AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಮಧ್ಯೆಯೂ ಚುನಾವಣೆ ನಡೆಸಿದ್ದ ಸೂಕಿ! ಮ್ಯಾನ್ಮಾರ್​ನಲ್ಲಿ ಫಲಿತಾಂಶಕ್ಕೆ ಕ್ಷಣಗಣನೆ..

ಮ್ಯಾನ್ಮಾರ್: ಇಡೀ ಜಗತ್ತೇ ಅಮೇರಿಕಾ ಚುನಾವಣೆಯ ಹಿಂದೆ ಬಿದ್ದಿದ್ದರೆ ಆಗ್ನೇಯ ಏಷ್ಯಾದ ಪುಟ್ಟ ದೇಶವೊಂದು ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯಲ್ಲಿ ಬ್ಯುಸಿಯಾಗಿದೆ. ಎರಡನೇ ಬಾರಿಗೆ ಪ್ರಜಾಪ್ರಭುತ್ವವಾದಿ ಸರ್ಕಾರವೊಂದು ಆಯ್ಕೆಯಾಗುವ ನಿರೀಕ್ಷೆಯಲ್ಲಿ ಮೈನ್ಮಾರ್ ದೇಶದ ಜನತೆ ಫಲಿತಾಂಶಕ್ಕೆ ಎದುರುನೋಡುತ್ತಿದೆ. ನಿನ್ನೆಯಷ್ಟೇ ಸಾರ್ವತ್ರಿಕ ಮತದಾನ ನಡೆಸಿದ ಮ್ಯಾನ್ಮಾರ್ ಪ್ರಜೆಗಳು ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ಅಂಗ್ ಸಾನ್ ಸೂಕಿ ಅವರ ನಿರಂತರ ಹೋರಾಟದ ನಂತರ 2015ರಲ್ಲಿ ಮಿಲಿಟರಿ ಆಡಳಿತದಿಂದ ಮ್ಯಾನ್ಮಾರ್ ಹೊರಬಂತು. 2015ರಲ್ಲಿ ಮೊದಲ ಬಾರಿಗೆ ಸೂಕಿ ನೇತೃತ್ವದ ನ್ಯಾಷನಲ್ ಲೀಗ್ […]

ಕೊರೊನಾ ಮಧ್ಯೆಯೂ ಚುನಾವಣೆ ನಡೆಸಿದ್ದ ಸೂಕಿ! ಮ್ಯಾನ್ಮಾರ್​ನಲ್ಲಿ ಫಲಿತಾಂಶಕ್ಕೆ ಕ್ಷಣಗಣನೆ..
Follow us
ಸಾಧು ಶ್ರೀನಾಥ್​
|

Updated on: Nov 10, 2020 | 12:52 PM

ಮ್ಯಾನ್ಮಾರ್: ಇಡೀ ಜಗತ್ತೇ ಅಮೇರಿಕಾ ಚುನಾವಣೆಯ ಹಿಂದೆ ಬಿದ್ದಿದ್ದರೆ ಆಗ್ನೇಯ ಏಷ್ಯಾದ ಪುಟ್ಟ ದೇಶವೊಂದು ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯಲ್ಲಿ ಬ್ಯುಸಿಯಾಗಿದೆ. ಎರಡನೇ ಬಾರಿಗೆ ಪ್ರಜಾಪ್ರಭುತ್ವವಾದಿ ಸರ್ಕಾರವೊಂದು ಆಯ್ಕೆಯಾಗುವ ನಿರೀಕ್ಷೆಯಲ್ಲಿ ಮೈನ್ಮಾರ್ ದೇಶದ ಜನತೆ ಫಲಿತಾಂಶಕ್ಕೆ ಎದುರುನೋಡುತ್ತಿದೆ.

ನಿನ್ನೆಯಷ್ಟೇ ಸಾರ್ವತ್ರಿಕ ಮತದಾನ ನಡೆಸಿದ ಮ್ಯಾನ್ಮಾರ್ ಪ್ರಜೆಗಳು ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ಅಂಗ್ ಸಾನ್ ಸೂಕಿ ಅವರ ನಿರಂತರ ಹೋರಾಟದ ನಂತರ 2015ರಲ್ಲಿ ಮಿಲಿಟರಿ ಆಡಳಿತದಿಂದ ಮ್ಯಾನ್ಮಾರ್ ಹೊರಬಂತು. 2015ರಲ್ಲಿ ಮೊದಲ ಬಾರಿಗೆ ಸೂಕಿ ನೇತೃತ್ವದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷ ಪ್ರಜಾಪ್ರಸತ್ತಾತ್ಮಕ ಸರ್ಕಾರ ರಚಿಸಿತು.

ಇದೀಗ ಮುಂದಿನ ಐದು ವರ್ಷಗಳ ಅವಧಿಗೆ ತಮ್ಮ ಪ್ರತಿನಿಧಿಗಳ ಆಯ್ಕೆಯ ಮ್ಯಾನ್ಮಾರ್ ಜನತೆ ನಿರತರಾಗಿದ್ದಾರೆ. ಎನ್ ಎಲ್ ಡಿ ಮತ್ತು ಮಿಲಿಟರಿ ಪಡೆಗಳ ಯುಎಸ್ಡಿಪಿಗಳ ತೀವ್ರ ಹಣಾಹಣಿಯ ನಡುವೆ ಅಂಗ್ ಸಾನ್ ಸೂಕಿ ಪಕ್ಷ ಗೆಲುವು ಸಾಧಿಸಿದ್ದಾಗಿ ಘೋಷಿಸಿದ್ದಾರೆ. ಚುನಾವಣಾ ಆಯೋಗ ಅಧಿಕೃತ ಘೋಷಿಸುವುದು ಮಾತ್ರ ಬಾಕಿ ಇದೆ.

