Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾಷೆ ನನಗೆ ಬ್ಯಾರಿಯರ್ ಅಲ್ಲ.. ನಾಲ್ಕು ಭಾಷೆಗಳಲ್ಲಿ ವರ್ಕ್ ಮಾಡಿದ್ದೇನೆ – ನಟಿ ರಶ್ಮಿಕಾ ಮಂದಣ್ಣ

ಸಾಧು ಶ್ರೀನಾಥ್​
|

Updated on: Apr 27, 2021 | 4:59 PM

ಮನೆಯಲ್ಲೇ ಇರೋ ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಜತೆ ಮಾತನಾಡಲು ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಿದ್ದಾರೆ. ಸಾಕಷ್ಟು ವಿಷ್ಯಗಳ ಬಗ್ಗೆ ಮಾತನಾಡಿದ್ದು ಏನ್ ಹೇಳಿದ್ದಾರೆ ನೋಡಿ.

ಕೊರೊನಾ ಹೆಚ್ಚಾಗ್ತಿರುವ ಕಾರಣ ಸಿನಿಮಾ ಶೂಟಿಂಗ್‌ ಗಳನ್ನ ನಿಲ್ಲಿಸಲಾಗಿದೆ. ಹೀಗಾಗಿ ಮನೆಯಲ್ಲೇ ಇರೋ ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಜತೆ ಮಾತನಾಡಲು ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಿದ್ದಾರೆ. ಸಾಕಷ್ಟು ವಿಷ್ಯಗಳ ಬಗ್ಗೆ ಮಾತನಾಡಿದ್ದು ಏನ್ ಹೇಳಿದ್ದಾರೆ ನೋಡಿ.

ತಮಿಳು, ತೆಲುಗು, ಹಿಂದಿಯಲ್ಲಿ ಸಿನಿಮಾ ಮಾಡಲು ಆರಂಭಿಸಿದ ಬಳಿಕ ರಶ್ಮಿಕಾ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಸಿಕ್ಕಿದ್ದಾರೆ. ಅವರೆಲ್ಲರ ಜೊತೆಗೂ ಸೋಶಿಯಲ್​ ಮೀಡಿಯಾ ಮೂಲಕ ಈ ಕಿರಿಕ್​ ಬೆಡಗಿ ಸಂಪರ್ಕದಲ್ಲಿ ಇದ್ದಾರೆ. ಅಭಿಮಾನಿಗಳ ಜೊತೆ ಮಾತನಾಡುವ ಸಲುವಾಗಿ ಅವರು ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದಿದ್ದರು. ಒಂದೂವರೆ ಲಕ್ಷಕ್ಕೂ ಅಧಿಕ ಜನರು ಈ ಲೈವ್​ ವೀಕ್ಷಿಸಿದ್ದಾರೆ. ಈ ವೇಳೆ ಹಲವು ಪ್ರಶ್ನೆಗಳನ್ನು ರಶ್ಮಿಕಾಗೆ ಕೇಳಲಾಯಿತು. ಆಗ ಬಾಯ್​ಫ್ರೆಂಡ್​ ವಿಷಯ ಕೂಡ ಪ್ರಸ್ತಾಪ ಆಯಿತು.
(language is not a barrier for me to reach fans says Rashmika Mandanna)