World Laughter Day 2021: ವಿಶ್ವ ನಗು ದಿನಕ್ಕೆ ಮೀಮ್ಸ್ ಮತ್ತು ವಿಡಿಯೋಗಳ ಕೊಡುಗೆ ಏನು?

ಪ್ರತಿ ವರ್ಷ ಮೇ ತಿಂಗಳ ಮೊದಲ ಭಾನುವಾರವನ್ನು ವಿಶ್ವ ನಗು ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಮೊದಲ ಬಾರಿಗೆ 1998 ರಂದು ಮುಂಬೈನಲ್ಲಿ ಡಾ. ಮದನ್ ಕಟಾರಿಯಾ ಆಚರಿಸಿದರು.

World Laughter Day 2021: ವಿಶ್ವ ನಗು ದಿನಕ್ಕೆ ಮೀಮ್ಸ್ ಮತ್ತು ವಿಡಿಯೋಗಳ ಕೊಡುಗೆ ಏನು?
ಪ್ರಾತಿನಿಧಿಕ ಚಿತ್ರ
Follow us
preethi shettigar
|

Updated on:May 02, 2021 | 11:41 AM

ಕೊರೊನಾ ಸೊಂಕಿನಿಂದಾಗಿ ಇಡೀ ದೇಶವೇ ನಲುಗಿ ಹೋಗಿದೆ. ಕುಟುಂಬಸ್ಥರ ಸಾವು-ನೋವು ಕಂಡ ಹಲವರು ನಗು ಅಥವಾ ಸಂತೋಷ ಎಂದರೆ ಏನು ಎನ್ನುವಂತಹ ಸ್ಥಿತಿ ತಲುಪಿದ್ದಾರೆ. ಆದರೆ ಇಂತಹ ಸಂಕಷ್ಟದ ದಿನಗಳಲ್ಲೂ ಕೂಡ ಕೆಲವೊಂದು ವಿಡಿಯೋಗಳು ಮತ್ತು ಮೀಮ್ಸ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಜನರು ಖಿನ್ನತೆಯಿಂದ ಹಾಗೂ ಕೆಲಸದ ಒತ್ತಡದಿಂದ ಆಚೆ ಬಂದು, ಒಂದು ಕ್ಷಣ ಮನಸ್ಸು ಹಗುರವಾಗುವಷ್ಟು ನಗುವನ್ನು ಊಣಬಡಿಸುತ್ತಿದೆ ಎಂದರೆ ಬಹುಷಃ ತಪ್ಪಾಲಿಕ್ಕಿಲ್ಲ.

ಪ್ರತಿ ವರ್ಷ ಮೇ ತಿಂಗಳ ಮೊದಲ ಭಾನುವಾರವನ್ನು ವಿಶ್ವ ನಗು ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಮೊದಲ ಬಾರಿಗೆ 1998 ರಂದು ಮುಂಬೈನಲ್ಲಿ ಡಾ. ಮದನ್ ಕಟಾರಿಯಾ ಆಚರಿಸಿದರು. ಅದರಂತೆ ಪ್ರತಿ ವರ್ಷವೂ ಕೂಡ ಜನರು ಈ ದಿನವನ್ನು ಹೆಚ್ಚು ಖುಷಿಯಿಂದ ಕಳೆಯಲು ಇಚ್ಛಿಸುತ್ತಾರೆ ಮತ್ತು ತಮ್ಮವರನ್ನು ನಗಿಸಲು ಪ್ರಯತ್ನಿಸುತ್ತಾರೆ. ಆದಾಗ್ಯೂ ಸಾಂಕ್ರಾಮಿಕ ರೋಗದ ಪ್ರಸ್ತುತ ಪರಿಸ್ಥಿತಿಯಿಂದಾಗಿ ಈ ಬಾರಿ ಆಚರಣೆಯು ಸ್ವಲ್ಪ ವಿಭಿನ್ನವಾಗಿ ಕಾಣುತ್ತದೆ. ಹೀಗಾಗಿ ನಗಿಸುವ ಪ್ರಯತ್ನ ಕೂಡ ಕೊಂಚ ಸಾಮಾಜಿಕ ಅಂತರದಲ್ಲಿ ಇರಲಿದ್ದು, ವೈರಲ್​ ಆದ ಮೀಮ್ಸ್​ಗಳು ಮತ್ತು ವಿಡಿಯೋಗಳು ಹೇಗಿವೆ ಎನ್ನುವುದರ ಮುಖೇನ ಮುಖವನ್ನು ಅರಳಿಸುವ ಪ್ರಯತ್ನ ಮಾಡಲಾಗಿದೆ.

ವಿಶ್ವ ನಗೆ ದಿನದಂದು ನಗಿಸುವ ಪ್ರಯತ್ನದಲ್ಲಿ ಒಂದಷ್ಟು ಮೀಮ್ಸ್​ಗಳು ಮತ್ತು ವಿಡಿಯೋಗಳನ್ನು ಪ್ರಸ್ತುತ ಪಡಿಸಲಾಗಿದೆ.

1. ಹಲವಾರು ವಿಷಯಗಳು ನಮ್ಮನ್ನು ಆವರಿಸಿರುತ್ತದೆ ಆದರೆ ನಾವು ಅವುಗಳನ್ನು ಬದಿಗಿಟ್ಟು ಜೀವನ ಸಾಗಿಸಲು ಸಾಧ್ಯವಿಲ್ಲ. ಬದಲಿಗೆ ನಮ್ಮ ಜೀವನ ಅಂತಹ ಹಲವು ಸವಾಲುಗಳ ಮಧ್ಯದಲ್ಲಿಯೇ ನೆಲೆವೂರಿರುತ್ತದೆ.