ಮಿಲಿಟರಿ ಆಡಳಿತದ ಅಂತ್ಯ ಮಿಲಿಟರಿ ಅಡಳಿತ ಕೊನೆಗಾಣಿಸಿದ ಅಂಗ್ ಸಾನ್ ಸೂಕಿ ಅವರಿಗೆ ಜಗತ್ತಿನಾದ್ಯಂತ ಬೆಂಬಲ ವ್ಯಕ್ತವಾಗಿತ್ತು. ಸಂಸತ್ತಿನ ಒಟ್ಟು 440 ಸ್ಥಾನಗಳಲ್ಲಿ ಇಂದಿಗೂ 110 ಸ್ಥಾನಗಳನ್ನು ಮಿಲಿಟರಿ ಪಡೆಗಳಿಗೆ ಮೀಸಲಿಡಲಾಗಿದೆ.

ಉಳಿದ 330 ಸ್ಥಾನಗಳಿಗೆ ಮಾತ್ರ ಜನರು ಮತ ಚಲಾಯಿಸುವ ಮೂಲಕ ಪ್ರತಿನಿಧಿಗಳು ಆರಿಸಬಹುದು. 1947, 1974 ಮತ್ತು 2008ರಲ್ಲಿ ಇಲ್ಲಿ ಒಟ್ಟು 3 ಬಾರಿ ಸಂವಿಧಾನವನ್ನು ಜಾರಿಗೆ ತರಲಾಗಿತ್ತು ಎಂದರೆ ನೀವು ನಂಬಲೇಬೇಕು.

ಸಮಸ್ಯೆಗಳೇನು? ಇತ್ತೀಚೆಗಷ್ಟೇ ಭಾಗಶಃ ಪ್ರಜಾಪ್ರಭುತ್ವ ಬಂದಿರುವ ಕಾರಣ ದೇಶದಲ್ಲಿ ಮಿಲಿಟಲಿ ಮತ್ತು ಪ್ರಜಾಪ್ರಭುತ್ವವಾದಿಗಳ ನಡುವೆ ಶೀತಲ ಸಮರ ನಡೆಯುತ್ತಲೇ ಇರುತ್ತದೆ. ಜೊತೆಗೆ 1.1 ಕೋಟಿ ರೋಹಿಂಗ್ಯಾ ಮುಸ್ಲಿಮರ ಸಮಸ್ಯೆ ಇಡೀ ಜಗತ್ತಿನ ಗಮನ ಸೆಳೆದಿತ್ತು.ಮ್ಯಾನ್ಮಾರ್ ರಖಿನೆ ಎಂಬ ರಾಜ್ಯದಲ್ಲಿ ವಾಸಿಸುವ ಇವರು ಮೈನ್ಮಾರಿಗೆ ಸೇರಿದವರಲ್ಲ ಎಂಬುದು ಅಲ್ಲಿನ ಸರ್ಕಾರದ ವಾದ. 1948 ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಮ್ಯಾನ್ಮಾರ್ ನಿಟ್ಟುಸಿರು ಬಿಟ್ಟರೆ, ರೋಹಿಂಗ್ಯಾ ಮುಸ್ಲಿಮರ ಸಂಕಷ್ಟ ಮಾತ್ರ ಅಲ್ಲಿಂದಲೇ ಆರಂಭವಾಯಿತು. ಪಕ್ಕದ ಬಾಂಗ್ಲಾದೇಶದಿಂದ ಅಕ್ರಮ ವಲಸೆ ಬಂದವರೆಂಬ ಕಾರಣ ನೀಡಿ ಮ್ಯಾನ್ಮಾರ್ ಅವರಿಗೆ ಪೌರತ್ವ ನೀಡಲಿಲ್ಲ.

ಕೊರೊನಾ ಕಾಲದಲ್ಲಿ ಚುನಾವಣೆ; ಸರ್ಕಾರದ ನಡೆಗೆ ಟೀಕೆ ಪ್ರವಾಸೋದ್ಯಮ ಮತ್ತು ಗಾರ್ಮೆಂಟ್ಸ್ ಉದ್ದಿಮೆಗಳೇ ಪ್ರಮುಖ ಆದಾಯದ ಮೂಲವಾಗಿರುವ ಮ್ಯಾನ್ಮಾರ್ ಅಥವಾ ಬರ್ಮಾ ದೇಶಕ್ಕೆ ಕೊರೊನಾ ತುಂಬಾ ಹೊಡೆತ ನೀಡಿದೆ. ಕೋವಿಡ್ ಕಾರಣ ಬೃಹತ್ ಪ್ರಚಾರ ರ್ಯಾಲಿಗಳನ್ನು ನಿಷೇಧಿಸಲಾಗಿತ್ತು.

ಕೊರೊನಾ ಕಾಲದಲ್ಲಿಯೇ ಚುನಾವಣೆ ನಡೆಸಿದ ಅಂಗ್ ಸಾನ್ ಸೂಕಿ ನಿರ್ಧಾರವನ್ನು ಮಿಲಿಟರಿ ಪಡೆಗಳು, ವಿರೋಧ ಪಕ್ಷಗಳು ಟೀಕಿಸಿದವು. ಇಲ್ಲಿಯವರೆಗೆ ಮ್ಯಾನ್ಮಾರ್ ನ 50 ಸಾವಿರಕ್ಕೂ ಹೆಚ್ಚು ಮಂದಿ ಕೋವಿಡ್ ಗೆ ತುತ್ತಾಗಿದ್ದಾರೆ.