‘ಕೊಹ್ಲಿ ನೀವ್ಯಾರು ಗೊತ್ತಿಲ್ಲ ಎಂದು ಹೊರಟೋದ್ರು, ಈಗ ನನ್ನ ಸಾಂಗ್ ಆದರೂ ಇಷ್ಟ ಆಯ್ತಲ್ಲ’; ಸಿಂಬು
ವಿರಾಟ್ ಕೊಹ್ಲಿ ಭೇಟಿಯಲ್ಲಿ ಸಿಂಬು ಅವರನ್ನು ಗುರುತಿಸದಿರುವುದು ಅಚ್ಚರಿ ಮೂಡಿಸಿತು. ಆದರೆ, ಕೊಹ್ಲಿ ಅವರಿಗೆ ಸಿಂಬು ನಟನೆಯ "ನಾ ಸಿಂಗಂ ದಾನ್" ಹಾಡು ಇಷ್ಟವಾಯಿತು ಎಂದು ತಿಳಿದು ಸಿಂಬುಗೆ ಸಂತೋಷವಾಗಿದೆ. ಕೊಹ್ಲಿಯ ಪ್ರತಿಕ್ರಿಯೆಯ ಬಗ್ಗೆ ಸಿಂಬು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ .

ನಟ ಸಿಂಬು (Simbu) ಅವರು ಕಾಲಿವುಡ್ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರಿಗೆ ಅಲ್ಲಿ ಭರ್ಜರಿ ಬೇಡಿಕೆ ಇದೆ. ದಕ್ಷಿಣ ಭಾರತದಲ್ಲಿ ಅವರ ಪರಿಚಯ ಅನೇಕರಿಗೆ ಇದೆ. ಬಾಲಿವುಡ್ನಲ್ಲಿ ಕೆಲವರಿಗೆ ಇವರ ಪರಿಚಯ ಇದ್ದಿರಬಹುದು. ಆದರೆ, ಕ್ರಿಕೆಟ್ ಜಗತ್ತಿನಲ್ಲಿರೋರಿಗೆ ಅವರು ಅಷ್ಟಾಗಿ ಗೊತ್ತಿರಲಿಕ್ಕಿಲ್ಲ. ಈ ಬಗ್ಗೆ ನಟ ಸಿಂಬು ಮಾತನಾಡಿದ್ದಾರೆ. ವಿರಾಟ್ ಕೊಹ್ಲಿಗೆ ನಾನ್ಯಾರು ಅಂತ ಗೊತ್ತಿಲ್ಲ ಎಂದಿದ್ದಾರೆ ಸಿಂಬು. ಆದರೆ, ಸಿಂಬು ನಟನೆಯ ಸಿನಿಮಾದ ಹಾಡು ಕೊಹ್ಲಿಗೆ ಇಷ್ಟ ಆಗಿದೆ ಎನ್ನುವ ಖುಷಿ ಅವರಿಗೆ ಇದೆ.
ಒಮ್ಮೆ ಕೊಹ್ಲಿ ಭೇಟಿ ಮಾಡುವ ಅವಕಾಶ ಸಿಂಬುಗೆ ಸಿಕ್ಕಿತ್ತಂತೆ. ಅವರು ಸ್ಟೈಲ್ ಆಗಿ ಹೋಗಿ, ‘ನಾನು ಸಿಂಬು’ ಎಂದು ಪರಿಚಯ ಮಾಡಿಕೊಂಡರು. ವಿರಾಟ್ ರಿಯಾಕ್ಷನ್ ಸಿಂಬುಗೆ ಶಾಕ್ ತರಿಸಿತು. ‘ನನಗೆ ಗೊತ್ತಿಲ್ಲ ಎಂದು ಅವರು ಹೋಗೇ ಬಿಟ್ಟರು. ಇದು ನನಗೆ ಬೇಕಿತ್ತಾ ಎಂದುಕೊಂಡೆ. ಒಂದು ದಿನ ನಾನು ಯಾರು ಎಂಬುದು ನಿಮಗೆ ಗೊತ್ತಾಗುತ್ತದೆ ಎಂದು ಮನಸ್ಸಿನಲ್ಲೇ ಅಂದುಕೊಂಡೆ’ ಎಂದಿದ್ದಾರೆ ಸಿಂಬು.
View this post on Instagram
‘ಇದಾದ ಬಳಿಕ ಆರ್ಸಿಬಿ ಪೇಜ್ನಲ್ಲಿ ಹಾಕಿದ ವಿರಾಟ್ ಸಂದರ್ಶನ ನೋಡಿದೆ. ಅದರಲ್ಲಿ ಅವರು ನನ್ನ ಸಿನಿಮಾ ಸಾಂಗ್ ಇಷ್ಟಪಟ್ಟಿದ್ದಾರೆ ಎಂದು ತಿಳಿಯಿತು. ಅದೇ ಸಕ್ಸಸ್ ಎಂದುಕೊಂಡೆ. ಈಗಲೂ ಅವರಿಗೆ ನನ್ನ ಪರಿಚಯ ಇದೆಯೋ ತಿಳಿದಿಲ್ಲ’ ಎಂದಿದ್ದಾರೆ ಸಿಂಬು.
ಇದನ್ನೂ ಓದಿ: ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ಸಿಂಬು ನಟಿಸ್ತಾರಾ? ಈ ಸುದ್ದಿ ಹಬ್ಬಲು ಕಾರಣ ಇಲ್ಲಿದೆ..
ಇತ್ತೀಚೆಗೆ ಆರ್ಸಿಬಿ ಸಂದರ್ಶನದಲ್ಲಿ ಮಾತನಾಡಿದ್ದ ವಿರಾಟ್ ಕೊಹ್ಲಿ ಅವರು, ‘ನಾ ಸಿಂಗಂ ದಾನ್’ ಚಿತ್ರದ ಹಾಡು ನನಗೆ ಇಷ್ಟ ಎಂದು ಹೇಳಿದ್ದರು. ಇದಾದ ಬಳಿಕ ಸಾಂಗ್ ಸಾಕಷ್ಟು ಮತ್ತಷ್ಟು ವೈರಲ್ ಆಗಿದೆ. ಕನ್ನಡದಲ್ಲಿ ಮೂಡಿ ಬಂದ ‘ಮಫ್ತಿ’ ಚಿತ್ರದ ತಮಿಳ್ ರಿಮೇಕ್ ಆಗಿ ಈ ಸಿನಿಮಾ ಮೂಡಿ ಬಂದಿತ್ತು. ಕನ್ನಡದಲ್ಲಿ ‘ರಕ್ಷಕನೂ ನೀನೇನಾ..’ ಹಾಡಿದೆ. ಆ ಸಿಚ್ಯುವೇಶನ್ಗೆ ತಮಿಳಿನಲ್ಲಿ ಈ ಹಾಡು ಬಳಕೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:55 am, Sat, 24 May 25