2. ನಿಮ್ಮ ಸ್ನೇಹಿತ ನಿಮಗೆ ಯಾವುದೇ ಒಂದು ಸರಣಿಯನ್ನು ನೋಡಲು ಹೇಳಿ ಆ ಸರಣಿಯ ನಿಮ್ಮಿತ ಮಾತನಾಡುವಾಗ ನೋಡಿದೆಯಾ ಎಂದು ಕೇಳುವ ಸಂದರ್ಭವನ್ನು ಈ ಮೀಮ್ಸ್​ ಸೂಚಿಸುತ್ತದೆ.

3. ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಮೀಮ್ಸ್​​ಗಳನ್ನು ಜನರು ಇಷ್ಟಪಡುವುದು ಅವುಗಳ ಪ್ರದರ್ಶನದ ರೀತಿಯಿಂದಾಗಿ ಅಂತೆಯೇ ಬೆಕ್ಕಿನ ಮೊಗವನ್ನು ಆಧಾರಿಸಿದ ಈ ಮೆಮ್ ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸುತ್ತದೆ.

4. 18 ವರ್ಷದ ಮೇಲ್ಪಟ್ಟ ಎಲ್ಲರೂ ಲಸಿಕೆಗಾಗಿ ಕಾಯುತ್ತಿರುವ ಪರಿಯನ್ನು ಹಾಸ್ಯದ ರೂಪದಲ್ಲಿ ಈ ವಿಡಿಯೋ ಮೂಲಕ ತೋರಿಸಲಾಗಿದೆ.

5. ಈ ಸನ್ನಿವೇಶವು ನಗೆಪಾಟಲಿಗೆ ಗುರಿ ಮಾಡುವುದರಲ್ಲಿ ಎರಡು ಮಾತಿಲ್ಲ ಹೀಗಾಗಿ ಮರೆಯದೇ ಈ ವಿಡಿಯೋ ನೋಡಿ ಒಮ್ಮೆ ನಕ್ಕು ಬಿಡಿ.

6. ಈ ನಾಯಿ ಮರಿ ಲಾಕ್​ಡೌನ್ ಸಂದರ್ಭದಲ್ಲಿ ಎಲ್ಲರನ್ನು ನಗಿಸುತ್ತಿದ್ದು, ತನ್ನ ಯಜಮಾನನನ್ನು ಕಾಡಿಸುವ ಇದರ ತುಂಟಾಟ ಎಲ್ಲರ ಮೆಚ್ಚುಗೆ ಪಡೆದಿದೆ.

7. ಮೀಮ್ಸ್​​ಗಳನ್ನು ಕಳುಹಿಸಿ ಸದಾ ತನ್ನ ಸ್ನೇಹಿತನನ್ನು ನಗಿಸುವ ಗೆಳೆಯನಿಗಾಗಿ ಈ ಮೀಮ್ಸ್​ ಅನ್ನು ಮಿಸಲಿರಿಸಲಾಗಿದೆ.

8. ಮಕ್ಕಳ ತುಂಟಾಟಕ್ಕೆ ಹಿರಿಯರು ಆಕ್ಷೇಪ ವ್ಯಕ್ತಪಡಿಸುವುದರ ಕುರಿತು ಹೇಳುವ ಮೀಮ್ಸ್​ ಇದಾಗಿದ್ದು, ಈ ಸನ್ನಿವೇಶದಲ್ಲಿ ಮಕ್ಕಳು ಯಾವ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ ಎನ್ನುವುದನ್ನು ಇಲ್ಲಿ ತೊರಿಸಲಾಗಿದೆ.

ವಿಶ್ವ ನಗು ದಿನವೂ ಜನರನ್ನು ನಗಿಸುವ ಉದ್ದೇಶದಿಂದಲೇ ಚಾಲ್ತಿಗೆ ತಂದಿದ್ದು, ಮನದಲ್ಲಿ ಎಂತಹದ್ದೇ ನೋವು ಇದ್ದರು ಒಂದು ಕ್ಷಣ ನಕ್ಕು ಬಿಡಿ ಮತ್ತು ನಿಮ್ಮ ಜೊತೆಗಿರುವವರನ್ನು ನಗಿಸಿ ಆ ಮೂಲಕ ಕಷ್ಟದ ದಿನಗಳನ್ನು ದೂರ ಮಾಡಿಕೊಳ್ಳಿ ಎನ್ನುವುದು ಟಿವಿ 9 ಡಿಜಿಟಲ್​ನ ಆಶಯ.

ಇದನ್ನೂ ಓದಿ:

ಭಾಷೆ ನನಗೆ ಬ್ಯಾರಿಯರ್ ಅಲ್ಲ.. ನಾಲ್ಕು ಭಾಷೆಗಳಲ್ಲಿ ವರ್ಕ್ ಮಾಡಿದ್ದೇನೆ – ನಟಿ ರಶ್ಮಿಕಾ ಮಂದಣ್ಣ

ವೈರಲ್ ವಿಡಿಯೋ: ಕಿಂಗ್ ಕೊಹ್ಲಿಯನ್ನು ಲಿಫ್ಟ್ ಮಾಡಿದ ಅನುಷ್ಕಾ! ಶಕ್ತಿಮಾನ್ ಅಲ್ಟ್ರಾ ಪ್ರೊ ಮ್ಯಾಕ್ಸ್ ಎಂದ ನೆಟ್ಟಿಗರು

Published On - 10:51 am, Sun, 2 May 21

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