New Car Offers: ಈ ಕಾರುಗಳ ಖರೀದಿ ಮೇಲೆ 45 ಸಾವಿರ ರೂಪಾಯಿವರೆಗೆ ಉಳಿತಾಯ

ಭಾರತದ ಒಟ್ಟೂ ಜನಸಂಖ್ಯೆಯಲ್ಲಿ ಮಧ್ಯಮವರ್ಗದವರ ಸಂಖ್ಯೆ ದೊಡ್ಡದಿದೆ. ಹೀಗಾಗಿ ವಾಹನ ತಯಾರಿಕಾ ಸಂಸ್ಥೆಗಳು ಇದನ್ನು ಗಮನದಲ್ಲಿಟ್ಟುಕೊಂಡೇ ಬೈಕ್ ಹಾಗೂ ಕಾರುಗಳನ್ನು ಸಿದ್ಧಪಡಿಸುತ್ತಿವೆ.

New Car Offers: ಈ ಕಾರುಗಳ ಖರೀದಿ ಮೇಲೆ 45 ಸಾವಿರ ರೂಪಾಯಿವರೆಗೆ ಉಳಿತಾಯ
ಸಾಂದರ್ಭಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
|

Updated on:May 03, 2021 | 2:12 PM

ಕೊರೊನಾ ವೈರಸ್ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಜನರು ಖಾಸಗಿ ವಾಹನದಲ್ಲಿ ಓಡಾಡಲು ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಅದರಲ್ಲೂ ಕಾರ್ ಆದರೆ ಹೆಚ್ಚು ಉತ್ತಮ ಎನ್ನುವ ನಿರ್ಧಾರಕ್ಕೆ ಅನೇಕರು ಬಂದಿರುತ್ತಾರೆ. ಹಾಗಾದರೆ, ಯಾವ ಕಾರು ಖರೀದಿಸಬೇಕು? ಯಾವ ಕಂಪನಿಯವರು ಹೆಚ್ಚು ಡಿಸ್ಕೌಂಟ್ ಕೊಡುತ್ತಾರೆ ಎಂದು ಜನಸಾಮಾನ್ಯರು ಹುಡುಕುವುದು ಸಹಜ. ನೀವು ಅಗ್ಗದ ಖರೀದಿಸಲು ಬಯಸಿದರೆ, ಈ ಕಂಪನಿಗಳು ಎರಡು ಮಾಡೆಲ್ ಕಾರುಗಳು ಭಾರೀ ರಿಯಾಯಿತಿಯನ್ನು ನೀಡುತ್ತಿವೆ. ನಿಮಗೆ 45,000 ರೂ.ವರೆಗೆ ಉಳಿತಾಯ ಮಾಡಬಹುದು.

ರೆನಾಲ್ಟ್ ಟ್ರೈಬರ್ ಭಾರತದ ಒಟ್ಟೂ ಜನಸಂಖ್ಯೆಯಲ್ಲಿ ಮಧ್ಯಮವರ್ಗದವರ ಸಂಖ್ಯೆ ದೊಡ್ಡದಿದೆ. ಹೀಗಾಗಿ ವಾಹನ ತಯಾರಿಕಾ ಸಂಸ್ಥೆಗಳು ಇದನ್ನು ಗಮನದಲ್ಲಿಟ್ಟುಕೊಂಡೇ ಬೈಕ್ ಹಾಗೂ ಕಾರುಗಳನ್ನು ಸಿದ್ಧಪಡಿಸುತ್ತಿವೆ. ಮಾರುತಿ ಸುಜುಕಿ ಸೇರಿ ಸಾಕಷ್ಟು ಕಂಪೆನಿಗಳು ಕಡಿಮೆ ದರದ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಫ್ರೆಂಚ್ ಕಾರು ತಯಾರಿಕಾ ಸಂಸ್ಥೆ ರೆನಾಲ್ಟ್ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಭಾರತದ ಜನರ ಅಭಿರುಚಿಗೆ ತಕ್ಕಂತೆ ವಾಹನಗಳನ್ನು ರೆನಾಲ್ಟ್ ತಯಾರಿಸುತ್ತಿದೆ.

ರೆನಾಲ್ಟ್ ಸಂಸ್ಥೆ 2021ರ ಟ್ರೈಬರ್ ಮಾಡೆಲ್ ಪರಿಚಯಿಸಿತ್ತು. 5.30 ಲಕ್ಷ ರೂಪಾಯಿ (ಎಕ್ಸ್ ಶೋರೂಂ ಬೆಲೆ) ಇದರ ಆರಂಭಿಕ ಬೆಲೆ ಆಗಿದ್ದು, ಗರಿಷ್ಠ ಮೊತ್ತ 7.82 ಲಕ್ಷ ರೂಪಾಯಿ (ಎಕ್ಸ್ ಶೋರೂಂ ಬೆಲೆ) ಇದೆ. ಈ ಕಾರು ಖರೀದಿ ಮಾಡಿದರೆ 45 ಸಾವಿರ ರೂಪಾಯಿ ತನಕ ರಿಯಾಯಿತಿ ಸಿಗಲಿದೆ. ಇದರ ಜೊತೆಗೆ 10,000 ತನಕ ಕಾರ್ಪೋರೇಟ್ ಡಿಸ್ಕೌಂಟ್ ಕೂಡಾ ಸಿಗಲಿದೆ.

ಡಸ್ಟನ್ ಗೋ ಪ್ಲಸ್ ಜಪನಿನ ಡಸ್ಟನ್ ಗೋ ಪ್ಲಸ್ ಕೂಡ ಗ್ರಾಹಕರಿಗೆ ಸಾಕಷ್ಟು ಆಫರ್ ನೀಡುತ್ತಿದೆ. ಈ ಕಾರಿನ ಬೆಲೆ (ಎಕ್ಸ್ ಶೋರೂಂ) 4.25 ಲಕ್ಷ ರೂಪಾಯಿ. ಈ ಮಾಡೆಲ್​ನ ಟಾಪ್ ಎಂಡ್ ಬೆಲೆ 6.99 ಲಕ್ಷ ರೂಪಾಯಿ. ತನ್ನ ಗ್ರಾಹಕರಿಗೆ 40 ಸಾವಿರ ರೂಪಾಯಿ ಡಿಸ್ಕೌಂಟ್ ನೀಡಿದೆ. ಹಳೆಯ ಕಾರನ್ನು ಬದಲಾಯಿಸುವುದಾದರೆ ಮತ್ತೆ 20,000 ರೂಪಾಯಿ ಉಳಿತಾಯವಾಗಲಿದೆ.

ಇದನ್ನೂ ಓದಿ: Used car loans: ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಯಾವ ಬ್ಯಾಂಕ್​ನಲ್ಲಿ ಬಡ್ಡಿ ದರ ಕಡಿಮೆ?

Published On - 7:14 pm, Sun, 2 May 21