Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಲ್ಲೂ ಹುಟ್ಟೂರಿನ ಬೇರುಗಳು! ಹಿತ್ತಲಿನಲ್ಲಿ ಹಲಸಿನ ಜೊತೆ ಡಾ. ವಿವೇಕ್..

ಮಂಡ್ಯ: ವಿಶ್ವದ ದೊಡ್ಡಣ್ಣ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಜಯಭೇರಿ ಹಿಂದೆ ಸಕ್ಕರೆ ನಾಡು ಮಂಡ್ಯ ಮೂಲದ ಡಾ.ವಿವೇಕ್ ಮೂರ್ತಿ ಪಾತ್ರ ದೊಡ್ಡದಿದೆ. ಬೈಡನ್ ಪರ ಚುನಾವಣಾ ತಂತ್ರಗಾರ ತಂಡದಲ್ಲಿ ವಿವೇಕ್ ಕೂಡ ಒಬ್ಬರಾಗಿದ್ದು, ಹಾಗಾಗಿ ಅವರಿಗೆ ಮಹತ್ವದ ಹುದ್ದೆ ಸಿಗೋದು ಪಕ್ಕಾ ಎಂದು ಹೇಳಲಾಗಿದೆ. ಹೀಗಾಗಿ, ಡಾ. ವಿವೇಕ್​ ಮುಖಾಂತರ ಸಕ್ಕರೆನಾಡಿನ ಹೆಸರು ಅಮೆರಿಕದಲ್ಲೂ ಕೇಳಿಬಂದಿದೆ. ಡಾ. ವಿವೇಕ್ ಮೂರ್ತಿ ಈ ಹಿಂದೆ ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದಾಗ ಅವರ ಅಧಿಕಾರ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ […]

ಅಮೆರಿಕದಲ್ಲೂ ಹುಟ್ಟೂರಿನ ಬೇರುಗಳು! ಹಿತ್ತಲಿನಲ್ಲಿ ಹಲಸಿನ ಜೊತೆ ಡಾ. ವಿವೇಕ್..
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Nov 10, 2020 | 3:10 PM

ಮಂಡ್ಯ: ವಿಶ್ವದ ದೊಡ್ಡಣ್ಣ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಜಯಭೇರಿ ಹಿಂದೆ ಸಕ್ಕರೆ ನಾಡು ಮಂಡ್ಯ ಮೂಲದ ಡಾ.ವಿವೇಕ್ ಮೂರ್ತಿ ಪಾತ್ರ ದೊಡ್ಡದಿದೆ. ಬೈಡನ್ ಪರ ಚುನಾವಣಾ ತಂತ್ರಗಾರ ತಂಡದಲ್ಲಿ ವಿವೇಕ್ ಕೂಡ ಒಬ್ಬರಾಗಿದ್ದು, ಹಾಗಾಗಿ ಅವರಿಗೆ ಮಹತ್ವದ ಹುದ್ದೆ ಸಿಗೋದು ಪಕ್ಕಾ ಎಂದು ಹೇಳಲಾಗಿದೆ. ಹೀಗಾಗಿ, ಡಾ. ವಿವೇಕ್​ ಮುಖಾಂತರ ಸಕ್ಕರೆನಾಡಿನ ಹೆಸರು ಅಮೆರಿಕದಲ್ಲೂ ಕೇಳಿಬಂದಿದೆ. ಡಾ. ವಿವೇಕ್ ಮೂರ್ತಿ ಈ ಹಿಂದೆ ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದಾಗ ಅವರ ಅಧಿಕಾರ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ ಸೇವೆ ಇಲಾಖೆಯ ಸರ್ಜನ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದರು. ಅಂದ ಹಾಗೆ, ಡಾ. ವಿವೇಕ್ ಮೂರ್ತಿ ಮೂಲತಃ ಜಿಲ್ಲೆಯ ಹಲ್ಲೆಗೆರೆ ಗ್ರಾಮದವರು. ಡಾ. H.N. ಲಕ್ಷ್ಮಿನಾರಾಯಣಮೂರ್ತಿ ಮತ್ತು ಮೈತ್ರೇಯಿ ದಂಪತಿಯ ಏಕೈಕ ಪುತ್ರ. ಹಲವು ವರ್ಷಗಳ ಹಿಂದೆ ಇವರ ತಂದೆ ತಾಯಿ ಅಮೆರಿಕದ ಮೈಯಾಮಿ ನಗರಕ್ಕೆ ಬಂದು ನೆಲೆಸಿದರು. ಇದೇ ವೇಳೆ, ತಮ್ಮ ಹುಟ್ಟೂರಿನ ಸವಿ ನೆನಪಿನಲ್ಲಿ ಅಲ್ಲಿನ ಹೂವು ಹಣ್ಣಿನ ಸಸಿಗಳನ್ನು ತಂದು ಅಮೆರಿಕ ಮನೆಯ ಹಿತ್ತಲಿನಲ್ಲಿ ಬೆಳಿಸಿದ್ದರು. ಅಂದು ತಮ್ಮ ಪೋಷಕರು ನೆಟ್ಟಿದ್ದ ಹಲಸಿನ ಹಣ್ಣಿನ ಸಸಿ ಇಂದು ಬೃಹದಾಕಾರವಾಗಿ ಬೆಳೆದು ಸಿಹಿಯಾದ ಹಣ್ಣುಗಳನ್ನು ಬೀರುತ್ತಿದೆ. ಅದರ ಜೊತೆಗೆ ಫೋಟೋ ಒಂದನ್ನು ಡಾ.ವಿವೇಕ್​ ಮೂರ್ತಿ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು.

ಡಾ. ವಿವೇಕ್​ ಡಾಕ್ಟರ್ಸ್ ಫಾರ್ ಅಮೆರಿಕ ಎಂಬ ಸಂಘಟನೆಯ ಸಹ ಸಂಸ್ಥಾಪಕರು ಹಾಗೂ ಅಧ್ಯಕ್ಷರೂ ಸಹ ಆಗಿದ್ದಾರೆ. ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್​ ಪಕ್ಷದ ಪರ ಕೆಲಸ ಮಾಡಿದ್ದು ಚುನಾವಣಾ ತಂತ್ರಗಾರಿಕೆ ನಡೆಸಿ ಜೊ ಬೈಡನ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ, ಬೈಡನ್ ಸರ್ಕಾರ ರಚನೆಯಾದ ಬಳಿಕ ವಿವೇಕ್ ಮೂರ್ತಿ ಅವರಿಗೆ ಉನ್ನತ ಹುದ್ದೆ ಲಭ್ಯವಾಗುವ ಸಾಧ್ಯತೆ ಇದ್ದು, ವಿವೇಕ್ ಸಾಧನೆ ಬಗ್ಗೆ ಅವರ ಹುಟ್ಟೂರಿನ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಡಾ. ವಿವೇಕ್ ಮೂರ್ತಿ ಮತ್ತೆ ಮುನ್ನೆಲೆಗೆ; US ಕೊವಿಡ್ ನಿಯಂತ್ರಣ ಕಾರ್ಯಪಡೆಗೆ ನಿಯೋಜನೆ!

Published On - 2:58 pm, Tue, 10 November 20