ್ನ ಜಮೀನು ನನಗೆ ಉತ್ತಮ ಫಲವನ್ನು ನೀಡುತ್ತದೆ. ನಮ್ಮ ಭೂಮಿಯು ಸಾಂಕ್ರಾಮಿಕ ಸಮಯದಲ್ಲಿ ಜನರಿಗೆ ಭರವಸೆ ಮತ್ತು ಖುಷಿಯನ್ನು ನೀಡುತ್ತಿದೆ. ನನಗೆ ಸಿಕ್ಕ ಈ ಪ್ರಶಸ್ತಿಯನ್ನು ಗ್ವಾಯಾಟಾದ ಜನರಿಗೆ, ನನ್ನ ಪೋಷಕರಿಗೆ ಮತ್ತು ಉತ್ತಮ ಫಲ ನೀಡಲು ಸಹಕರಿಸಿದ ಪ್ರಕೃತಿಗೆ ಅರ್ಪಿಸುತ್ತೇನೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

2014ರಲ್ಲಿ 3,199 ಚದರ ಮೀಟರ್​ ಎತ್ತರದಲ್ಲಿ ಅತಿ ಉದ್ದದ ಹೂವಿನ ಕಾರ್ಪೆಟ್​ ದಾಖಲೆಯನ್ನು ಮುರಿದ ನಂತರ ಎರಡನೇ ಗಿನ್ನಿಸ್​ ವಿಶ್ವ ದಾಖಲೆ ಇದು ಎಂದು ಜರ್ಮನ್​ ಹೇಳಿಕೊಂಡಿದೆ. ನಾವು ಬೆಳೆದ ಹಣ್ಣನ್ನು ಕುಟುಂಬದವರೆಲ್ಲಾ ಒಟ್ಟಿಗೆ ಕೂತು ಸವಿಯುತ್ತಾ ದಾಖಲೆಯ ಸಂಭ್ರಮವನ್ನು ಆಚರಿಸಿದ್ದೇವೆ. ‘ಮಾವಿನ ಹಣ್ಣು ತುಂಬಾ ರುಚಿಕರವಾಗಿತ್ತು ಎಂದು ವಿಜೇತ ಕುಟುಂಬ​ ತಿಳಿಸಿದೆ.

ಇದನ್ನೂ ಓದಿ: 3 ಎಕರೆಯಲ್ಲಿ ವಿವಿಧ ತಳಿಯ ಮಾವು ಬೆಳೆದು ಕೃಷಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ ಯಾದಗಿರಿ ರೈತ

(Guinness record Colombian Farmers Growing World Heaviest Mango)